ಹಳಿಯಾಳ : ಆಸ್ಪತ್ರೆಗೆ ಚಿಕಿತ್ಸೆಗಾಗಿ ರೋಗಿಗಳು ಬರೋದು ಮಾಮೂಲು. ಆದ್ರೆ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಮಂಗವೊಂದು ವೈದ್ಯರ ಬಳಿ ಚಿಕಿತ್ಸೆಗಾಗಿ ಬಂದಿತ್ತು. ಅರೇ ಹೌದೇ ಅಂತೀರಾ?
ಹೌದು.. ಇದು ಕಾಕತಾಳಿಯವಾದ್ರೂ ಅದರ ವರ್ತನೆ ಮಾತ್ರ ಹಾಗಿತ್ತು. ಖುದ್ದು ನೊಂದಣಿ ಮೇಜಿನ ಬಳಿ ನೊಂದಣಿ ಮಾಡಿಸಲು ನಿಂತಿದ್ದ ಜನರ ಮುಂದೆ ಬಂದು ಅದೂ ಕೂಡ ನಿಂತಿತು, ನಂತರ ಸೀದಾ ವೈದ್ಯರ ಕೊಠಡಿ ಬಳಿ ಹೋಗಿ ಜನರು ಕಾಯುವಂತೆ ಅದೂ ಕೂಡ ಕಾಯತಲಿತ್ತು. ಇದನ್ನು ನೋಡಿದ ಜನರು ಸ್ವಲ್ಪ ಕುಷಿ ಪಟ್ರೆ ಇನ್ನು ಕೆಲವರು ಭಯ ಪಟ್ಟರು. ನಂತರ ಮಂಗವನ್ನು ಅಲ್ಲಿಂದ ಓಡಿಸಲಾಯಿತು. ಆದ್ರೆ ಕೆಲವು ಸಮಯ ಇದರ ವರ್ತನೆ ಜನರಲ್ಲಿ ಖುಷಿ ಕೊಟ್ಟಿದ್ದಂತೂ ಸುಳ್ಳಲ್ಲ.