ಕಾರವಾರ:- ಅಕಾಡೆಮಿ ನೇಮಕಾತಿಯಲ್ಲಿ ಅಯೋಗ್ಯರನ್ನೇ ನೇಮಕ ಮಾಡಲಾಗಿದೆ ಎಂಬ ವಿರೋಧ ಪಕ್ಷದ ಹೇಳಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಕತ್ತೆಗೆ ಕಸ್ತೂರಿ ವಾಸನೆ ಗೊತ್ತಾಗುವುದಿಲ್ಲ,ದೇಶದ ವಿರುದ್ಧ ಮಾತನಾಡುವ ತುಕಡೆ ಗ್ಯಾಂಗಿನವರಿಗೆ ನಾವು ಬೆಂಬಲ ಕೊಟ್ಟಿಲ್ಲ,ಕಾಂಗ್ರೆಸ್ ಅಧಿಕಾರಕ್ಕೆ ಇದ್ದಾಗ ಕಾಶ್ಮೀರಿ ಪ್ರತ್ಯೇಕ ಮಾಡಬೇಕು ಅಂತಾ ಬಯಸುವವರಿಗೆ ಬೆಂಬಲ ಮಾಡುವ ಕೆಲಸ ಮಾಡುತ್ತಿತ್ತು,ನಾವು ಅಂತಹ ಕೆಲಸ ಮಾಡಿಲ್ಲ ಯೋಗ್ಯರ ನೇಮಕ ಮಾಡಿದ್ದೆವೆ .
ನಾವು ಆಯ್ಕೆ ಮಾಡಿರುವವರು ಉಂಡು ಮನೆಗೆ ದ್ರೋಹ ಮಾಡುವವರಲ್ಲ ಎಂದರು.
ಇನ್ನು ಮಹದಾಯಿ ಹೋರಾಟದಲ್ಲಿ ನಾವು ರೈತರ ನಿರ್ಲಕ್ಷ ಮಾಡುವ ಪ್ರಶ್ನೆ ಇಲ್ಲ,ನಾವು ಮಹದಾಯಿ ಹೋರಾಟದ ಭಾವನೆಗಳ ಜೊತೆ ಇದ್ದೇವೆ,ಕಾನೂನಾತ್ಮಕ ತೊಡಕನ್ನು ಬಗೆಹರಿಸುವ ಕೆಲಸ ಮಾಡುತ್ತೇವೆ,ರಾಜಕೀಯ ಹೋರಾಟ ಬೇರೆ ರೈತರ ಹೋರಾಟ ಬೇರೆ,ರೈತರ ಹೋರಾಟದ ಜೊತೆ ನಾವಿದ್ದೇವೆ ಎಂದರು.
ಸಿದ್ದರಾಮಯ್ಯರಿಗೆ ಕರ್ಚು ನಾವು ಕೊಡುತ್ತೇವೆ-ಇತಿಹಾಸ ತಿಳಿದುಕೊಂಡು ಬರಲಿ!
ಸಿದ್ದರಾಮಯ್ಯನವರು ಸ್ವತಂತ್ರ ಹೋರಾಟಗಾರರಿಗೆ ಅಗೌರವ ತರುವ ಮಾತನಾಡಿದ್ದಾರೆ,ಅವರಿಗೆ ಇತಿಹಾಸದ ಅರಿವಿಲ್ಲ,ಕ್ರಾಂತಿ ಕಾರಿ ಹೋರಾಟಗಾರರನ್ನ ಅಪಮಾನ ಮಾಡುವಂತಹದ್ದು ರಾಜ್ಯದ ಮುಖ್ಯ ಮಂತ್ರಿ ಆಗಿದ್ದವರಿಗೆ ಶೋಭೆ ತರುವಂತದ್ದಲ್ಲ,ಸಿದ್ದರಾನಯ್ಯನವರಿಗೆ ಕರ್ಚು ನಾವು ಕೊಡುತ್ತೇವೆ ಸೆಲ್ಯುಲರ್ ಜೈಲಿಗೆ ಹೋಗಿನೋಡಿಕೊಂಡು ಬನ್ನಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೇಳಿಕೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ ರವಿ ತಿರುಗೇಟು ನೀಡಿದ್ದಾರೆ.
ಇಂದು ಕಾರವಾರದಲ್ಲಿ ಮಾತನಾಡಿದ ಅವರು ಸಿದ್ದರಾಮಯ್ಯ ನವರು ಸೆಲ್ಯುಲರ್ ಜೈಲಿಗೆ ಹೋಗಿ ಅವತ್ತಿನ ಕರುಣಾಜನಕ ಕಥೆಯನ್ನು ಕಣ್ತುಂಬಿಸಿಕೊಂಡರೆ ಸ್ವತಂತ್ರ ಹೋರಾಟಗಾರರಿಗೆ ಕ್ರಾಂತಿ ಕಾರಿಗಳಿಗೆ ಅಪಮಾನ ಮಾಡುವ ಮನೋಭಾವನೆ ಬದಲಾಗುತ್ತದೆ,
ಅಂದು ತನ್ನನ್ನು ವೈಭವೀಕರಿಸಿಕೊಳ್ಳುವ ಕೆಲಸವನ್ನು ಕಾಂಗ್ರೆಸ್ ಮಾಡಿತು,ಕ್ರಾಂತ್ರಿಕಾರಿಗಳ ಸಾಧನೆಯನ್ನು ಮರೆ ಮಾಜಿತು.
ಇಂದು ಅಪಮಾನ ಮಾಡುವ ಕೆಲಸ ಮಾಡುತ್ತಿದೆ.ವೀರ ಸಾವರ್ಕರ್ ಗೆ ಯಾವೂತ್ತೋ ಭಾರತ ರತ್ನ ಸಿಗಬೇಕಿತ್ತು ಆ ಅನ್ಯಾಯ ಸರಿಪಡಿಸೋ ಕೆಲಸವನ್ನು ನರೇಂದ್ರ ಮೋದಿ ಮಾಡುತ್ತಾರೆ ಎಂಬ ನಂಬಿಕೆ ಇದೆ ,ಭಾರತ ರತ್ನ ಪಡೆಯಲು ಕೇವಲ ನೆಹರು ಕುಟುಂಬ ಯೋಗ್ಯರು ಎಂದು ಕಾಂಗ್ರೆಸ್ ಭಾವಿಸಿದೆ,ಯಾರ್ಯಾರಿಗೆ ಸ್ವತಂತ್ರ ಹೋರಾಟದಲ್ಲಿ ತಮ್ಮದೇ ಆದ ಯೋಗದಾನ ಕೊಟ್ಟಿದ್ದಾರೆ ಅವರಿಗೆ ಭಾರತ ರತ್ನ ಕೊಡಬೇಕು ಎಂದು ಬಿಜೆಪಿ ಭಾವಿಸುತ್ತೆ ಎಂದರು.