ಮುಂಡಗೋಡು: ಧಾರವಾಡ ದಲ್ಲಿ ಅಧಿಕ ಮಳೆಯಿಂದ ಸಿಡ್ಲಗುಂಡಿಯಲ್ಲಿ ಕೊಚ್ಚಿಹೋದ ತಾತ್ಕಾಲಿಕ ರಸ್ತೆ,ಸೇತುವೆ!

ಕಾರವಾರ :- ಹುಬ್ಬಳ್ಳಿ -ಧಾರವಾಡ ದಲ್ಲಿ ಅಧಿಕ ಮಳೆ ಹಿನ್ನೆಲೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡು ತಾಲೂಕಿನ ಯಲ್ಲಾಪುರ ಮುಂಡಗೋಡು ಮಾರ್ಗದ ಸಿಡ್ಲಗುಂಡಿ ಬಳಿ ತಾತ್ಕಾಲಿಕವಾಗಿ ನಿರ್ಮಿಸಿದ್ದ ಸೇತುವೆ ಮೇಲೆ ನೀರು ಹರಿದು ತಾತ್ಕಾಲಿಕ ಸೇತುವೆ ಕೊಚ್ಚಿಹೋಗಿದೆ. ಇದರಿಂದಾಗಿ ಮುಂಡಗೋಡು -ಯಲ್ಲಾಪುರ -ಸಿಡಲಗುಂಡಿ ಸಂಚಾರ ಬಂದ್ ಆದ ಘಟನೆ ನಡೆದಿದೆ.

ಈ ಹಿಂದೆ ಅಧಿಕ ಮಳೆಯಿಂದ ಸಿಡ್ಲಗುಂಡಿ ಹೊಳೆ ಸೇತುವೆ ಕೊಚ್ಚಿ ಹೋಗಿದ್ದು ತಾತ್ಕಾಲಿಕ ವಾಗಿ ಸರಿ ಪಡಿಸಲಾಗಿತ್ತು. ಆದರೇ ನಿನ್ನೆಯಿಂದ ಹುಬ್ಬಳ್ಳಿ-ಧಾರವಾಡದಲ್ಲಿ ಅಧಿಕ ಮಳೆ ಹಿನ್ನೆಲೆಯಲ್ಲಿ ಬೇಡ್ತಿ ನದಿಗೆ ಹೆಚ್ಚಿನ ನೀರು ಹರಿದು ಬಂದಿದ್ದು ಇದರಿಂದಾಗಿ ತಾತ್ಕಾಲಿಕ ಸೇತುವೆ ಸಹ ಕೊಚ್ಚಿಹೋಗಿ ಸಂಚಾರ ಅಸ್ಥವ್ಯಸ್ಥ ವಾಗಿದೆ.

About the author

Adyot

Leave a Comment