ಆಸ್ಟ್ರೇಲಿಯಾ : ಆಸ್ಟ್ರೇಲಿಯಾದಲ್ಲಿ ವರುಣನ ಸಿಂಚನವಾಗುತ್ತಿದ್ದು, ಹಲವು ದಿನಗಳಿಂದ ಹೊತ್ತಿ ಉರಿಯುತ್ತಿರೋ ಕಾಡ್ಗಿಚ್ಚು ನಿಯಂತ್ರಣಕ್ಕೆ ಬರುತ್ತಿದೆ. ಆಸ್ಟ್ರೇಲಿಯಾದಲ್ಲಿ ಸತತವಾಗಿ ಮಳೆಯಾಗುತ್ತಿರೋದು ಅಲ್ಲಿನ ಜನ ಹಾಗೂ ಪ್ರಾಣಿಗಳ ಮೊಗದಲ್ಲಿ ಸಂತಸ ಉಂಟುಮಾಡಿದೆ.
ಕಳೆದ ಕೆಲವು ದಿನಗಳಿಂದ ಆಸ್ಟ್ರೇಲಿಯಾದಲ್ಲಿ ಕಾಡ್ಗಿಚ್ಚು ಆವರಿಸಿದ್ದು, ಕಾಡಿನಲ್ಲಿರೋ ಹಲವಾರು ಪ್ರಾಣಿಗಳು ಬೆಂಕಿಗೆ ಅಹುತಿಯಾಗಿವೆ. ಬೆಂಕಿ ನಂದಿಸಲು ಎಷ್ಟೇ ಹರಸಾಹಸ ಪಟ್ಟರೂ ಕೂಡ ಅದು ಮತ್ತಷ್ಟು ಅರಣ್ಯ ಪ್ರದೇಶಗಳನ್ನ ವ್ಯಾಪಿಸಿತ್ತು. ಜನ ತಮ್ಮ ಪ್ರಾಣದ ಹಂಗು ತೊರೆದು ಮೂಕ ಜೀವಿಗಳ ರಕ್ಷಣೆಗೆ ಮುಂದಾಗಿದ್ದರು. ಆ ಮೂಕ ಪ್ರಾಣಿಗಳ ರೋಧನೆಯ ಕಣ್ಣೀರಿಗೆ ವರುಣ ಕರಗಿ ನೀರಾಗೋ ಮೂಲಕ ಇಳೆಗೆ ತಂಪಿನ ಮಳೆಯ ಸಿಂಚನವನ್ನ ಸುರಿಸಿದ್ದಾನೆ.
ಇದನ್ನು ನೋಡಿದ ಪ್ರಾಣಿಗಳು ವರುಣ ದೇವನೆಡೆಗೆ ಕೃತಜ್ಞತೆ ಸಲ್ಲಿಸೋ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಪ್ರಾಣಿಗಳ ಮೂಕ ರೋಧನೆ ಹಾಗೂ ಕೃತಜ್ಞತಾ ಭಾವ ಜನರ ಮನ ಸೆಳೆದಿದೆ.