ಕಾರವಾರ:- ಲೋಕಲ್ ಟ್ರೈನ್ ಹತ್ತಿ ಬಂದ ಸಮುದಾಯ ನಮ್ಮದಲ್ಲ ಆ ಪಾರ್ಟಿಯಲ್ಲಿ ಇರುವುದು ಅಲ್ಲಿ ಸೀಟು ಕೊಟ್ಟಿಲ್ಲ ಎಂದರೆ ಈ ಪಾರ್ಟಿಗೆ ಬರುವುದು,ಇತ್ತೀಚೆಗೆ ಶುರಯವಾಗಿ ಹೋಗಿದೆ,ಎಲ್ಲಾ ಕಡೆ ಹೋದರೂ ಒಂದೇ ಮುಖ ನೋಡುತಿದ್ದೇವೆ,ಯಾವ ಟ್ರೈನ್ ಆದರೂ ಸರಿ ಅದು ಶತಾಬ್ಧಿ ಎಕ್ಸ್‌ಪ್ರೆಸ್ ಆದರೂ ಸರಿ ಲೋಕಲ್ ಟ್ರೈನ್ ಆದರೂ ಸರಿ ಈ ತರ ಟ್ರೈನ್ ಹತ್ತಿ ಬಂದಿರುವ ಸಮುದಾಯ ನಮ್ಮದಲ್ಲ ಎಂದು ಅನರ್ಹ ಶಾಸಕರು ಹಾಗೂ ಪಕ್ಷಾಂತರ ಮಾಡುವ ರಾಜಕೀಯ ಮುಖಂಡರಿಗೆ ಮಾಜಿ ಕೇಂದ್ರ ಸಚಿವ ಹಾಗೂ ಉತ್ತರ ಕನ್ನಡ ಜಿಲ್ಲೆಯ ಸಂಸದ ಅನಂತಕುಮಾರ್ ಹೆಗಡೆ ಪಕ್ಷಾಂತರಿಗಳಿಗೆ ಟಾಂಗ್ ನೀಡಿದರು.
ಇಂದು ಕಾರವಾರದ ಆಶ್ರಮ ಮಠ ರಸ್ತೆಯಲ್ಲಿನ ಹಳದಿಪುರಕರ್ ಎಂಬುವವರ ಮನೆಯಲ್ಲಿ ನಡೆದ ಗಾಂಧಿ ಸಂಕಲ್ಪ ಯಾತ್ರೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ದೇಶದ ಆರ್ಥಿಕತೆ ಬಿದ್ದು ಹೋಗಿದೆ ಎಂದು ಸೋಗಲಾಡಿ ಆರ್ಥಿಕ ತಜ್ಞರ ಜಿಜ್ಞಾಸೆ ಶುರುವಾಗಿದೆ,ಸೋಗಲಾಡಿ ವಿಚಾರವಾದಿಗಳು,ಆರ್ಥಿಕ ತಜ್ಞರು ಭಾಷಣ ಬಿಗಿಯುತಿದ್ದಾರೆ ಎಂದು ಮೋದಿಯನ್ನು ಟೀಕಿಸುವವರ ವಿರುದ್ಧ ಕಿಡಿ ಕಾರಿದ್ರು.
ಇನ್ನು ನಾವು ರಾಜಕೀಯಕ್ಕೆ ಬರಬೇಕು ಎಂ.ಪಿ,ಎಮ್.ಎಲ್.ಎ ಆಗಬೇಕು ,ನಮ್ಮ ಸರ್ಕಾರ ಬರಬೇಕು ಎಂದು ಪಾರ್ಟಿ ಕಟ್ಟಿಲ್ಲ,ಈ ಪಕ್ಷಕ್ಕೊಂದು ವಿಚಾರತೆ ಇದೆ ಎಂದರು.
ಕಾರ್ಯಕ್ರಮದಲ್ಲಿ ಕಾರವಾರದ ಶಾಸಕಿ ರೂಪಾಲಿ ನಾಯ್ಕ , ಮಾಜಿ ಶಾಸಕ ಸುನೀಲ್ ಹೆಗಡೆ ಜಿಲ್ಲಾ ಬಿಜೆಪಿ ಅಧ್ಯಕ್ಷರು,ತಾಲೂಕು ಅಧ್ಯಕ್ಷರು ವಿವಿಧ ಪದಾಧಿಕಾರಿಗಳು ಹಾಜುರಿದ್ದರು.