ಆದ್ಯೋತ ನ್ಯೂಸ್ ಡೆಸ್ಕ್: ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಹಾರ್ಸಿಕಟ್ಟಾ ಸಮೀಪದ ಕರ್ಕಿಸವಲ ಮಟ್ಟೆಮನೆಯ ಮಂಜುನಾಥ ತ್ರ್ಯಂಬಕ ಹೆಗಡೆಯವರ ತೋಟದಲ್ಲಿ ಶನಿವಾರ ಕಾಣಿಸಿಕೊಂಡ 11 ಅಡಿ ಉದ್ದದ ಕಾಳಿಂಗಸರ್ಪವನ್ನು ಶಿರಸಿಯ ಉರಗತಜ್ಞ ಮನು ಎನ್ನುವವರು ಅರಣ್ಯ ಇಲಾಖೆಯವರ ಸಹಕಾರದೊಂದಿಗೆ ಹಿಡಿದರು.
ನಂತರ ಕಾಳಿಂಗ ಸರ್ಪವನ್ನು ಮಾವಿನಗುಂಡಿ ಸಮೀಪದ ಕತ್ಲೆಕಾನ ಕಾಡಿಗೆ ಬಿಡಲಾಯಿತು. ಉಪವಲಯ ಅರಣ್ಯಾಧಿಕಾರಿ ವಿನಾಯಕ ಮಡಿವಾಳ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
👌👍