ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯಲ್ಲಿ ಕೊರೊನಾ ಆರ್ಭಟ ಮುಂದುವರೆದಿದ್ದು, 20 ಜನರ ಬಿಡುಗಡೆಯ ನಡುವೆಯೂ ಇಂದು ಜಿಲ್ಲೆಯ ಇಬ್ಬರಲ್ಲಿ ಕೊರೊನಾ ಸೋಂಕು ಬಂದಿರುವುದು ಪತ್ತೆಯಾಗಿದೆ.
ಜಿಲ್ಲೆಯ ಕರಾವಳಿ ತಾಲೂಕು ಹೊನ್ನಾವರದಲ್ಲಿ ಒಬ್ಬರಿಗೆ ಹಾಗೂ ಮಲೆನಾಡು ತಾಲೂಕಿನ ಯಲ್ಲಾಪುರದ ಒಬ್ಬರಲ್ಲಿ ಪ್ರಕರಣ ಪತ್ತೆಯಾಗಿದೆ. ಇದರಲ್ಲಿ ಹೊನ್ನಾವರದಲ್ಲಿ ಮುಂಬೈನಿಂದ ಬಂದು ಸೋಂಕು ಬಂದಿದ್ದ ವ್ಯಕ್ತಿಯ ಪತ್ನಿಯಲ್ಲಿ ಸೋಂಕು ಕಾಣಿಸಿಕೊಂಡಿದ್ರೆ, ಯಲ್ಲಾಪುರದಲ್ಲಿ ದೆಹಲಿಯಿಂದ ಬಂದ ಯುವಕನಲ್ಲಿ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಜಿಲ್ಲೆಯ ಪ್ರಕರಣಗಳ ಸಂಖ್ಯೆ 66ಕ್ಕೆ ಏರಿಕೆಯಾಗಿದೆ. ಇದರಲ್ಲಿ ಇಂದು ಬಿಡುಗಡೆಯಾದ 20 ಜನರು ಸೇರಿ ಒಟ್ಟೂ 32 ಸೋಂಕಿತರು ಗುಣಮುಖರಾಗಿದ್ದು, 34 ಸಕ್ರೀಯ ಪ್ರಕರಣಗಳು ಉಳಿದುಕೊಂಡಿವೆ. ರಾಜ್ಯದಲ್ಲಿ ಇಂದು ದಾಖಲೆಯ ಬರೋಬ್ಬರಿ 196 ಪ್ರಕರಣಗಳು ದಾಖಲಾಗಿವೆ.
ಸಕಾಲಿಕ ಸುದ್ದಿ