ಜಿಲ್ಲೆಗೂ ಆವರಿಸಿದ ಕೊರೊನಾ : ಭಟ್ಕಳದಲ್ಲಿ 2 ಪ್ರಕರಣ

ಆದ್ಯೋತ್ ನ್ಯೂಸ್ ಡೆಸ್ಕ್ : ಕೊರೊನಾ ವೈರಸ್ ದೇಶದೆಲ್ಲೆಡೆ ಕ್ಷಿಪ್ರ ಗತಿಯಲ್ಲಿ ಹರಡುತ್ತಿದ್ದು, ಉತ್ತರ ಕನ್ನಡ ಜಿಲ್ಲೆಗೂ ಕಾಲಿಟ್ಟಿದೆ. ಜಿಲ್ಲೆಯ ಭಟ್ಕಳದಲ್ಲಿ 2 ಪ್ರಕರಣ ಕಾಣಿಸಿಕೊಂಡಿದೆ.


ಕೊರೊನಾ ಹರಡುತ್ತಿರುವುದರಿಂದ ಇಡೀ ದೇಶಕ್ಕೆ ಲಾಕ್ ಡೌನ್ ಘೋಷಿಸಲಾಗಿದೆ. ನಿನ್ನೆಯೇ ಭಟ್ಕಳದಲ್ಲಿ ಲಾಕ್ ಡೌನ್ ಘೋಷಣೆ ಆಗಿತ್ತು. ಆದ್ರೆ ಇಂದು ಒಂದೇ ದಿನ ಇಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು, ಜಿಲ್ಲೆಯ ಜನರನ್ನು ಆತಂಕಕ್ಕೀಡು ಮಾಡಿದೆ. ಭಟ್ಕಳದ 65 ವಯಸ್ಸಿನ ಹಾಗೂ 40 ವರ್ಷ ವಯಸ್ಸಿನ ಇಬ್ಬರಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಪೊಲೀಸರಿಗೆ ಕಠಿಣ ಕ್ರಮ ಕೈಗೊಳ್ಳೋದಕ್ಕೆ ಸೂಚಿಸಲಾಗಿದೆ. ದಯವಿಟ್ಟು ಜನರು ಮನೆಯಿಂದ ಹೊರಬರಬೇಡಿ.

ಮನೆಯಲ್ಲೇ ಇರೋಣ..
ಕೊರೊನಾ ತೊಲಗಿಸೋಣ..
ದೇಶವನ್ನು ಉಳಿಸೋಣ..
ಇದು ಆದ್ಯೋತ್ ನ್ಯೂಸ್ ಜಾಗೃತಿ ಅಭಿಯಾನ.

About the author

Adyot

Leave a Comment