ರಾಜ್ಯದಲ್ಲಿ ಒಂದೇ ದಿನ 53 ಕೊರೊನಾ ಪ್ರಕರಣ ದಾಖಲು

ಆದ್ಯೋತ್ ಸುದ್ದಿ ನಿಧಿ : ದೇಶಾದ್ಯಂತ ಕೊರೊನಾ ರಣಕೇಕೆ ಮುಂದುವರೆದಿದೆ. ರಾಜ್ಯದಲ್ಲಿ ಇಂದು ಅತಿ ಹೆಚ್ಚು ದಾಖಲೆಯ 53 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಹಸಿರು ವಲಯದ ಜಿಲ್ಲೆಗಳೆಲ್ಲಾ ಕೊರೊನಾ ಹಾಟ್ ಸ್ಪಾಟ್ ಆಗಿ ರೂಪುಗೊಳ್ಳುತ್ತಿವೆ. ಹಸಿರು ವಲಯದ ಶಿವಮೊಗ್ಗದಲ್ಲಿ ಒಂದೇ ದಿನ 8 ಪ್ರಕರಣ ಕಾಣಿಸಿಕೊಳ್ಳುವುದರೊಂದಿಗೆ ಕೊರೊನಾ ಪೀಡಿತ ಜಿಲ್ಲೆಗಳ ಸಾಲಿಗೆ ಸೇರಿಕೊಂಡಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಕೂಡಾ 7 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿದೆ. ಜಿಲ್ಲೆಯ ಹಾಟ್ ಸ್ಪಾಟ್ ಭಟ್ಕಳದಲ್ಲೇ ಈ 7 ಪ್ರಕರಣಗಳು ಕಾಣಿಸಿಕೊಂಡಿವೆ. ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಲ್ಲಿ 20 ಪ್ರಕರಣಗಳು ದಾಖಲಾಗಿದ್ದವು. ಇದರೊಂದಿಗೆ ಜಿಲ್ಲೆಯಲ್ಲಿ ಕೊರೊನಾ ಪಾಸಿಟಿವ್ ಹೆಚ್ಚಳವಾಗಿದ್ದು, ಪ್ರಕರಣಗಳು 39ಕ್ಕೇರಿವೆ. ಇದರಲ್ಲಿ 11 ಜನ ಗುಣಮುಖರಾಗಿದ್ದು, 28 ಆಕ್ಟಿವ್ ಪ್ರಕರಣಗಳು ಜಿಲ್ಲೆಯಲ್ಲಿವೆ.

About the author

Adyot

Leave a Comment