ಸಿದ್ದಾಪುರ: ಕೊಟ್ಟಿಗೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಏಳು ಜಾನುವಾರುಗಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾದ ಹೃದಯವಿದ್ರಾವಕ ಘಟನೆ ಉತ್ತರಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಚಂದ್ರಘಟಗಿ ಗ್ರಾಮದ ಹೇಮಗಾರದಲ್ಲಿ ನಡೆದಿದೆ.
ಮಹೇಶ ಗಣಪತಿ ಹೆಗಡೆ ಎಂಬುವರ ಮನೆಯ ಹಿಂಬದಿಯಿದ್ದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಕೊಟ್ಟಿಗೆಯಲ್ಲಿದ್ದ ಏಳು ಹೋರಿಗಳು ಸುಟ್ಟು ಕರಕಲಾಗಿವೆ. ಘಟನೆಯಲ್ಲಿ ಸಿಸಿ ಕ್ಯಾಮರಾ, ಧಾನ್ಯ, ಜಾನುವಾರುಗಳ ಮೇವಿಗಾಗಿ ಇಟ್ಟಿದ್ದ ಹುಲ್ಲು ಸಹ ಸಂಪೂರ್ಣ ಭಸ್ಮವಾಗಿದ್ದು, ಅಂದಾಜು 2.40 ಲಕ್ಷ ರೂಪಾಯಿ ಹಾನಿಯಾಗಬಹುದೆಂದು ಕಂದಾಯ ಇಲಾಖೆ ಮಾಹಿತಿ ತಿಳಿಸಿದೆ. ಸುದ್ದಿ ತಿಳಿಯುತ್ತಿದ್ದಂತೆ ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.