ಆದ್ಯೋತ್ ಸುದ್ದಿ ನಿಧಿ : ಜಿಲ್ಲೆಯಲ್ಲಿ ಮತ್ತೆ ಕೊರೊನಾ ತನ್ನ ಆರ್ಭಟವನ್ನು ಮುಂದುವರೆಸಿದೆ. ಈ ತನಕ ಜಿಲ್ಲೆಯ ಕರಾವಳಿ ಪ್ರದೇಶಗಳಿಗೆ ವ್ಯಾಪಿಸಿದ್ದ ಕೊರೊನಾ ಮಲೆನಾಡಿನಲ್ಲೂ ಕೂಡ ತನ್ನ ಕಬಂಧ ಬಾಹುಗಳನ್ನು ಚಾಚಲು ಆರಂಭಿಸಿದೆ. ಇಂದಿನವರೆಗೆ ಒಂದೂ ಪ್ರಕರಣ ಇಲ್ಲದ ಶಿರಸಿಯಲ್ಲಿ ದಿಢೀರನೆ 9 ಪ್ರಕರಣ ಕಾಣಿಸಿಕೊಂಡಿದೆ.
ಜಿಲ್ಲೆಯಲ್ಲಿ ಈಗಾಗಲೇ 56 ಕ್ಕೇರಿದ್ದ ಕೊರೊನಾ ಪ್ರಕರಣಕ್ಕೆ ಇಂದು 9 ಕೇಸ್ ಗಳು ಸೇರ್ಪಡೆಯಾಗಿವೆ. ಇದರಲ್ಲಿ ಶಿರಸಿಯಲ್ಲೇ 9 ಪ್ರಕರಣಗಳು ಕಂಡುಬಂದಿದ್ದು ಸೋಂಕಿತರ ಸಂಖ್ಯೆ 65ಕ್ಕೆ ಏರಿಕೆಯಾಗಿದೆ. ಮುಂಬೈನಿಂದ ಬಂದು ಕಲ್ಲಿಯಲ್ಲಿ ಕ್ವಾರಂಟೈನ್ ನಲ್ಲಿರುವ 9 ಜನರಿಗೆ ಪಾಸಿಟಿವ್ ಬಂದಿವೆ. ಇಷ್ಟು ದಿನ ಕೊರೊನಾದಿಂದ ದೂರ ಉಳಿದಿದ್ದ ಶಿರಸಿಯಲ್ಲಿ 9 ಪ್ರಕರಣ ದೃಢಗೊಂಡಿದ್ದು ಮಲೆನಾಡಿನ ತಾಲೂಕುಗಳ ಜನ ಆತಂಕಗೊಳ್ಳುವಂತಾಗಿದೆ. ಜಿಲ್ಲೆಯಲ್ಲಿ ಸುಮಾರು 1000 ಜನ ಹೊರ ರಾಜ್ಯದಿಂದ ಬಂದು ಕ್ವಾರಂಟೈನ್ ನಲ್ಲಿದ್ದು ಇದು ಜಿಲ್ಲೆಯ ಕೊರೊನಾ ಪ್ರಕರಣಗಳು ಜಾಸ್ತಿಯಾಗಳು ಕಾರಣವಾಗಿದೆ. ಆದ್ರೆ ಪ್ರಕರಣದ ಮೂಲ ಗೊತ್ತಾಗಿರೋದ್ರಿಂದ ಜನತೆ ಆತಂಕಗೊಳ್ಳುವ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ತಿಳಿಸಿದೆ.