ಧಾರವಾಡದಾಗೊಂದು ಲವ್ ಸ್ಟೋರಿ ಧಾರವಾಹಿ ಸಿದ್ದ

ಆದ್ಯೋತ್ ಸಿನೇಮಾ ಸುದ್ದಿ:
ಹಲವುವವರ್ಷದಿಂದ ಕಿರುತೆರೆಯಲ್ಲಿ 20ಕ್ಕೂ ಹೆಚ್ಚು ಧಾರಾವಾಹಿಗಳ ನಿರ್ದೇಶನ ಮಾಡುವ ಮೂಲಕ ಹೆಸರುವಾಸಿಯಾದ ಹುಬ್ಬಳ್ಳಿಯ ಪೃಥ್ವಿರಾಜ್‌ ಕುಲಕರ್ಣಿ ಅವರು ಇದೀಗ ಅಪ್ಪಟ ಉತ್ತರ ಕರ್ನಾಟಕದ ಸೊಗಡು ಇರುವ ಕತೆಯಾಧರಿಸಿದ ಧಾರಾವಾಹಿ ‘ಧಾರವಾಡದಾಗೊಂದು ಲವ್ ಸ್ಟೋರಿ‘ ಸಿದ್ಧಪಡಿಸಿದ್ದಾರೆ. ಈಗಾಗಲೇ ಪಾರ್ವತಿ ಪರಮೇಶ್ವರ,ಶ್ರೀಮಾನ್ ಶ್ರೀಮತಿ , ಪಂಚರಂಗಿ ಪೋಂ ಪೋಂ, ಪರಿಣಿತಾ, ಕಣ್ಮಣಿ,ಸಿಲ್ಲಿ ಲಲ್ಲಿ,ಪಾತು ಸಾತು,ಪಾಯಿಂಟ್ ಪರಿಮಳ ಮುಂತಾದ ಧಾರಾವಾಹಿ ಮೂಲಕ ಹೆಸರು ಮಾಡಿದ್ದಾರೆ.
ಇದೀಗ ಧಾರವಾಡದಾಗೊಂದು ಲವ್ ಸ್ಟೋರಿ ಮೂಲಕ ಅವಳಿ ನಗರದ ಕಲಾವಿದರನ್ನು ಒಟ್ಟುಗೂಡಿಸಿ ಧಾರಾವಾಹಿ ಸಿದ್ದಪಡಿಸಿದ್ದಾರೆ.

ಈ ಧಾರಾವಾಹಿ ಏಪ್ರಿಲ್ 19 ರಿಂದ ಸಂಜೆ 7ಕ್ಕೆ ಸಿರಿಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.
ತುಂಬು ಕುಟುಂಬದಲ್ಲಿ ಅನೇಕ ಕಟ್ಟು ಪಾಡುಗಳ ನಡುವೆ ನವೀರಾದ ಪ್ರೇಮದ ಎಳೆ ಇರಿಸಿ ಕೊಂಡು ಕತೆ ಮಾಡಲಾಗಿದೆ.
ಮದುವೆಯಾದ ದಿನವೇ ಹಾವು ಕಚ್ಚಿ ಗಂಡ ಮೃತಪಟ್ಟಿರುತ್ತಾನೆ.ಹೀಗಾಗಿ ಮದುವೆ ದಿನದಿಂದ ವಿಧವೆಯಾದವಳ ಮನದಲ್ಲಿನ ತಳಮಳ, ಕುಟುಂಬದಲ್ಲಿನ ಹೊಯ್ದಾಟ ,ಒಂದಿಷ್ಟು ಸಿಟ್ಟು ಸೇಡುಗಳ ಸಮ್ಮಿಳನದ ಕತೆ ಇದಾಗಿದೆ.ಇದರ ನಡುವೆ ತ್ರಿಕೋನ ಪ್ರೇಮದ ಕತೆ ಸಾಗುತ್ತದೆ.ಕೊನೆಗೆ ಯಾರ ಜೊತೆ ಮದುವೆ ಆಗುತ್ತದೆ ಎಂಬುದನ್ನು ಧಾರಾವಾಹಿಯಲ್ಲಿ ನೋಡಬಹುದು ಎಂದು ನಿರ್ದೇಶಕರು ತಿಳಿಸಿದ್ದಾರೆ.
ವಿಭಿನ್ನವಾಗಿ ಹೆಣೆದ ಕತೆಗೆ ಜನರೆಲ್ಲ ಪ್ರೋತ್ಸಾಹ ನೀಡಬೇಕಿದೆ.
ಹುಬ್ಬಳ್ಳಿ,ಧಾರವಾಡ,ಕಾಮಧೇನು ಗ್ರಾಮ,ಇಟಿಗಟ್ಟಿ ಗ್ರಾಮದ ದೇಸಾಯಿಯವರ ವಾಡೆ,ಬೂದನಗುಡ್ಡ, ನೃಪತುಂಗನಬೆಟ್ಟ, ಸಿದ್ಧಾರೂಢಮಠ,ಮೂರುಸಾವಿರ ಮಠ
ಹೀಗೆ ಹಲವು ಸ್ಥಳಗಳಲ್ಲಿ ಚಿತ್ರಿಕರಣವಾಗಿದೆ.
ನಾಯಕ ವಿನಯ್, ನಾಯಕಿ ರೇಷ್ಮಾ ಮತ್ತು ಹರ್ಷಿತ, ಪೋಷಕ ಪಾತ್ರದಲ್ಲಿ ಸುನಿಲ್ ಪತ್ರಿ, ಶುಭ ಕೊಪ್ಪ, ವಿಕ್ರಂ ಕುಮುಟ, ಪ್ರಿಯಾ ಕುಲಕರ್ಣಿ, ಸಂತೋಷ್ ಬೆಂಗೇರಿ, ನಂದಿನಿ ಹರೀಶ್, ರಾಜ್ ನೀನಾಸಂ, ಗಿರಜಾ ಹಿರೇಮಠ, ವೀರೇಶ್ , ಪ್ರಥಾ ವಿಭೂತಿ, ವಿಶಾಲ್ ಸಾಲಿಮಠ.ಗಿರಿಜಾ
ಇವರೆಲ್ಲ ಉತ್ತಮವಾಗಿ ನಟಿಸಿದ್ದಾರೆ.

ಕಥೆ-ಚಿತ್ರಕಥೆ-ನಿರ್ದೇಶನ ಪೃಥ್ವಿರಾಜ್ ಮ. ಕುಲಕರ್ಣಿ, ನಿರ್ಮಾಪಕರು ಗಾನಶ್ರೀ ಕೋಟ್ಯಾನ್, ಸಂಭಾಷಣೆ ಜೀ.ವಿ. ಹಿರೇಮಠ & ದಕ್ಷಿಣಾಮೂರ್ತಿ, ಛಾಯಾಗ್ರಹಣ ಶಿವು, ಪ್ರಸಾದನ ಶ್ರೀಕಾಂತ್ ಕುಲಕರ್ಣಿ, ಮೇಲ್ವಿಚಾರಕರು ರಾಜಲಕ್ಷ್ಮಿ ಕುಲಕರ್ಣಿ, ಧ್ವನಿಗ್ರಹಣ ಕುಮಾರ್ ಪಂಚರಂಗಿ, ಸಹನಿರ್ದೇಶನ ಹೇಮಂತ್ ಕುಮಾರ್, ಸಹಾಯಕ ನಿರ್ದೇಶಕ ಆದರ್ಶ್, ಸಂಕಲನ ಇಮ್ರಾನ್ ಖಾನ್, ಸಹಾಯ ಪರಮ್. ಪಿಆರ್ ಓ ಡಾ.ಪ್ರಭು ಗಂಜಿಹಾಳ,ಡಾ.ವೀರೇಶ್ ಹಂಡಗಿ ಅವರದಿದೆ.
ತಾಂತ್ರಿಕ ಸಹಾಯ ಕೃಷ್ಣ ಪಂತ್, ರಾಘವೇಂದ್ರ ಪಂತ್ ನೀಡಿದ್ದಾರೆ.
ಈ ಧಾರಾವಾಹಿಯ ಚಿತ್ರಿಕರಣಕ್ಕೆ
ಸಹಾಯ ಮಾಡಿದ ಇಟಿಗಟ್ಟಿ ದೇಸಾಯಿ ಮತ್ತು ಕುಟುಂಬ, ಮಾಲ್ತೇಶ್ ಮಮತಾ ಅಶ್ವಿನಿ ಪಿಜಿ ಮತ್ತು ನಾಗೇಂದ್ರ ಲಂಗೋಟಿ ಮಿಶ್ರಿಕೋಟಿ ಅವರ ಸಹಕಾರ ಇದೆ. ಈಗಾಗಲೇ 35 ಕಂತು ಮುಗಿಸಿ ಕೊಟ್ಟಿದ್ದು ಉಳಿದ 30 ಕಂತುಗಳ ಚಿತ್ರೀಕರಣ ಮೇ 1ರಿಂದ ಆರಂಭವಾಗಲಿದೆ ಎಂದು ನಿರ್ದೇಶಕ ಪೃಥ್ವಿರಾಜ ಕುಲಕರ್ಣಿ ತಿಳಿಸಿದರು.

About the author

Adyot

Leave a Comment