ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಹಳಿಯಾಳದ ರಾಜು ಧೂಳಿ ಶನಿವಾರ
ಕೊವಿಡ್ ಗೆ ಬಲಿಯಾಗಿದ್ದಾರೆ.
58 ವರ್ಷದ ರಾಜು ಧೂಳಿಗೆ ಕಳೆದ 7-8 ದಿನದ ಹಿಂದೆ ಕೊವಿಡ್ ಕಾಣಿಸಿಕೊಂಡಿದೆ.ತೀವ್ರವಾದ ಉಸಿರಾಟದ ತೊಂದರೆಯ ಕಾರಣ ಹುಬ್ಬಳ್ಳಿಯ ಸುಶ್ರುತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮಧ್ಯಾಹ್ನ ನಿಧನರಾದರು.
ಹಳಿಯಾಳದಂತಹ ಕಾಂಗ್ರೆಸ್ ಪ್ರಾಬಲ್ಯ ಇರುವಲ್ಲಿ ಭಾರತೀಯ ಜನತಾಪಕ್ಷವನ್ನು ಕಟ್ಟಿದ್ದರು. ಸಂಸದ ಅನಂತಕುಮಾರ ಹೆಗಡೆ ಬೆಂಬಲಿಗರಾಗಿದ್ದ ಇವರು ಇತ್ತೀಚೆಗೆ ಪಕ್ಷದಿಂದ ದೂರವಿದ್ದರು.
ಹಿಂದೂ ಮಹಾಸಭಾ ರಾಜ್ಯಾಧ್ಯಕ್ಷರಾಗಿದ್ದ ಧೂಳಿ ಹಳಿಯಾಳ ಜಿಲ್ಲಾರಚನಾ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು.
ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಜು ಧೂಳಿ ಶವವನ್ನು ಹಳಿಯಾಳಕ್ಕೆ ತರಲಾಗುವುದು ಎಂದು ಕುಟುಂಬ ಮೂಲಗಳು ತಿಳಿಸಿವೆ