ಸಿದ್ದಾಪುರದಲ್ಲಿ ಕೊವಿಡ್-200 ಪ್ರಕರಣ 5 ಮಂಗನಖಾಯಿಲೆ ಪ್ರಕರಣ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಶನಿವಾರ 23 ಪ್ರಕರಣಗಳು ದಾಖಲೆಯಾಗುವುದರೊಂದಿಗೆ ಸಕ್ರೀಯ ಪ್ರಕರಣ ದ್ವಿಶತಕ ಭಾರಿಸಿದೆ. ಕೊವಿಡ್ ಅಬ್ಬರದ ನಡುವೆ ಮರೆಯಾಗಿದ್ದ ಮಂಗನಖಾಯಿಲೆ ಹಲಗೇರಿ ಗ್ರಾಪಂ ವ್ಯಾಪ್ತಿಯ ಹೆಜನಿ ಗ್ರಾಮದ 40 ವರ್ಷ ಪ್ರಾಯದ ಮಹಿಳೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ತಲೆ ಎತ್ತಿದೆ.

ಈ ವರ್ಷ ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ426 ಜನರನ್ನು ಕೆಎಪಡಿ ಪರೀಕ್ಷೆಗೆ ಒಳಪಡಿಸಲಾಗಿದೆ ಅದರಲ್ಲಿ ಸಿದ್ದಾಪುರ ತಾಲೂಕಿನ ಹಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ 3 ಹಾಗೂ ಕೊರ್ಲಕೈ ಗ್ರಾಪಂ ವ್ಯಾಪ್ತಿಯಲ್ಲಿ 1 ಪ್ರಕರಣ ದಾಖಲಾಗಿತ್ತು ಈಗ ಹಲಗೇರಿ ಗ್ರಾಪಂ ವ್ಯಾಪ್ತಿಯಲ್ಲಿ ಇನ್ನೊಂದು ಪ್ರಕರಣ ದಾಖಲಾಗುವುದರೊಂದಿಗೆ ಒಟ್ಟೂ ಐದು ಪ್ರಕರಣವಾಗಿದೆ.
ಏ.1ಕ್ಕೆ ಒಂದು ಪ್ರಕರಣ ಕಂಡುಬಂದ ನಂತರ ಯಾವುದೇ ಕೆಎಪ್‍ಡಿ ಪ್ರಕರಣ ಕಂಡುಬಂದಿರಲಿಲ್ಲ ಕೊವಿಡ್ ಅಲೆಯೊಂದಿಗೆ ಕೆಎಪ್‍ಡಿ ಕಡಿಮೆಯಾಗಿದೆ ಎಂದು ಭಾವಿಸಲಾಗಿತ್ತು ಆದರೆ
ಒಂದು ತಿಂಗಳ ನಂತರ ಇನ್ನೊಂದು ಪ್ರಕರಣ ಕಂಡುಬರುವದರೊಂದಿಗೆ ಕೆಎಪ್‍ಡಿ ಇನ್ನೂ ಇದೆ ಎಂದಾಯಿತು.
ಕೊವಿಡ್‍ಗಿಂತ ಕೆಎಪ್‍ಡಿ ಹೆಚ್ಚು ಮಾರಣಾಂತಿಕವಾಗಿದೆ ಎರಡಲ್ಲೂ ಜ್ವರ ಸಾಮಾನ್ಯವಾಗಿದ್ದರೂ ಕೆಎಪ್‍ಡಿ ಯಲ್ಲಿ ಕೆಮ್ಮು, ಕಂಡುಬರುವುದಿಲ್ಲ ತಲೆನೋವು,ಕಣ್ಣು ಕೆಂಪಾಗುವುದು, ವಾಂತಿಯಾಗುವಂತಾಗುವುದು ಮುಂತಾದ ಲಕ್ಷಣವಿರುತ್ತದೆ ಸರಿಯಾದ ಸಮಯದಲ್ಲಿ ಚಿಕಿತ್ಸೆ ಸಿಗದಿದ್ದರೆ ಇದು ಮಾರಣಾಂತಿಕವಾಗಿದೆ ಎನ್ನುತ್ತಾರೆ ವೈದ್ಯರು

ತಾಲೂಕಿನಲ್ಲಿ ಹಿಂದೆ ಮಂಗನಖಾಯಿಲೆ ಕಾಣಿಸಿಕೊಂಡ ಗ್ರಾಪಂ ವ್ಯಾಪ್ತಿಯಲ್ಲಿ ಸಂಶಯಿತ ಜ್ವರ ಪ್ರಕರಣ ಕಂಡುಬಂದರೆ ಕೆಎಪ್‍ಡಿ ಪರೀಕ್ಷೆಯನ್ನು ನಡೆಸಲಾಗುತ್ತಿದೆ. ಕಳೆದ ಬಾರಿಯಂತೆ ವ್ಯಾಪಕವಾಗಿ ಕೆಎಪ್‍ಡಿ ಹರಡುತ್ತಿಲ್ಲ ತಾಲೂಕಿನಾದ್ಯಂತ ಕೊವಿಡ್ ಲಸಿಕೆ ನೀಡಲಾಗುತ್ತಿರುವುದರಿಂದ ಕೆಎಪ್‍ಡಿ ಲಸಿಕೆ ಸಾಕಷ್ಟಿದ್ದರು ನೀಡುವುದನ್ನು ನಿಲ್ಲಿಸಲಾಗಿದೆ. ಹೆಜನಿ ಭಾಗದಲ್ಲಿ ಕೆಎಪ್‍ಡಿ ಪರೀಕ್ಷೆಯನ್ನು ಮಾಡಲಾಗುತ್ತಿದೆ.
ಡಾ.ಲಕ್ಷ್ಮೀಕಾಂತ ನಾಯ್ಕ
ತಾಲೂಕು ವೈದ್ಯಾಧಿಕಾರಿಗಳು
ಸಿದ್ದಾಪುರ

About the author

Adyot

Leave a Comment