ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ನೂತನ ಅಂಬ್ಯುಲೆನ್ಸ್ ವಾಹನ ಬಂದಿದೆ.
ತಾಲೂಕಿಗೆ ಅವಶ್ಯಕವಿರುವ ಅಂಬ್ಯುಲೆನ್ಸ ಬೇಕೆಂಬ ಬೇಡಿಕೆಗೆ ಸರಕಾರ ಮಣಿದಿದ್ದು ಸುಮಾರು 15ಲಕ್ಷರೂ.ವೆಚ್ಚದ ಅಂಬ್ಯುಲೆನ್ಸ್ ರವಿವಾರದಿಂದ ಕಾರ್ಯಾರಂಭ ಮಾಡಿದೆ.
ವಿಸ್ತಾರವಾದ ತಾಲೂಕಿನಲ್ಲಿ ಕೊವಿಡ್ ಜೊತೆಗೆ ಕೆಎಪ್ಡಿ,ಇಲಿಜ್ವರದಂತಹ ಸಾಂಕ್ರಾಮಿಕ ಖಾಯಿಲೆಗಳು ವ್ಯಾಪಕವಾಗಿ ಇದೆ. ಈಗ ಇರುವ ಅಂಬ್ಯುಲೆನ್ಸ್ ಸುಮಾರು 3ಲಕ್ಷ ಕಿ.ಮಿ. ಸಂಚರಿಸಿತ್ತು ಅದರ ಚಕ್ರಗಳು ಸವೆದು ಹೋಗಿದ್ದು ರೋಗಿಗಳಿಗೆ ರೋಗಕ್ಕಿಂತ ಹೆಚ್ಚು ಈ ಅಂಬ್ಯುಲೆನ್ಸ್ ಅಪಾಯಕಾರಿಯಾಗಿತ್ತು.
ಇಲ್ಲಿಂದ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ,ಶಿವಮೊಗ್ಗ,ಮಂಗಳೂರುನಂತಹ ದೊಡ್ಡ ಆಸ್ಪತ್ರೆಗೆ ಕಳುಹಿಸಲು ಸುಸಜ್ಜಿತ ಅಂಬ್ಯುಲೆನ್ಸ್ ಅಗತ್ಯವಿತ್ತು. ಉಸ್ತುವಾರಿ ಸಚೀವರಾಗಿ ಅಧಿಕಾರ ಸ್ವೀಕರಿಸಿದ ಶಿವರಾಮ ಹೆಬ್ಬಾರ ತಾಲೂಕಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಾರ್ವಜನಿಕರು ಈ ಬಗ್ಗೆ ಗಮನ ಸೆಳೆದಿದ್ದರು. ಸಕಾರಾತ್ಮಕವಾಗಿ ಸ್ಪಂದಿಸಿದ್ದ ಸಚೀವರು, ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿಯವರ ಸಲಹೆಯನ್ನು ಪಡೆದು ಕಾರ್ಯೋನ್ಮುಖರಾಗಿದ್ದರು. ಸ್ವಲ್ಪ ವಿಳಂಬವಾದರೂ ಈಗ ಅಂಬ್ಯುಲೆನ್ಸ್ ಬಂದಿರುವುದು ಸಾರ್ವಜನಿಕರಿಗೆ ಸಮಾದಾನ ತಂದಿದೆ.
ಸಚೀವನಾದ ಸಮಯದಲ್ಲಿ ಸಿದ್ದಾಪುರಕ್ಕೆ ಭೇಟಿ ನಿಡಿದ ಸಂದರ್ಭದಲ್ಲಿ ಮಂಗನಖಾಯಿಲೆ ಪೀಡಿತರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲ ಸೇರಿದಂತೆ ಬೇರೆ ಕಡೆಗೆ ಕರೆದುಕೊಂಡು ಹೋಗಲು ಅಂಬ್ಯುಲೆನ್ಸ್ ಅವಶ್ಯಕತೆ ಇದೆ ಎಂದು ತಿಳಿದು ಬಂದಿತ್ತು. ಜನರ ಸಮಸ್ಯೆಗೆ ಪರಿಹಾರ ನೀಡುವುದಾಗಿ ಮಾತುಕೊಟ್ಟಿದ್ದೆ ಕೆಲವು ತಾಂತ್ರಿಕ ಕಾರಣದಿಂದ ಸ್ವಲ್ಪ ತಡವಾಗಿದೆ ಆದರೂ ಸುಸಜ್ಜಿತವಾದ ಅಂಬ್ಯುಲೆನ್ಸ್ ನೀಡಿದ್ದೇನೆ ಇದಲ್ಲದೆ ಜಿಲ್ಲೆಯ ಯಾವುದೇ ತಾಲೂಕಿಗೆ ಅವಶ್ಯಕವಿರುವ ಸೌಲಭ್ಯವನ್ನು ನೀಡಲು ನಾನು ಬದ್ಧನಿದ್ದೇನೆ ಎಂದು ಸಚೀವ ಶಿವರಾಮ ಹೆಬ್ಬಾರ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ
ಸಿದ್ದಾಪುರ ತಾಲೂಕಿಗೆ ಅಗತ್ಯವಾದ ಅಂಬ್ಯುಲೆನ್ಸ್ ನ್ನು ಜಿಪಂ ಅನುದಾನದಲ್ಲಿ ನೀಡಲಾಗಿದೆ. 15ಲಕ್ಷರೂ.ವೆಚ್ಚದ ಟಾಟಾ ಕಂಪನಿಯ ವಿಂಗರ್ ಹೆಸರಿನ ಅಂಬ್ಯುಲೆನ್ಸ್ ಸುಸಜ್ಜಿತವಾಗಿರುತ್ತದೆ ಸುಮಾರು 5 ಲಕ್ಷರೂ. ವೆಚ್ಚದಲ್ಲಿ ಅಗತ್ಯ ಉಪಕರಣಗಳನ್ನು ಇದಕ್ಕೆ ಅಳವಡಿಸಲಾಗುವುದು ಪ್ರಾಥಮಿಕ ಚಿಕಿತ್ಸೆ ನೀಡುವ ವ್ಯವಸ್ಥೆಯನ್ನು ಇದರಲ್ಲಿ ಅಳವಡಿಸಲಾಗುವುದು. ಇದಕ್ಕೆ ಅಗತ್ಯವಾದ ಸಿಬ್ಬಂದಿಗಳನ್ನು ನೇಮಕ ಮಾಡಲಾಗುವುದು ಎಂದು ಜಿಲ್ಲಾವೈದ್ಯಾಧಿಕಾರಿ ಡಾ.ಶರದ ನಾಯಕ ಆದ್ಯೋತ್ ನ್ಯೂಸ್ ಗೆ ತಿಳಿಸಿದರು.