ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಾದ್ಯಂತ ಸಾರ್ವಜನಿಕರಿಗೆ ತುರ್ತುಸೇವೆಯನ್ನು ನೀಡುವ ಇ ಆರ್ ಎಸ್ ಎಸ್ 112 ವಾಹನ ಇಂದು ಕಾರ್ಯಾರಂಭ ಮಾಡಿದೆ. ಮಹಿಳೆಯರು,ಮಕ್ಕಳು,ಹಿರಿಯನಾಗರಿಕರ ಅವಶ್ಯಕವಿರುವ ತುರ್ತುಸೇವೆಯನ್ನು ಈ ವಾಹನದ ಮೂಲಕ ನೀಡಲಾಗುವುದು. ಬೆಂಕಿಯಅವಘಡವಾದಾಗ,ಪ್ರಕೃತಿವಿಕೋಪವಾದಾಗ,ಯಾವುದಾದರೂ ಗಲಾಟೆಯಾದಂತಹ ಸಂದರ್ಭದಲ್ಲಿ 112 ನಂಬರ್‍ಗೆ ಕರೆಮಾಡಿದರೆ ತಕ್ಷಣ ನೆರವು ಸಿಗಲಿದೆ.
24 ಗಂಟೆಯೂ ಕಾರ್ಯನಿರ್ವಹಿಸುವ ಈ ವಾಹನದಲ್ಲಿ ಚಾಲಕರು ಸೇರಿದಂತೆ ಒಬ್ಬರು ಎಎಸ್‍ಐ,ಒಬ್ಬರು ಕಾನಸ್ಟೇಬಲ್ ಇರುತ್ತಾರೆ.
ಜಿಲ್ಲೆಯಲ್ಲಿ 4 ಡಿವೈಎಸ್‍ಪಿಗಳ ವ್ಯಾಪ್ತಿಯ 27 ಪೊಲೀಸ್‍ಠಾಣೆಗಳ ಪೈಕಿ 16 ಠಾಣೆಗಳಲ್ಲಿ ಇಆರ್‍ಎಸ್‍ಎಸ್ 112 ವಾಹನದ ಸೌಲಭ್ಯವಿದೆ ಉಳಿದ ಠಾಣೆಗಳು ಇವುಗಳ ಸಂಪರ್ಕದಲ್ಲಿರುತ್ತವೆ. ಶಿರಸಿ ಡಿವೈಎಸ್‍ಪಿ ವ್ಯಾಪ್ತಿಯಲ್ಲಿ ಶಿರಸಿ,ಬನವಾಸಿ,ಮುಂಡಗೋಡು,ಸಿದ್ದಾಪುರ,ಯಲ್ಲಾಪುರ ಪೊಲೀಸ್‍ಠಾಣೆಗಳಲ್ಲಿ ರವಿವಾರದಿಂದಲೇ ಈ ಸೇವೆಯನ್ನು ಪ್ರಾರಂಭಿಸಲಾಗಿದೆ.
—-
ಯಾವುದೇ ವಿಪ್ಪತ್ತು ಸಂಭವಿಸಿದಾಗ 112 ನಂಬರ್‍ಗೆ ಕರೆ ಮಾಡಿದರೆ ಬೆಂಗಳೂರಿನ ಕೇಂದ್ರ ಕಚೇರಿಗೆ ಸುದ್ದಿ ಹೋಗುತ್ತದೆ ಅಲ್ಲಿಂದ ಘಟನೆ ನಡೆದ ಸ್ಥಳ ಯಾವ ಪೊಲೀಸ್‍ಠಾಣೆಗೆ ಹತ್ತಿರವಿದೆಯೋ ಆ ಠಾಣೆಗೆ ಸುದ್ದಿ ಹೋಗುತ್ತದೆ ಅಲ್ಲಿಂದ ತಕ್ಷಣದಲ್ಲಿ ಸಹಾಯ ಸಿಗುತ್ತದೆ. ಇಲ್ಲಿ ಯಾವುದೇ ಪ್ರದೇಶದ ನಿರ್ಭಂಧವಿಲ್ಲ ಘಟನೆಯ ಸ್ಥಳಕ್ಕೆ ಯಾವ ಠಾಣೆ ಹತ್ತಿರವಿರುತ್ತದೆಯೋ ಅಲ್ಲಿಂದ ಸಹಾಯ ಒದಗಿಬರುತ್ತದೆ. ಸಿಬ್ಬಂದಿಗಳ ನೇಮಕದ ವಿಷಯವಾಗಿಯಷ್ಟೆ ಪೊಲೀಸ್‍ಠಾಣೆಯನ್ನು ನಿಗದಿಪಡಿಸಲಾಗಿದೆ ಎಂದು ಡಿವೈಎಸಪಿ ರವಿ ನಾಯ್ಕ ಆದ್ಯೋತ್ ನ್ಯೂಸ್ ಗೆ ತಿಳಿಸಿದ್ದಾರೆ