ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಎರಡು-ಮೂರು ದಿನದಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ದಿನಕ್ಕೆ 25-30 ಪ್ರಕರಣಗಳು ದಾಖಲಾಗುತ್ತಿದ್ದು ಸೋಮವಾರ 98 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು,ಮಂಗಳವಾರ 27 ಪ್ರಕರಣಗಳು ಕಂಡುಬಂದಿದೆ.300ಕ್ಕೂ ಹೆಚ್ಚು ಸಕ್ರೀಯ ಕೇಸ್‍ಗಳು ತಾಲೂಕಿನಲ್ಲಿದ್ದು ಜನತೆ ಬೆಚ್ಚುವಂತೆ ಮಾಡಿದೆ.
ಪಟ್ಟಣದ ಹೊಸುರು,ಹಾಳದಕಟ್ಟಾ,ಹಣಜೀಬೈಲ್,ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ 23 ಗ್ರಾಪಂ ವ್ಯಾಪ್ತಿಯಲ್ಲೂ ಕೊವಿಡ್ ಹರಡುತ್ತಿದೆ.ತಾಲೂಕಿನಲ್ಲಿ ಕೊವಿಡ್ ಸಾವು ಪ್ರಕರಣವೂ ನಡೆಯುತ್ತಿದೆ ಕಳೆದ ವಾರ ಓಜಗಾರ ಗ್ರಾಮದ ವ್ಯಕ್ತಿಯೊಬ್ಬರು ಕೊವಿಡ್‍ನಿಂದ ಮೃತಪಟ್ಟಿದ್ದರೆ ಸೋಮವಾರ ತಡರಾತ್ರಿ ಪಟ್ಟಣ ಸಮೀಪದ ಅವರಗುಪ್ಪದ ವ್ಯಕ್ತಿಯೊಬ್ಬರು ಶಿವಮೊಗ್ಗದಲ್ಲಿ ಕೊವಿಡ್‍ನಿಂದ ಮೃತರಾಗಿದ್ದಾರೆ ಎಂದು ತಿಳಿದು ಬಂದಿದೆ.
ತಾಲೂಕಿನಲ್ಲಿ ಒಂದೇ ಸಮನೆ ಕೊವಿಡ್ ಪ್ರಕರಣ ದಾಖಲಾಗಲು ಕಾರಣ ಮದುವೆ ಮನೆಗಳು ಹಾಗೂ ಬೆಂಗಳೂರಿನಿಂದ ಬಂದವರು.
ಕಳೆದ ವರ್ಷ ಬೇರೆ ಊರಿಂದ ಬಂದವರ ಮೇಲೆ ನಿಗಾ ಇಡುವ ವ್ಯವಸ್ಥೆ ಮಾಡಲಾಗಿತ್ತು ಆದರೆ ಈ ಬಾರಿ ಅಂತಹ ಯಾವುದೇ ವ್ಯವಸ್ಥೆ ಮಾಡಿಲ್ಲ ಕೊವಿಡ್ ಪಾಸಿಟಿವ್ ಇರುವವರು ಆರಾಮವಾಗಿ ಓಡಾಡುತ್ತಿದ್ದಾರೆ. ಇಲ್ಲಿ ಹೋಮ್ ಐಸೋಲೆಷನ್‍ಲ್ಲಿರುವವರು 250ಕ್ಕೂ ಹೆಚ್ಚು ಜನರು. ಇವರು ಮನೆಯಲ್ಲಿದ್ದಾರೋ,ಓಡಾಡುತ್ತಿದ್ದಾರೋ ನಿಗಾವಹಿಸುವವರು ಇಲ್ಲವಾಗಿದೆ. ಪಟ್ಟಣದಲ್ಲಿ ಜನರ ಓಡಾಟ ನಿರಾತಂಕವಾಗಿದ್ದು ಅಂಗಡಿಗಳು ಎದುರುಗಡೆಯಿಂದ ಮುಚ್ಚಿದ್ದರು ಹಿಂಬಾಗಲಿನಿಂದ ವ್ಯಾಪಾರ ಮಾಡುತ್ತಿದ್ದಾರೆ ಬಟ್ಟೆ ಅಂಗಡಿ ತೆರೆಯಲು ಅನುಮತಿ ಇಲ್ಲದಿದ್ದರೂ ಬಾಗಿಲು ಮುಚ್ಚಿ ವ್ಯಾಪಾರ ನಡೆಸಲಾಗುತ್ತಿದೆ ಕಳೆದ ಬಾರಿ ಲಾಕ್‍ಡೌನ್ ಕಟ್ಟುನಿಟ್ಟಾಗಿ ಜಾರಿಯಾಗಿತ್ತು ಆದರೆ ಈ ಬಾರಿ ಲಾಕ್‍ಡೌನ್ ಎನ್ನುವುದು ಹಾಸ್ಯಾಸ್ಪದವಾಗಿದೆ ಎಂದು ಜನರು ಆಡಿಕೊಳ್ಳುತ್ತಿದ್ದಾರೆ.
ಸರಕಾರ ಯಾವ ಕಾರಣದಿಂದ, ಮದುವೆ ಮಾಡುವುದು ಅವಶ್ಯಕತೆಯೊಳಗೆ ಬರುತ್ತದೆ ಎಂದು ನಿರ್ಧರಿಸಿದೆಯೋ ಗೊತ್ತಿಲ್ಲ 50 ಜನರನ್ನು ಒಳಗೊಂಡು ಮದುವೆ ಮಾಡಬಹುದು ಎಂದು ಅನುಮತಿ ನೀಡಿದೆ. ತಾಲೂಕಿನಲ್ಲಿ ಏ.21 ರಿಂದ ಸುಮಾರು 100ಕ್ಕೂ ಹೆಚ್ಚು ಮದುವೆಗಳು ನಡೆದಿವೆ ಇದರಲ್ಲಿ ಜನಸಾಮಾನ್ಯರ ಮದುವೆಯ ಜೊತೆಗೆ ರಾಜಕೀಯ ಧುರೀಣರ ಮನೆಯಲ್ಲೂ ಮದುವೆ ನಡೆದಿದೆ. ಇಲ್ಲೆಲ್ಲ ಬಾರಿ ಜನರೇ ಸೇರಿದ್ದರು.ಪ್ರಭಾವಿಗಳೂ ಮದುವೆ ಮನೆಗೆ ಭೇಟಿ ನೀಡಿದ್ದರು. ಮದುವೆ ಮನೆಯ ಮೇಲೆ ನಿಗಾವಹಿಸಲು ಸೆಕ್ಟರ್ ಅಧಿಕಾರಿ,ಅಭಿವೃದ್ಧಿ ಅಧಿಕಾರಿಗಳು,ಗ್ರಾಮಲೆಕ್ಕಾಧಿಕಾರಿಗಳು ಮುಂತಾದವರಿರುತ್ತಾರೆ. ಆದರೆ ನಡೆದಿರುವ ಎಲ್ಲಾ ಮದುವೆಗಳಲ್ಲೂ 200-300 ಜನರು ಭಾಗವಹಿಸಿರುತ್ತಾರೆ.
ಇದರಿಂದಲೇ ಕೊವಿಡ್ ಪ್ರಕರಣ ಹೆಚ್ಚಾಗಲು ಕಾರಣ ಎಂದು ಜನರು ಆರೋಪಿಸುತ್ತಿದ್ದಾರೆ.
######
ಸಿದ್ದಾಪುರದಲ್ಲಿ ಮಳೆ–ಗಾಳಿಗೆ ಉರುಳಿದ ಮರಗಳು–ವಿದ್ಯುತ್ ಕಂಬಗಳು
ಸಿದ್ದಾಪುರದಲ್ಲಿ ಕಳೆದ ಮೂರು-ನಾಲ್ಕು ದಿನಗಳಿಂದ ಪ್ರತಿದಿನ ಸಂಜೆ ಗುಡುಗು,ಬಿರುಗಾಳಿ ಸಹಿತ ಮಳೆಯಾಗುತ್ತಿದೆ. ಇದರಿಂದ
ರೈತರಿಗೆ ಆತಂಕವಾಗಿದೆ.ಈಗಷ್ಟೆ ಅಡಿಕೆ ಶಿಂಗಾರ ಬರುತ್ತಿದ್ದು ಅದರಲ್ಲಿ ನೀರು ಸೇರಿ ಹಾಳಾಗುವ ಸಾಧ್ಯತೆ ಇದೆ.
ಅಲ್ಲದೆ ತಾಲೂಕಿನಲ್ಲಿ 210 ಹೆಕ್ಟೇರ್ ಪ್ರದೇಶದಲ್ಲಿ ಬೇಸಿಗೆ ಭತ್ತದ ಬೆಳೆಯನ್ನು ಬೆಳೆಯಲಾಗುತ್ತಿದ್ದು ಅವು ಮಳೆಗೆ ಸಿಲುಕಿದೆ.
ಹೆಸ್ಕಾಂ ಇಲಾಖೆಗೆ ಸಾಕಷ್ಟು ಹಾನಿಯಾಗಿದ್ದು ಇಲ್ಲಿಯವರೆಗೆ ಸುಮಾರು 200ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ ಹತ್ತಾರು ಟಿಸಿಗಳು ಹಾಳಾಗಿವೆ ಸೋಮವಾರ ರಾತ್ರಿ ಸುಮಾರು 13.44 ಮಿಮಿ ಮಳೆಯಾಗಿದ್ದು ಬಾರಿ ಮಳೆ-ಗಾಳಿಗೆ ತಾಲೂಕಿನ ಗೋಳಿಮಕ್ಕಿ,ಬಾಳೆಕೊಪ್ಪ,ಹೆಗ್ಗರಣೆ ಭಾಗದಲ್ಲಿ ಕಾಡುಮರಗಳು,ಅಡಿಕೆಮರಗಳು 11ಕೆವಿ ಲೈನ್ ಹಾಗೂ ಎಲ್‍ಟಿ ಲೈನ್‍ಗಳ ಮೇಲೆ ಬಿದ್ದ ಪರಿಣಾಮ 25ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದಿದೆ. ಅರಣ್ಯ ಇಲಾಖೆಗೆ ಸೇರಿದ ನೂರಾರು ಮರಗಳು,ರೈತರ ನೂರಾರು ಅಡಿಕೆಮರಗಳು ಮುರಿದು ಬಿದ್ದಿದೆ.ಇಲ್ಲಿಯವರೆಗೆ 154.8ಮಿಮಿ ಮಳೆಯಾಗಿದೆ