ಆದ್ಯೋತ್ ಕೊವಿಡ್ ಸುದ್ದಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಗುರುವಾರ ಕೂಡ ಕೊವಿಡ್ ಆರ್ಭಟ
ಮುಂದುವರಿದಿದ್ದು 734 ಪ್ರಕರಣಗಳು ದಾಖಲಾಗಿವೆ,6 ಜನರು ಕೊವಿಡ್ ನಿಂದ ಮರಣ ಹೊಂದಿದ್ದಾರೆ.ಒಟ್ಟೂ4664
ಸಕ್ರೀಯ ಪ್ರಕರಣಗಳಿವೆ.
ಈ ನಡುವೆ ಜಿಲ್ಲೆಯಲ್ಲಿ ‌ನಾಳೆಯಿಂದ ಬೆಳಿಗ್ಗೆ 6-10 ಗಂಟೆವರೆಗೆ ಮಾತ್ರ ದಿನಸಿ ಅಂಗಡಿಗಳಲ್ಲಿ ಅಗತ್ಯವಸ್ತುಗಳ ಖರೀದಿಗೆ ಅವಕಾಶ ನೀಡುತ್ತಿದ್ದೇವೆ. ಕೊರೋನಾ ಪರಿಸ್ಥಿತಿ ಅರಿತು ಜನತೆ ಸಹಕರಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಶಿವರಾಮ ಹೆಬ್ಬಾರ್ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುರುವಾರ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೊವಿಡ್ ತಡೆಗಾಗಿ ಸರಕಾರ ಜನತಾ ಕರ್ಫ್ಯೂ ವಿಧಿಸಿತ್ತು
ಬೆಳಿಗ್ಗೆ 6 ರಿಂದ 10 ರ ವರೆಗಿದ್ದ ಅಗತ್ಯ ವಸ್ತುಗಳ ಖರೀದಿ ಅವಕಾಶ ನೀಡಿತ್ತು ಆದರೆ ಈ ಸಮಯದಲ್ಲಿ ಜನರ ಗುಂಪು ಸೇರುವುದು ಹೆಚ್ಚಾದ ಕಾರಣ ಇದನ್ನು ತಪ್ಪಿಸಲು ಈ ಅವಕಾಶವನ್ನು 12 ಗಂಟೆಯ ವರೆಗೆ ವಿಸ್ತರಿಸಿತ್ತು. ಇದೀಗ ಉತ್ತರ ಕನ್ನಡದ ಉಸ್ತುವಾರಿ ಸಚಿವರು ಉತ್ತರಕನ್ನಡದಲ್ಲಿ ನಾಳೆಯಿಂದ 10 ಗಂಟೆಯ ವರೆಗೆ ಮಾತ್ರವೇ ಅವಕಾಶ ಎಂದು ತಿಳಿಸಿದ್ದಾರೆ.
ಸಿದ್ದಾಪುರದಲ್ಲಿ ಗುರುವಾರ 36 ಕೊವಿಡ್ ಪ್ರಕರಣ ದಾಖಲಾಗಿದ್ದು ಒಟ್ಟೂ 369 ಸಕ್ರೀಯ ಪ್ರಕರಣಗಳಿವೆ.334 ಜನರು ಮನೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರೆ 10 ಜನರು ಕೊವಿಡ್ ಕೇರ್ ಕೇಂದ್ರದಲ್ಲಿ,13ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.4 ಜನರು ಬೇರೆ ಜಿಲ್ಲೆಯಲ್ಲಿಯೂ 2 ಜನರು ಖಾಸಗಿ ಆಸ್ಪತ್ರೆಯಲ್ಲೂ ಚಿಕಿತ್ಸೆ ಪಡೆಯುತ್ತಿದ್ದಾರೆ.

About the author

Adyot

Leave a Comment