ಆದ್ಯೋತ್: ಕೊವಿಡ್ ಸುದ್ದಿ : ಹಿರಿಯ ರಾಜಕೀಯ ನಾಯಕ ಶಂಭು ಗೌಡ ಗುಣವಂತೆ ಕೊವಿಡ ಗೆ ಬಲಿ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯಲ್ಲಿ ಕೊವಿಡ್ ಆರ್ಭಟ ಮುಂದುವರಿದಿದೆ
ಜಿಲ್ಲೆಯಲ್ಲಿ ಇಂದು 979 ಕೊವಿಡ್ ಪ್ರಕರಣಗಳು ದಾಖಲಾಗಿದ್ದು ಸಕ್ರೀಯ ಪ್ರಕರಣಗಳ ಸಂಖ್ಯೆ 6647ಕ್ಕೆ ತಲುಪಿದೆ 13 ಜನರು ಕೊವಿಡ್‍ನಿಂದಾಗಿ ಮೃತರಾಗಿದ್ದಾರೆ ಇಲ್ಲಿಯವರೆಗೆ 325 ಜನರು ಕೊವಿಡ್‍ನಿಂದಾಗಿ ಮೃತರಾಗಿದ್ದಾರೆ.
ಸಿದ್ದಾಪುರ ತಾಲೂಕಿನಲ್ಲಿ ಬುಧವಾರ 64 ಪ್ರಕರಣಗಳು ದಾಖಲಾಗಿದೆ. ಒಟ್ಟೂ 423 ಸಕ್ರೀಯ ಪ್ರಕರಣ ದಾಖಲಾಗಿದೆ. ಇಲ್ಲಿಯವರೆಗೆ ಬೇರೆ ತಾಲೂಕಿನಲ್ಲಿ,ಜಿಲ್ಲೆಯಲ್ಲಿ ಮೃತಪಟ್ಟವರೂ ಸೇರಿದಂತೆ 30ಕ್ಕೂ ಹೆಚ್ಚು ಜನರು ಕೊವಿಡ್‍ನಿಂದಾಗಿ ಮೃತರಾಗಿದ್ದಾರೆ. ಬುಧವಾರ ಬೇಡ್ಕಣಿ ಗ್ರಾಮದ ಗರ್ಭಿಣಿಯೊಬ್ಬಳು ಕೊವಿಡ್‍ಗೆ ಬಲಿಯಾಗಿದ್ದಾಳೆ. ಪಟ್ಟಣದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದ ಮಹಿಳೆ ಆರೋಗ್ಯ ಚೇತರಿಕೆಯಾಗದ ಕಾರಣ ಮಂಗಳೂರು ಆಸ್ಪತ್ರೆಗೆ ಸೇರಿಸಲಾಗಿತ್ತು ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಬುಧವಾರ ಮರಣ ಹೊಂದಿದ್ದಾಳೆ.
ರಾಜಕೀಯ ಜನಪ್ರತಿನಿಧಿಗಳು,ಉಪನ್ಯಾಸಕರು ಸೇರಿದಂತೆ ಜಿಲ್ಲೆಯ ಪ್ರಮುಖರು ಕೊವಿಡ್‍ಗೆ ಬಲಿಯಾಗುತ್ತಿದ್ದು ಜಿಲ್ಲೆಯ ಹಿಂದುಳಿದ ವರ್ಗಗಳ ನಾಯಕರು,ಗೇರು‌ನಿಗಮದ ಮಾಜಿ ಅಧ್ಯಕ್ಷರಾಗಿದ್ದ ಹೊನ್ನಾವರ ತಾಲೂಕಿನ ಗುಣವಂತೆಯ ಶಂಭು ಗೌಡ,ಜೆಡಿಯು ಪಕ್ಷದ ಜಿಲ್ಲಾಧ್ಯಕ್ಷ ವಸಂತ ಹೆಗಡೆ ಶಶಿಗುಳಿ
ಬುಧವಾರ ಕೊವಿಡ್‍ಗೆ ಬಲಿಯಾಗಿದ್ದಾರೆ.
ಸಿದ್ದಾಪುರ ತಾಲೂಕಿನ 23 ಗ್ರಾಪಂ ವ್ಯಾಪ್ತಿಯಲ್ಲೂ ಕೊವಿಡ್ ಸೊಂಕಿತರಿದ್ದು ಮೇಲಿನ ಹಾಲಕಣಿ,ದಂಟಕಲ್,ಕರ್ಜಗಿ ಸೇರಿದಂತೆ ಸುಮಾರು 6-7 ಕಂಟೋನ್ಮೆಂಟೆ ಝೋನ್ ಮಾಡಲಾಗಿದೆ. ಸುಮಾರು 4-5 ಗರ್ಭಿಣಿಯರಲ್ಲೂ ಕೊವಿಡ್ ಸೊಂಕು ಕಾಣಿಸಿಕೊಂಡಿದೆ.

ತಾಲೂಕು ಆಡಳಿತ ಲಾಕ್‍ಡೌನ್ ಕಠೀಣವಾಗಿ ಜಾರಿಗೆ ತಂದಿದ್ದು ತಹಸೀಲ್ದಾರ ಪ್ರಸಾದ ಎಸ್.ಎ. ಪೊಲೀಸ್ ಜೊತೆ ಸೇರಿ ಅನವಶ್ಯಕ ಓಡಾಡುವವರಿಗೆ ಬಿಸಿ ಮುಟ್ಟಿಸುತ್ತಿದ್ದಾರೆ.
#####
ತಾಲೂಕಿನ 23 ಗ್ರಾಪಂ ವ್ಯಾಪ್ತಿಯಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಸ್ಥಳೀಯ ಆಡಳಿತ ಸಂಪೂರ್ಣ ಲಾಕಡೌನ್ ಘೋಷಿಸಿದ್ದು ಜನರು ವೈದ್ಯಕೀಯ ಹಾಗೂ ಬ್ಯಾಂಕಿಂಗ್ ಸೇವೆಯ ಹೊರತು ಉಳಿದಂತೆ ಓಡಾಡದಂತೆ ನಿರ್ಬಂಧ ವಿಧಿಸಲಾಗಿದೆ. ಜನರಿಗೆ ಅವಶ್ಯಕತೆಯುಳ್ಳತರಕಾರಿ,ದಿನಸಿ,ಔಷಧಿಗಳನ್ನು ಮನೆಮನೆಗೆ ತಲುಪಿಸುವ ವ್ಯವಸ್ಥೆಯನ್ನು ಗ್ರಾಪಂ ಮೂಲಕ ಮಾಡಲಾಗಿದೆ. ಈ ಬಗ್ಗೆ 23 ಗ್ರಾಪಂನಲ್ಲಿ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ. ಸರ್ವಜನಿಕರು ಇದರ ಉಪಯೋಗವನ್ನು ಪಡೆಯಬೇಕೆಂದು ತಾಪಂ ಮುಖ್ಯಾಧಿಕಾರಿ ಪ್ರಶಾಂತ ರಾವ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ದೊಡ್ಮನೆ-9449503296,ಕಾನಗೋಡ-9731613145,ಹಸರಗೋಡ-8217416379,ಕೋಲಸಿರ್ಸಿ-9686651473 ಮನಮನೆ-9449440771ಬೇಡ್ಕಣಿ-9632380275 ತಾರೇಹಳ್ಳಿ-ಕಾನಸೂರು-8277227150 ಕೋರ್ಲಕೈ-9449111743 ಹಲಗೇರಿ-9483170905 ಸೋವಿನಕೊಪ್ಪ-8296589674 ಹಾರ್ಸಿಕಟ್ಟಾ-9481459548 ಇಟಗಿ-9481869916ಬಿಳಗಿ-9480879333 ಕ್ಯಾದಗಿ-9480356476 ತಂಡಾಗುಂಡಿ-9448052819 ಅಣಲೇಬೈಲ್-9482839686 ಬಿದ್ರಕಾನ-8277647194 ಶಿರಳಗಿ-8971778346 ತ್ಯಾಗಲಿ-6362395413 ಕವಂಚೂರು-9900680073 ವಾಜಗೋಡ-9480879350 ನಿಲ್ಕುಂದ-9480420942 ಹೆಗ್ಗರಣೆ-7483966838
#####
ಸ್ಥಳೀಯ ಶಿಕ್ಷಣ ಪ್ರಸಾರಕ ಸಮಿತಿಯ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯ ಮತ್ತು ಸಂಶೋಧನಾ ಕೇಂದ್ರದ 140 ಹಾಸಿಗೆಯುಳ್ಳ ಸುಸಜ್ಜಿತ ಆಸ್ಪತ್ರೆಯನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಾರ್ವಜನಿಕವಾಗಿ ಉಪಯೋಗವಾಗುವಂತೆ ಜಿಲ್ಲಾಡಳಿತಕ್ಕೆ ನೀಡಲು ಸಮಿತಿ ತೀರ್ಮಾನಿಸಿದೆ.
ಈ ಸಂದರ್ಭದಲ್ಲಿ ಆಸ್ಪತ್ರೆಯು ಯಾವುದೇ ಶುಲ್ಕವನ್ನು ಆಕರಣೆಮಾಡದೇ ಕೋವಿಡ್ ರೋಗಿಗಳ ಆರೈಕೆಗೆ ಆಸ್ಪತ್ರೆಯನ್ನು ನೀಡುತ್ತಿದ್ದು, ಜಿಲ್ಲಾಡಳಿತ ಈ ಕುರಿತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬಹುದಾಗಿದೆ ಸೋಂಕಿತ ಪ್ರಕರಣಗಳು ಅತ್ಯಂತ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು, ಕೋವಿಡ್ ಹೊರತಾದ ಅಗತ್ಯ ವೈದ್ಯಕೀಯ ಚಿಕಿತ್ಸೆಗಳು ಲಭ್ಯವಾಗದ ಪರಿಸ್ಥಿತಿ ನಿರ್ಮಾಣಗೊಂಡಿರುವುದರಿಂದ ಕೋವಿಡ್ ಸಂಬಂಧಿ ಚಿಕಿತ್ಸೆ ಮತ್ತು ಆರೈಕೆ ಹಾಗೂ ಉಳಿದ ರೋಗಗಳಿಗೆ ಸಂಬಂಧಿಸಿದಂತೆ ಧನ್ವಂತರಿ ಆಯುರ್ವೇದ ಮಹಾವಿದ್ಯಾಲಯದ ನುರಿತ ತಜ್ಞ ವೈದ್ಯರುಗಳಿಂದ ಟೆಲಿ ಕನ್ಸಲ್ಟೇಶನ್ ಮೆಡಿಕಲ್ ಸರ್ವಿಸ್ ಸೇವೆಯನ್ನು ಉಚಿತವಾಗಿ ಸಾರ್ವಜನಿಕರಿಗೆ ತುಲುಪುವಂತೆ ಮಾಡಿ ಆರೋಗ್ಯ ಸೇವೆಯನ್ನು ನೀಡಲು ನಿರ್ಧರಿಸಲಾಗಿದೆ ಎಂದು ಈ ಸಂಬಂಧ ಈ ಕೆಳಗಿನ ಸಹಾಯವಾಣಿಯು ದಿನದ 24 ಗಂಟೆ ಕಾರ್ಯನಿರ್ವಹಿಸುತ್ತದೆ ಮತ್ತು ತಜ್ಞ ವೈದ್ಯರುಗಳು ಸೇವೆಗೆ ಲಭ್ಯರಿರುತ್ತಾರೆ. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಆಯುರ್ವೇದÀ ಮಹಾವಿದ್ಯಾಲಯದ ಚೇರಮನ್ ವಿನಾಯಕರಾವ್ ಜಿ ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಲಭ್ಯವಿರುವ ವೈದ್ಯರು ಡಾ.ರೂಪಾ ಭಟ್ಟ(9449810476)ಡಾ.ಚೈತ್ರಾಲಕ್ಷ್ಮಿ(9742920452)ಡಾ.ಸಮೀರ ಭಾದ್ರಿ(9880281930)ಡಾ.ನಂದೀಶ(7892816316)ಡಾ.ಸ್ನೇಹಾಲಿ ಜಿ.(9481131863)ಡಾ.ನಿಧಿ ಡಿ.(8618503856) ಡಾ.ಕವಿತಾ ಬಾದ್ರಿ(9480211065)ಡಾ.ಮಧುಕೇಶ್ವರ ಹೆಗಡೆ(9480027409)

About the author

Adyot

Leave a Comment