ಆದ್ಯೋತ್ ಸುದ್ದಿನಿಧಿ
ಈ ಸಂದರ್ಭದಲ್ಲಿ ಮಾತನಾಡಿದ ವಸಂತ ನಾಯ್ಕ,ಅಂಬ್ಯುಲೆನ್ಸ್ ಕೊರತೆಯಾಗಿರುವ ಕಾರಣ ಬ್ಲಾಕ್ಕಾಂಗ್ರೆಸ್ವತಿಯಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಗಿದೆ ತಾಲೂಕಿನಲ್ಲಿ ಬಡವರೆ ಹೆಚ್ಚಾಗಿದ್ದು ಖಾಸಗಿ ವಾಹನಗಳಲ್ಲಿ ಬರಲು ಶಕ್ತರಾಗಿರುವುದಿಲ್ಲ ಅಲ್ಲದೆ ಕೊವಿಡ್ ರೋಗಿಗಳನ್ನು ಕರೆತರಲು ಖಾಸಗಿ ವಾಹನದವರು ಹಿಂದೇಟು ಹಾಕುತ್ತಾರೆ ಇದರಿಂದ ಚಿಕಿತ್ಸೆಯೂ ವಿಳಂಬವಾಗುತ್ತಿದೆ,ಸಾವಿನ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದ್ದರಿಂದ ಕೊವಿಡ್ ರೋಗ ಹತೋಟಿಗೆ ಬರುವವರೆಗೆ ಈ ಅಂಬ್ಯುಲೆನ್ಸ್ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದರು.
ತಾಲೂಕಿನ ಜನರು ರೋಗದಿಂದ ಬಳಲುತ್ತಿರುವುದರ ಜೊತೆಗೆ ಆಹಾರದ ಸಮಸ್ಯೆಯನ್ನೂ ಎದುರಿಸುತ್ತಿದ್ದಾರೆ ಇದೆಲ್ಲವನ್ನು ಪರಿಹರಿಸಬೇಕಾದ ಶಾಸಕ,ಸಂಸದರು ಎಲ್ಲಿ ಅವಿತುಕುಳಿತಿದ್ದಾರೋ ಗೊತ್ತಿಲ್ಲ. ಭಾವನಾತ್ಮಕವಾಗಿ ಚುನಾವಣೆಯ ಸಂದರ್ಭದಲ್ಲಿ ಜನರನ್ನು ಎತ್ತಿಕಟ್ಟುತ್ತಾರೆ ಜಿಲ್ಲೆಯ ಕೆಲವು ಶಾಸಕರು ತಮ್ಮ ಸ್ವಂತ ಹಣದಿಂದ ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ ಪಟ್ಟಣದ ಧನ್ವಂತರಿ ಆಸ್ಪತ್ರೆಯವರು ಕೊವಿಡ್ ಕೇಂದ್ರವನ್ನಾಗಿ ಮಾಡಲು ತಮ್ಮ ಆಸ್ಪತ್ರೆಯನ್ನೇ ಬಿಟ್ಟುಕೊಟ್ಟಿದ್ದಾರೆ ಆದರೆ ಅಲ್ಲಿ ವೆಂಟೆಲೆಟರ ಸೇರಿದಂತೆ ಅವಶ್ಯಕ ವ್ಯವಸ್ಥೆ ಮಾಡಬೇಕಾದ ಆಡಳಿತ ಹಾಗೂ ಶಾಸಕರು ನಿರ್ಲಕ್ಷ ಮಾಡುತ್ತಿದ್ದಾರೆ. ವಿಧಾನಸಭಾಧ್ಯಕ್ಷರೂ ಆಗಿರುವ ಈ ಕ್ಷೇತ್ರದ ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೊವಿಡ್ ಸಂದರ್ಭದಲ್ಲೂ ಜನರ ಸಹಾಯಕ್ಕೆ ಬರದೆ ಮಾಯವಾಗಿದ್ದಾರೆ ತಮ್ಮ ಸ್ವಂತ ಹಣದಿಂದ ಸಾಧ್ಯವಾಗದಿದ್ದರೆ ಸರಕಾರದಿಂದಲಾದರೂ ವಾಹನ ವ್ಯವಸ್ಥೆ ಮಾಡಬಹುದಿತ್ತು ಜನರ ಸಮಸ್ಯೆಗೆ ಸ್ಪಂದಿಸಿದ ಇಂತಹವರು ಜನಪ್ರತಿನಿಧಿಗಳಾಗಲು ಲಾಯಕ್ಕಿಲ್ಲ ಕೂಡಲೇ ಇವರು ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ವಿ.ಎನ್.ನಾಯ್ಕ ಬೆಡ್ಕಣಿ,ಸಾವೆರ್ ಡಿಸಿಲ್ವಾ,ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಅಬ್ದುಲ್ ಷರಿಪ್ ಸಾಬ್,ಯುವಘಟಕದ ಅಧ್ಯಕ್ಷ ಪ್ರಶಾಂತ ನಾಯ್ಕ ಹೊಸುರು,ತಾಪಂ ಸದಸ್ಯ ನಾಸೀರ್ ವಲ್ಲಿಖಾನ್,ಲಂಬೋದರ ಹೆಗಡೆ ಬಾಳಗೋಡು,ರಾಮಕೃಷ್ಣ ನಾಯ್ಕ ವಂದಾನೆ,ಕೆ.ಟಿ.ಹೊನ್ನೆಗುಂಡಿ ಮುಂತಾದವರು ಉಪಸ್ಥಿತರಿದ್ದರು.
ಕೊವಿಡ್ ಸೊಂಕಿತರು ಸಂಪರ್ಕಿಸಬೇಕಾದ ಮೊ.ನಂ—9880389225
—
ವಿಸ್ತಾರವಾದ ತಾಲೂಕಾಗಿರುವುದರಿಂದ,ಕೊವಿಡ್ ಪ್ರಕರಣ ಹೆಚ್ಚಾಗುತ್ತಿರುವುದರಿಂದ ವಾಹನದ ಅವಶ್ಯಕತೆ ಇರುತ್ತದೆ ಇಂತಹ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ವಾಹನ ನೀಡಿದ್ದಕ್ಕಾಗಿ ಅಭಿನಂದಿಸುತ್ತೇನೆ ಇದೇ ರೀತಿ ದಾನಿಗಳು ವಾಹನ ವ್ಯವಸ್ಥೆ ಮಾಡಲು ಮುಂದಾಗಬೇಕು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸ್ಥಳೀಯವಾಗಿ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿದರೆ ರೋಗಿಗಳಿಗೆ ಹೆಚ್ಚಿನ ಚಿಕಿತ್ಸೆ ನೀಡಲು ಅನುಕೂಲವಾಗುತ್ತದೆ ಎಂದು ಡಾ.ಲಕ್ಷ್ಮೀಕಾಂತ ನಾಯ್ಕ ಹೇಳಿದ್ದಾರೆ
#######