ಆದ್ಯೋತ್ ಸುದ್ದಿನಿಧಿ:
ಕೆಲವು ರಾಜಕೀಯ ನಾಯಕರು ನ್ಯಾಯಾಂಗದ ಮೇಲೆ ವ್ಯತಿರಿಕ್ತ ಹೇಳಿಕೆನೀಡುತ್ತಿದ್ದು ಇದನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಸ್ಪಂಧನಾ ಲೀಗಲ್ ಅಕಾಡೆಮಿಯ ಅಧ್ಯಕ್ಷ ರವೀಂದ್ರ ನಾಯ್ಕ ಖಂಡಿಸಿದ್ದಾರೆ.
ಸಂವಿಧಾನಾತ್ಮಕ ಶಾಸಕಾಂಗದಲ್ಲಿನ ಹುದ್ದೆಯಲ್ಲಿರುವವರು ನ್ಯಾಯಾಂಗದ ಮೇಲೆ ವ್ಯತಿರಿಕ್ತವಾದ ಹೇಳಿಕೆ ನೀಡುತ್ತಿರುವ ಜನಪ್ರತಿನಿಧಿಗಳ ನಿಲುವು ಖಂಡನಾರ್ಹ. ಅಸಂವಿಧಾನಾತ್ಮಕವಾದ ಇಂತಹ ಹೇಳಿಕೆಯು ಶಾಸಕಾಂಗ ಹುದ್ದೆಯಿಂದ ವಜಾಗೊಳಿಸಲು ಅರ್ಹರಾಗಿರುತ್ತಾರೆ.
ಕೋರೋನಾ ನಿರ್ವಹಣೆ ಸಂಬಂಧ ಹೈ ಕೋರ್ಟ ನೀಡುತ್ತಿರುವ ಸೂಚನೆ, ಆದೇಶಕ್ಕೆ ಸಂಬಂದಿಸಿ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹಾಗೂ ಮಾಜಿ ಸಚಿವ ಹಾಲಿ ಶಾಸಕ ಸಿ.ಟಿ ರವಿ ಅವರು ನ್ಯಾಯಾಧೀಶರುಗಳು ಸರ್ವಜ್ಞರಲ್ಲ ಎಂಬ ಹೇಳಿಕೆ ನೀಡಿದ್ದಾರೆ ಇಂತಹ ಹೇಳಿಕೆಗಳು ನ್ಯಾಯಾಂಗದ ಮೇಲೆ ಉಲ್ಲೇಖಿಸುತ್ತಿರುವುದು ಸರಿಯಲ್ಲ, ಶಾಸನ ಬದ್ಧ ಕಾರ್ಯದಲ್ಲಿ ಶಾಸಕಾಂಗ ವೈಫಲ್ಯವಾದಾಗ ಸಂವಿಧಾನಿಕ ಹಕ್ಕುಗಳ ರಕ್ಷಣೆಗೆ ನ್ಯಾಯಾಂಗ ನಾಗರಿಕರ ಬದುಕುವ ಹಕ್ಕು ಎತ್ತಿ ಹಿಡಿಯುತ್ತಿರುವುದು ಉಲ್ಲೇಖನಾರ್ಹ. ಇಂತಹ ಹೇಳಿಕೆಯು ಸಂವಿಧಾನಕ್ಕೆ ಅಪಚಾರವೆಸಗಿದಂತಾಗಿದೆ. ಅಲ್ಲದೇ ನ್ಯಾಯಾಂಗ ನಿಂದನೆಗೆ ಕಾರಣವಾಗಿದೆ. ನಾಗರಿಕರ ಹಕ್ಕಿಗೆ ಚ್ಯುತಿಬಂದಾಗ ನ್ಯಾಯಾಲಯವು ಸಲಹೆ, ಸೂಚನೆ, ಮಾರ್ಗದರ್ಶನ ನೀಡುತ್ತಿರುವುದನ್ನು ಜನಪ್ರತಿನಿಧಿಗಳು ಟೀಕೆ ಎಂಬುದನ್ನು ಅರ್ಥಯಿಸದೇ, ಸಂವಿಧಾನಾತ್ಮಕವಾಗಿ ಗೌರವಿಸುವ ಪ್ರವ್ರತ್ತಿ ಬೆಳೆಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ