ಸ್ವರ್ಣವಲ್ಲಿಯಲ್ಲಿ ಯೋಗಾನುಷ್ಠಾನ ನಡೆಸುವ ಮೂಲಕ ವಿಶ್ವಯೋಗದಿನಾಚರಣೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಸೊಂದಾ ಸ್ವರ್ಣವಲ್ಲಿ ಮಠದಲ್ಲಿ ಸೋಮವಾರ ವಿಶ್ವಯೋಗದಿನಾಚರಣೆಯ ಪ್ರಯುಕ್ತ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಗಳು ಯೋಗಾನುಷ್ಠಾನ ನಡೆಸಿ ಆಶೀರ್ವಚನ ನೀಡಿದರು.
ಯೋಗದಿನಾಚರಣೆಯ ದಿನದಂದು ಮಾತ್ರ ಯೋಗಾಸನ ಮಾಡಿದರೆ ಸಾಲದು ಜೀವನದಲ್ಲಿ ನಿರಂತರ ಯೋಗಾನುಷ್ಠಾನ ಮಾಡಬೇಕು,ಆಸನ,ಪ್ರಾಣಾಯಾಮ ರೂಡಿಸಿಕೊಳ್ಳಬೇಕು.ಪ್ರತಿದಿನ ಇದನ್ನು ಮಾಡಬೇಕು. ಜೀವನದ ಸಮತೆ ಪಡೆಯಲು ಯೋಗಾನುಷ್ಠಾನ ಮಹತ್ವದ್ದು,ಆಸನ ಪ್ರಾಣಯಾಮ ತಿಳಿದು ಕೌಶಲ ಮೂಲಕ ಯೋಗ ಸಾಧನೆ ಮಾಡಿದಾಗ ನಮ್ಮಲ್ಲೂ ಸಮತ್ವ ಸಾಧನೆ ಆಗುತ್ತದೆ.
ಎಂದು ಶ್ರೀಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನದಲ್ಲಿ ನುಡಿದರು.

ವಿಶ್ವ ಯೋಗದ ದಿನಾಚರಣೆಯು ಯೋಗದ ಮೂಲಕ ಎಲ್ಲರೂ ಆರೋಗ್ಯ ಪಡೆಯುವಲ್ಲಿ ನೆರವಾಗಲಿ. ಯೋಗದ ಮೂಲಕ ವಿಶ್ವ ಒಂದಾಗಬಹುದು ಎಂಬುದನ್ನು ತಿಳಿಸಲಿ ವಿಶ್ವ ಯೋಗ ದಿನಾಚರಣೆ ಎಲ್ಲ ಜನರಲ್ಲೂ ಯೋಗದ ಬಗ್ಗೆ ಜಾಗೃತಿ ಮೂಡಿಸುತ್ತಿದೆ. ವಿಶ್ವವನ್ನು ಒಂದಾಗಿಸುತ್ತಿದೆ. ಭಗವದ್ಗೀತೆಯಲ್ಲಿ ಎರಡು ವಾಕ್ಯ ಬರುತ್ತದೆ. ಬೇರೆ ಸಂದರ್ಭದಲ್ಲಿನ ಸಾಲಾದರೂ ಯೋಗಕ್ಕೂ ಅದನ್ನು ಜೋಡಿಸಿಕೊಳ್ಳಬಹುದು.

ಗೀತೆಯಲ್ಲಿ ಸಮತ್ವಂ ಯೋಗ ಉಚ್ಛತೆ ಹಾಗೂ ಯೋಗ ಕರ್ಮಸ್ಯ ಕೌಶಲಂ ಎಂಬ ಎರಡೂ ಸಾಲುಗಳು ಬೇರೆ ಬೇರೆ ಶ್ಲೋಕದ ಕೊನೇಯ ಭಾಗ. ಹಾಗಾಗಿ ಆ ಶ್ಲೋಕದಲ್ಲಿ ಅರ್ಥ ಬೇರೆ ಇದ್ದರೂ ನಾವು ಹೇಳುವ ಅರ್ಥ ವಿಭಿನ್ನ. ಸಮತ್ವಂ ಯೋಗ ಉಚ್ಛತೆ ಎಂದರೆ ಸಮತೆಯೇ ಯೋಗ. ಸಮತ್ವ ಯೋಗ. ನಮ್ಮ ಶರೀರದಲ್ಲಿ ನಮ್ಮ ಉಸಿರಾಟದಲ್ಲಿ ಸಮತ್ವ ಬರಬೇಕು. ಶರೀರದ ಸಮತ್ವ ಎಂದರೆ ನೇರವಾಗಿ ಕುಳಿತುಕೊಳ್ಳುವದು, ಆರೋಗ್ಯ ಇಟ್ಟುಕೊಳ್ಳುವದು, ಬ್ರಹ್ಮಚರ್ಯದ ನಿಯಮ ಪಾಲನೆಯು ಶರೀರದ ಸಮತ್ವ ಎಂದು ವಿವರಿಸಿದರು.

ಉಸುರಾಟವೂ ಒಂದು ಸಮತ್ವ. ಉಸಿರು ತೆಗೆದುಕೊಳ್ಳುವಷ್ಟೇ ಬಿಡುವದೂ ಅಷ್ಟೇ ಕಾಲ ಬೇಕು. ಪ್ರಾಣಕ್ಕೆ ಅದರದ್ದೇ ಆದ ಸಮತೆ ಇರುತದೆ. ಸಹಜು ಉಸಿರು ತೆಗೆದುಕೊಳ್ಳುವ ಹೆಚ್ಚು ಬಿಡಲು ಬೇಕು. ಗಾಢ ನಿದ್ದೆಯ ಸಮಸ್ಥಿತಿಯೇ ಪ್ರಾಣದ ಸಮಸ್ಥಿತಿ. ಪ್ರಾಣಾಯಾಮದ ಮೂಲಕ ಜಾಗೃತದ ವ್ಯವಸ್ಥೆಯಲ್ಲೂ ಇದನ್ನು ತರಬೇಕು. ಮನಸ್ಸಿನ ಆರೋಗ್ಯದ ಮೂಲಕ ಇದು ಸಾಧ್ಯವಿದೆ. ಆಸನ ಪ್ರಾಣಾಯಾಮದ ಮೂಲಕವೂ ಹೇಳಬಹುದು. ಇದನ್ನು ಸಾಧನೆ ಮಾಡಲು ಕೌಶಲ ಬೇಕು ಯೋಗ ಪ್ರಾಣಾಯಮ ತಿಳಿದು, ಮನಸ್ಸು ಕೊಟ್ಟು ಮಾಡಬೇಕು. ಒಂದೊಂದು ಆಸನ ಮಾಡುವದಾಗಲೂ ನಮ್ಮ ಆಸನದ ಕಡೆ ಲಕ್ಷ್ಯ ಇರಬೇಕು. ಹೀಗೆ ಮಾಡಬೇಕು ಎಂಬ ಕ್ರಮದಲ್ಲಿ ಮಾಡಬೇಕು. ತಿಳುವಳಿಕೆ ಮೂಲಕ, ಗಮನದ ಮೂಲಕ ಮಾಡಬೇಕು ಎಂದು ಶ್ರೀಗಳು ಸಲಹೆ ಮಾಡಿದರು.
ಈ ವೇಳೆ ರಾಜರಾಜೇಶ್ವರಿ ವಿದ್ಯಾ ಸಂಸ್ಥೆಯ ಪ್ರಾಚಾರ್ಯ ನರಸಿಂಹ ಭಟ್ಟ ತಾರಿಮಕ್ಕಿ, ವಿ. ಬಾಲಿಗದ್ದೆ ಶಂಕರ ಭಟ್ಟ, ವಿ. ಉಂಚಳ್ಳಿ ಶಂಕರ ಭಟ್ಟ, ಯೋಗ ಶಿಕ್ಷಕ ವಿನಾಯಕ ಭಟ್ಟ ಕಿಚ್ಚಿಕೇರಿ ಹಾಗೂ ಪಾಠಶಾಲಾ ವಿದ್ಯಾರ್ಥಿಗಳು ಪಾಲ್ಗೊಂಡರು.

ಯೋಗ ಸಾಧಕ ಸ್ವಾಮೀಜಿ
ಕಳೆದ ನಾಲ್ಕು ದಶಕಗಳಿಂದಲೂ ನಿರಂತರ ಯೋಗಾಭ್ಯಾಸ ನಡೆಸತ್ತಿರುವ ಸ್ವರ್ಣವಲ್ಲೀ ಶ್ರೀಗಳು ಸ್ವತಃ ಯೋಗ ಸಾಧಕ ಗುರುಗಳೂ ಹೌದು. ವಿಶ್ವ ಯೋಗ ದಿನಾಚರಣೆಯ ಹಿನ್ನಲೆಯಲ್ಲಿ ಶ್ರೀಮಠದಲ್ಲಿ ಶ್ರೀಗಳು ಯೋಗಾಸನ, ಪ್ರಾಣಾಯಾಮ ನಡೆಸಿ ಗಮನ ಸೆಳೆದರು.

About the author

Adyot

Leave a Comment