btrಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಆರ್.ವಿ.ದೇಶಪಾಂಡೆ ಹಾಗೂ ಪ್ರಶಾಂತ ದೇಶಪಾಂಡೆ ಕೊಡುತ್ತಿರುವ ಆರೋಗ್ಯ ಸುರಕ್ಷಾಕಿಟ್ ನ್ನು ಆಶಾಕಾರ್ಯಕರ್ತೆಯರು ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ವಿತರಿಸಲಾಯಿತು.
ಬ್ಲಾಕ್ ಕಾಂಗ್ರೆಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಮಾತನಾಡಿ,ಕೊವಿಡ್ 3ನೇ ಅಲೆ ಎದುರಿಸುವಲ್ಲಿ ಪೂರಕವಾಗಿ ಕಾರ್ಯ ನಿರ್ವಹಿಸುವ ಅಗತ್ಯವಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮಡಿವಂತಿಕೆ ಬಿಟ್ಟು ವಿರೋಧ ಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು
ಕಳೆದ ಎರಡೂ ಸಂದರ್ಭಗಳಲ್ಲಿ ವಹಿಸಿದ ನಿರ್ಲಕ್ಷದಿಂದಾಗಿ ಅನೇಕ ಸಂಕಷ್ಠ ಎದುರಾಗಿದೆ. ಜೀವಹಾನಿಯಾಗಿದೆ. ಕೊವಿಡ್ ತಡೆಗಟ್ಟುವಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರು, ಕಾರ್ಯಕರ್ತರು ಬಹಳಷ್ಟು ಶ್ರಮ ವಹಿಸಿದ್ದಾರೆ. ಮುಂದೆಯೂ ಕೈ ಜೋಡಿಸುತ್ತಾರೆ ಕಾಂಗ್ರೆಸ್ ಪಕ್ಷದ ವತಿಯಿಂದ ಜಿಲ್ಲೆಯಲ್ಲಿ ಕೊವಿಡ್ ಸಂಕಷ್ಠದ ಸಂದರ್ಭದಲ್ಲಿ ಸ್ಪಂದಿಸಲಾಗಿದೆ. ಅಂಬುಲೆನ್ಸ ವ್ಯವಸ್ಥೆ, ಮಾಸ್ಕ ಮುಂತಾದ ಸುರಕ್ಷಾ ಸಾಮಗ್ರಿ ವಿತರಣೆ, ಗ್ರಾಮೀಣ ಭಾಗದಲ್ಲಿ ಆರೋಗ್ಯ ಪರೀಕ್ಷೆ ಕಾರ್ಯಕ್ರಮ ಮುಂತಾಗಿ ಅನೇಕ ರೀತಿಯಲ್ಲಿ ಸ್ಪಂದಿಸಿದ್ದೇವೆ. ಆರ್.ವಿ.ದೇಶಪಾಂಡೆ ಆದಿಯಾಗಿ ಜಿಲ್ಲೆಯ ಎಲ್ಲ ಕಾಂಗ್ರೆಸ್ ಧುರೀಣರು ಮನ:ಪೂರ್ವಕ ಸಹಕಾರ ನೀಡಿದ್ದಾರೆ. ಕಾರ್ಯಕರ್ತರು ಜನರಲ್ಲಿ ಧೈರ್ಯ, ಆತ್ಮವಿಶ್ವಾಸ ತುಂಬಿ ಭೀತಿಯನ್ನು ನಿವಾರಿಸುವ ಕೆಲಸ ಮಾಡಿದ್ದಾರೆ. ಸರಕಾರದ ನಿರ್ಲಕ್ಷದಿಂದ ಸಾಕಷ್ಟು ಪ್ರಾಣಹಾನಿಯಾಗಿದೆ. ಜನರ ದಿಕ್ಕು ತಪ್ಪಿಸುವ ಕೆಲಸವನ್ನು ಸರಕಾರ ಮಾಡುತ್ತಿದೆ. ಸಂಕಷ್ಟದಲ್ಲಿ ರಾಜ್ಯ ಇರುವಾಗ ಬಿಜೆಪಿ ಶಾಸಕರು ಮುಖ್ಯಮಂತ್ರಿ ಬದಲಾವಣೆಗೆ ಓಡಾಡುತ್ತಿದ್ದಾರೆ.ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಕಾರ್ಯಕರ್ತೆಯರು ಜೀವ ಭಯ ಬಿಟ್ಟು ಕಾರ್ಯ ನಿರ್ವಹಿಸಿದ್ದಾರೆ. ಆ ಕಾರಣದಿಂದ ರೋಗ ನಿಯಂತ್ರಣಕ್ಕೆ ಬಂದಿದೆ. ಕಾಂಗ್ರೆಸ್ ಪಕ್ಷ ಈ ಹಿಂದೆಯೂ ಜನರ ಜೊತೆಯಲ್ಲಿ ನಿಂತಿದೆ. ಮುಂದೆಯೂ ಜೊತೆಯಲ್ಲಿರುತ್ತದೆ ಎಂದರು.
ತಡೆಗಟ್ಟುವಲ್ಲಿ ನಾವೂ ಕೈ ಜೋಡಿಸುತ್ತೇವೆ ಎಂದು ಹೇಳಿದರು.
ಸ್ಥಳೀಯ ಶಾಸಕರು,ವಿಧಾನಸಭಾಧ್ಯಕ್ಷರೂ ಆಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರು ಕೊವಿಡ್ ಲಾಕ್ ಡೌನ್ ಇರುವ ಸಂದರ್ಭದಲ್ಲಿ ಬಲೂನ್ ಕಟ್ಟಿ ವಿಜೃಂಭಣೆಯಿಂದ ಮಿನಿವಿಧಾನಸೌಧ ಉದ್ಘಾಟನೆ ಮಾಡುವ ಅವಶ್ಯಕತೆ ಇತ್ತೆ?
ಜವಾಬ್ದಾರಿಯುತ ಸ್ಥಾನದಲ್ಲಿರುವವರು ಜವಾಬ್ದಾರಿಯಿಂದ ವರ್ತಿಸಬೇಕು ಎಂದು ಭೀಮಣ್ಣ ನಾಯ್ಕ ಹೇಳಿದರು.
ಬ್ಲಾಕ್ ಅಧ್ಯಕ್ಷ ವಸಂತ ನಾಯ್ಕ, ಮಹಿಳಾ ಬ್ಲಾಕ್ ಅಧ್ಯಕ್ಷೆ ಸೀಮಾ ಹೆಗಡೆ, ಕೆ.ಜಿ.ನಾಗರಾಜ,ವಿ.ಎನ್.ನಾಯ್ಕ, ನಾಸಿರ ವಲ್ಲಿಖಾನ್, ಸಿ.ಆರ್.ನಾಯ್ಕ, ವಿವೇಕ ಭಟ್ಟ, ಕೆ.ಟಿ.ಹೊನ್ನೆಗುಂಡಿ, ಉಮೇಶ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.