ತುರ್ತುಪರಿಸ್ಥಿತಿ ವಿರುದ್ದ ಹೋರಾಡಿದವರಿಗೆ ಸನ್ಮಾನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ಭಾರತೀಯ ಜನತಾಪಕ್ಷದವತಿಯಿಂದ 1975ರಲ್ಲಿ ಜಾರಿಯಾದ ತುರ್ತುಪರಿಸ್ಥಿತಿಯನ್ನು ವಿರೋಧಿಸಿ ಹೋರಾಟ ಮಾಡಿದವರಿಗೆ ಸನ್ಮಾನಿಸಲಾಯಿತು.
ಮಾಹಾಬಲೇಶ್ವರ ಸುಬ್ರಾಯ ಭಟ್ಟ ದಂಪತಿಗಳನ್ನು ಸನ್ಮಾನಿಸಿ ಮಾತನಾಡಿದ ಬಿಜೆಪೆ ಪ್ರದಾನ ಕಾರ್ಯದರ್ಶಿ ಸುರೇಶ ಮೇಸ್ತ,
ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಹೋರಾಟ ಮಾಡಿದ ನಾಲ್ಕು ಜನರ ಗುಂಪಿನಲ್ಲಿ ಮಾಹಾಬಲೇಶ್ವರ ಭಟ್ ಒಬ್ಬರಾಗಿದ್ದರು. ಆರ್ಥಿಕ ವಾಗಿ ಬಡತನ ಇದ್ದರು ಹೋರಾಟದಲ್ಲಿ ಧುಮಕಿದರು ಆಗ ಅವರ ವಯಸ್ಸು ಸುಮಾರು 20.ಎಲ್ಲರೂ ಇದೇ ವಯಸ್ಸಿನ ಹುಡುಗರು.ನಾಲ್ಕು ಜನ ಇರುವ ಗುಂಪು. ಸಂಘಟನೆಯ ನೇತೃತ್ವವಹಿಸಿದ್ದವರು 14 ವಯಸ್ಸಿನ ಐನಬೈಲ್ ಗ್ರಾಮದ ಈಶ್ವರ ರಾಮಾ ಗೌಡ ಇವರಿಗೆ ಜೊತೆಯಾದವರು ಮಹಾಬಲೇಶ್ವರ ಸುಬ್ರಾಯ ಭಟ್ಟ,ಗಣಪತಿ ಶಂಭು ಹೆಗಡೆ,ಈಶ್ವರ್ ಪರಮೇಶ್ವರ ಭಟ್ಟ ವಾಜಗಾರ.
ಡಿಸೆಂಬರ್12 1975 ಬೆಳಿಗ್ಗೆ 10.30 ಕ್ಕೆ ಸರಿಯಾಗಿ ಸಿದ್ದಾಪುರ ಪ್ರಮುಖ ಬೀದಿಯಲ್ಲಿ ಇವರೆಲ್ಲರೂ ಸೇರಿ ಸತ್ಯಾಗ್ರಹ ಚಳವಳಿ ಪ್ರಾರಂಭಿಸಿದರು. ಜೆ.ಪಿ.ಯವರ ಮುಖ ಮುದ್ರೆಯನ್ನು ಎದೆಯ ಮೇಲೆ ಧರಿಸಿ ಕರಪತ್ರ ವಿತರಣೆ ಮಾಡುತ್ತ ಘೋಷಣೆ ಕೂಗುತ್ತ ಮೆರವಣಿಗೆಯೊಂದಿಗೆ ತಾಲೂಕ ಕಛೇರಿಯ ಕಡೆ ಬರುತ್ತಿದಂತೆ ಡಿ.ಆರ್. ಪೋಲೀಸರು ಇವರನ್ನು ಬಂಧಿಸಿ ಗಾಡಿಯಲ್ಲಿ ಹಾಕಿ ನ್ಯಾಯಧೀಶರ ಮುಂದೆ ಹಾಜರ ಪಡಿಸಿದವರು.

ಅಲ್ಲಿ ಇವರ ತಪ್ಪು ಒಪ್ಪಿಗೆಯನ್ನೂ ಕೇಳಲಿಲ್ಲ. ನ್ಯಾಯಧೀಶರಃ ಇವರನ್ನು ಜೈಲಿಗೆ ಒಪ್ಪಿಸಿದರು. ಒಂದು ಹೊತ್ತಿನ ಊಟ ಸರಿ ಕೊಡದೆ ಇವರನ್ನು ಶಿಕ್ಷಿಸಿದರು.ಜೈಲಲ್ಲಿ ತಿಗಣೆ ಮತ್ತು ಸೊಳ್ಳೆಗಳಿಂದ ಹಾಗೂ ಮಲ ಮುತ್ರ ವಾಸನೆಯಿಂದ ತುಂಬಿದ್ದವು ಮಲಗಲು ತುಂಬಾ ಕಷ್ಟಕರವಾಗಿತು.
ಇವರ ಮುಂಖಡ 14ವರ್ಷದ ತರುಣ ಈಶ್ವರ ಗೌಡನನ್ನು ಮಾತ್ರ ಶಿರಶಿಯ ರಿಮಾಂಡ ಜೈಲಿಗೆ ಹಾಕಿದರು.
ಇವರಿಗೆ ಮಾರ್ಗದರ್ಶಕರಾಗಿದ್ದವರು ಮಹಾಬಲ ಜಿ ಹೆಗಡೆ ಕೆರೆ ಹೊಂಡ. ಇವರು ರಾಷ್ಟ್ರೀಯ ಸ್ವಯಂ ಸೇವಾ ಸಂಘದ ಕರ ಸೇವಕರು. ಅಂದು ಕಾಂಗ್ರೆಸ್ ಪ್ರಾಬಲ್ಯವಿದ್ದ ತಾಲೂಕಿನಲ್ಲೂ ತುರ್ತುಪರಿಸ್ಥಿತಿಯನ್ನು ಎದುರಿಸಿದ ಇವೆಲ್ಲ ಮಹನೀಯರು ಪ್ರಾತಃಸ್ಮರಣೀಯರು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಟ್ಟಣ ಪಂಚಾಯತ್ ಅಧ್ಯಕ್ಷ ಚಂದ್ರಕಲಾ ನಾಯ್ಕ. ಉಪಾಧ್ಯಕ್ಷ ರವಿಕುಮಾರ ನಾಯ್ಕ. ಪಟ್ಟಣ ಪಂಚಾಯತ್ ‌ಸದಸ್ಯ ಸುಧೀರ್ ನಾಯ್ಕ.ವಿಜೇಂದರ ಗೌಡರ ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment