ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದ ಪಾಲಿಟೆಕ್ನಿಕ ಕಾಲೇಜ್ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲಾಯಿತು.
ಟ್ಯಾಬ್ಲೆಟ್ ವಿತರಿಸಿದ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ,ಕೊವಿಡ್ ನಂತಹ ಸಾಂಕ್ರಾಮಿಕ ಖಾಯಿಲೆ ಜಗತ್ತಿಗೆ ಹೊಸದಲ್ಲ.ಇಂತಹ ಖಾಯಿಲೆಯನ್ನು ಎದುರಿಸಲು ನಾವು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು.ಆಧುನಿಕ ಜೀವನ ಶೈಲಿ ನಮ್ಮ ದೈಹಿಕ ಸಾಮಥ್ಯವನ್ನು ಕುಗ್ಗಿಸಿದೆ ಆದ್ದರಿಂದ ನನ್ನ ಆರೋಗ್ಯ ನಾನು ಮಾಡಿಕೊಳ್ಳಬೇಕು ಎಂಬ ಜಾಗೃತಿಯನ್ನು ಜನರಲ್ಲಿ ಮೂಡಿಸಬೇಕಾಗಿದೆ ಎಂದು ಹೇಳಿದರು.
ಯಾವುದೇ ಪಕ್ಷದ ಸರಕಾರವಿರಲಿ ಅದಕ್ಕೆ ಒಂದು ಮಿತಿ ಇರುತ್ತದೆ ನಾವು ನಮ್ಮ ಆರೋಗ್ಯದ ಕುರಿತು ಖಾಳಜಿವಹಿಸಿಕೊಳ್ಳಬೇಕು ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕೆಂದು ಆರೋಗ್ಯ ಸಚೀವ ಡಾ.ಸುಧಾಕರ ಜೊತೆ ಮಾತನಾಡಿದ್ದೇನೆ ಎಲ್ಲ 224 ಶಾಸಕರಿಗೂ ನಿಮ್ಮ ನಿಮ್ಮ ಕ್ಷೇತ್ರದಲ್ಲಿ ಜಾಗೃತಿ ಮೂಡಿಸುವಂತೆ ಪತ್ರ ಬರೆದಿದ್ದೇನೆ ಎಂದು ಹೇಳಿದರು.
ಕಳೆದ ಎರಡು ವರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿರುವಂತೆ ಶೈಕ್ಷಣಿಕ ವಾತಾವರಣವೂ ಹಾಳಾಗಿದೆ ಇದಕ್ಕೆ ಸರಕಾರವಾಗಲಿ,ಸಮಾಜವಾಗಲಿ, ಶೈಕ್ಷಣಿಕ ಸಂಸ್ಥೆಯಾಗಲಿ ಕಾರಣವಲ್ಲ ಕೊವಿಡ್ ಮಹಾಮಾರಿಯಿಂದಾಗಿ ಇವೆಲ್ಲ ಆಗುತ್ತಿದೆ.ಕೊವಿಡ್‍ನಿಂದಾಗಿ ಮಕ್ಕಳನ್ನು ಮನೆಯಲ್ಲೆ ಕೂಡಿಹಾಕಲಾಗಿದೆ ಇದರಿಂದ ಕಲಿಕೆಯ ಸಾಮಥ್ರ್ಯ ಕಡಿಮೆಯಾಗುವ ಸಾಧ್ಯತೆ ಇದೆ ಆದ್ದರಿಂದ ಸರಕಾರ ಆನ್‍ಲೈನ್ ಕ್ಲಾಸ್ ಪ್ರಾರಂಭಿಸಿದೆ
ಇದಕ್ಕೆ ಅನುಕೂಲವಾಗುವುದಕ್ಕಾಗಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳೂ ಸೇರಿದಂತೆ 1.5 ಲಕ್ಷ ವಿದ್ಯಾರ್ಥಿಗಳಿಗೆ ಟ್ಯಾಬ್ಲೆಟ್ ವಿತರಿಸಲಾಗುತ್ತಿದೆ ವಿದ್ಯುತ್ ಸಮಸ್ಯೆ,ನೆಟ್‍ವರ್ಕ ಸಮಸ್ಯೆ ಹೀಗೆ ಸಣ್ಣ-ಪುಟ್ಟ ತೊಂದರೆಗಳು ಬರಬಹುದು ಆದರು ಸರಕಾರ ವಿದ್ಯಾರ್ಥಿಗಳಲ್ಲಿ ವಿಶ್ವಾಸತುಂಬುವ ಕೆಲಸ ಮಾಡುತ್ತಿದೆ. ಇಂದಿನ ಕಲಿಕೆ ಆಧುನಿಕ ತಂತ್ರಜ್ಞಾನವನ್ನು ಒಳಗೊಂಡಿದೆ. ಇದಕ್ಕೆ ನಾವು ಹೊಂದಿಕೊಳ್ಳಬೇಕು ಎಂದು ಹೇಳಿದರು.
ನಾನು ಶಿಕ್ಷಣ ಮಂತ್ರಿಯಾಗಿದ್ದ ಸಮಯದಲ್ಲಿ ಈ ಪಾಲಿಟೆಕ್ನಿಕ್ ಕಾಲೇಜ್ ಮಂಜೂರು ಮಾಡಿದ್ದೆ ಇಲ್ಲಿ ಕಲಿತವರು ನಿರುದ್ಯೋಗಿಗಳಾಗಿಲ್ಲ ಎನ್ನುವುದು ಸಂತಸ ನೀಡುತ್ತಿದೆ. ಅಂದು ನಾನು 150 ಪ್ರೌಢಶಾಲೆ ಹಾಗೂ ಜ್ಯೂನಿಯರ್ ಕಾಲೆಜ್ ವಿದ್ಯಾರ್ಥಿಗಳಿಗೆ ಕೌಶಲ್ಯಾಭಿವೃದ್ಧಿಯ ತರಬೇತಿ ನೀಡುವಂತೆ ಆದೇಶಿಸಿದ್ದೆ ಶಿಕ್ಷಣ ಎಂದರೆ ಒಬ್ಬನಲ್ಲಿರುವ ಕೌಶಲ್ಯವನ್ನು ಗುರುತಿಸಿ ಅವನ ಬೆಳವಣಿಗೆಗೆ ಸಹಕಾರಿಯಾಗಬೇಕು ಎಂದು ಹೇಳಿದರು.