ಆಳ್ವಾ ಫೌಂಡೇಷ್ ನಿಂದ ಆಶಾಕಾರ್ಯಕರ್ತೆಯರಿಗೆ ಆಹಾರಕಿಟ್ ವಿತರಣೆ

ಆದ್ಯೋತ್ ಸುದ್ದಿನಿಧಿ:
ತಾಲೂಕಿನ 148 ಆಶಾಕಾರ್ಯಕರ್ತರಿಗೆ ಆಳ್ವಾಪೌಂಡೇಷನ್‍ವತಿಯಿಂದ ಕಾನಸೂರು,ಕೋಲಸಿರ್ಸಿ,ಬಿಳಗಿ,ಕ್ಯಾದಗಿ ಮುಂತಾದ ವಿವಿಧ ಕಡೆಗೆ ಆಹಾರ ಧಾನ್ಯದ ಕಿಟ್‍ನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಆಳ್ವಾ ಫೌಂಡೇಷನ್‍ನ ನಿವೇದಿತಾ ಆಳ್ವಾ,ಕೊವಿಡ್‍ನ ಒಂದನೇ ಅವಧಿಯಲ್ಲಿ ಹಾಗೂ ಈಗ ಎರಡನೇ ಅವಧಿಯಲ್ಲಿ ಕೊವಿಡ್ ವಾರಿಯರ್ಸಗಳಾಗಿ ವೈದ್ಯರು ಎಷ್ಟು ಕೆಲಸ ಮಾಡಿದ್ದರೋ ಅಷ್ಟೆ ಖಾಳಜಿಯಿಂದ ಕಷ್ಟದಿಂದ ಅತಿಕಡಿಮೆ ಸಂಬಳ ಪಡೆದು ಆಶಾಕಾರ್ಯಕರ್ತರು ಕಾರ್ಯನಿರ್ವಹಿಸಿದ್ದಾರೆ.
ಅವರು ತಮ್ಮ ಕುಟುಂಬದ ಜವಾಬ್ದಾರಿ ನಿರ್ವಹಣೆ ಮಾಡುವುದರ ಜೊತೆಗೆ ಸಮಾಜದ ಕೆಲಸವನ್ನು ಮಾಡುತ್ತಿದ್ದಾರೆ. ಲಾಕ್‍ಡೌನ್,ಸೀಲ್‍ಡೌನ್ ಸಮಯದಲ್ಲಿ ಅವರು ತಮ್ಮ ಜೀವದ ಹಂಗು ತೊರೆದು ಜನರ ಸೇವೆಗೆ ನಿಂತಿದ್ದಾರೆ.ಅಂತಹ ಆಶಾಕಾರ್ಯಕರ್ತೆಯರನ್ನು ನಾವು ಗೌರವಿಸಬೇಕಾದ್ದು ನಮ್ಮ ಕರ್ತವ್ಯ.

ಇಂದು ಜನರು ಕೊವಿಡ್ ನಿಯಮವನ್ನು ಪಾಲಿಸುತ್ತಿಲ್ಲ ಮಾಸ್ಕ್ ಹಾಕುವುದನ್ನು ಮರೆತಿದ್ದಾರೆ ಇದು ಸರಿಯಲ್ಲ ಕೊವಿಡ್ ನಿರ್ಮೂಲನೆ ಮಾಡಬೇಕಾದ್ದು ಕೇವಲ ಸರಕಾರ,ಆರೋಗ್ಯ ಇಲಾಖೆ ಅಥವಾ ಇನ್ನಿತರ ಇಲಾಖೆಯ ಆಶಾಕಾರ್ಯಕರ್ತೆಯರ,ವೈದ್ಯರ ಜವಾಬ್ದಾರಿ ಮಾತ್ರವಲ್ಲ ನಾವೆಲ್ಲರೂ ಇದಕ್ಕೆ ಕೈಜೋಡಿಸಬೇಕಾಗಿದೆ. ಕೊವಿಡ್ ನಿರ್ಮೂಲನೆಗೆ ಕೈಗೊಳ್ಳಬೇಕಾದ ಮುಂಜಾಗ್ರತೆಯನ್ನು ಪಾಲಿಸಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ,ಸತೀಶ ನಾಯ್ಕ ಶಿರಸಿ,ಸಾವೇರ್ ಡಿಸಿಲ್ವಾ,ವಿ.ಎನ್.ನಾಯ್ಕ ಬೇಡ್ಕಣಿ,ಪ್ರಶಾಂತ ನಾಯ್ಕ ಹೊಸೂರು ಮುಂತಾದವರು ಉಪಸ್ಥಿತರಿದ್ದರು.

About the author

Adyot

Leave a Comment