ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಪಟ್ಟಣದ ಚತುಷ್ಪತ ಹೆದ್ದಾರಿ
ಕಾಮಗಾರಿಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.ನಂತರ ಹೊಸೂರು ತೋಟಗಾರಿಕಾ ಕ್ಷೇತ್ರದಲ್ಲಿ 2 ಕೊಟಿರೂ.ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತರಬೇತಿ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ, ಪಟ್ಟಣದ ಅಭಿವೃದ್ಧಿಗೆ ಅವಶ್ಯಕವಾಗಿರುವ ಅನೇಕ ಯೋಜನೆಗಳನ್ನು ಈಗಾಗಲೇ ತರಲಾಗಿದೆ ಇನ್ನೂ ಹಲವು ಯೋಜನೆಗಳು ಬರಲಿದೆ ಈಗ ಮೊದಲ ಹಂತದಲ್ಲಿ ತಾಳಗುಪ್ಪ-ಖಾನಾಪುರ ಹೆದ್ದಾರಿಯ ಪಟ್ಟಣವ್ಯಾಪ್ತಿಯ ಹೆದ್ದಾರಿಸುಧಾರಣಾ ಯೋಜನೆಯಡಿ ಚತುಷ್ಪತ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಒಟ್ಟೂ 850 ಮಿ. ಕಾಮಗಾರಿಯನ್ನು 5ಕೋಟಿರೂ. ವೆಚ್ಚದಲ್ಲಿ ನಡೆಸಲಾಗುವುದು ಹಾಲಿ ಇರುವ ರಸ್ತೆಯ ಮಧ್ಯಭಾಗದಿಂದ 7.5ಮೀ. ನಂತೆ ಎರಡು ಕಡೆಗೆ ವಿಸ್ತರಿಸಲಾಗುವುದು ಎರಡು ಭಾಗದಲ್ಲಿ ಪಕ್ಕಾ ಗಟಾರವನ್ನು ಈ ಯೋಜನೆಯವ್ಯಾಪ್ತಿಯಲ್ಲಿ ಬರುವ ತಿಮ್ಮಪ್ಪ ನಾಯಕ ವೃತ್ತ ಹಾಗೂ ರಾಮಕೃಷ್ಣ ಹೆಗಡೆ ವೃತ್ತವನ್ನು ಅಭಿವೃದ್ಧಿಪಡಿಸಲಾಗುವುದು. ಎರಡನೇ ಹಂತದಲ್ಲಿ ಭಗತ್‍ಸಿಂಗ ವೃತ್ತದಿಂದ ಹೊಸೂರು ಶಾಲೆಯವರೆಗೆ ನಡೆಸಲಾಗುವುದು ಎಂದು ಹೇಳಿದರು.
ತೋಟಗಾರಿಕಾ ತರಬೇತಿ ಕೇಂದ್ರದ ಕಟ್ಟಡಕ್ಕೆ ಶಂಕುಸ್ಥಾಪನೆ ನಡೆಸಿದ ಕಾಗೇರಿ,ದಿ.ಮರಿಗೌಡರನ್ನು ತೋಟಗಾರಿಕಾ ಪಿತಾಮಹ ಎಂದು ಕರೆಯುತ್ತಾರೆ. ಅವರ ಕಾಲದಲ್ಲೆ ಪ್ರತಿ ತಾಲೂಕಿನಲ್ಲಿ ತೋಟಗಾಋಇಕಾ ಕ್ಷೇತ್ರವನ್ನು ನೀಡಿದ್ದರು ಆದರೆ ಅವರು ನಿರೀಕ್ಷೆಗೆ ತಕ್ಕ ರೀತಿಯಲ್ಲಿ ಈ ತೋಟಗಾರಿಕಾ ಕ್ಷೇತ್ರದಲ್ಲಿ ಕೆಲಸ ನಡೆಯಲಿಲ್ಲ ಆದರೆ ಹೊಸುರು ಕ್ಷೇತ್ರದಲ್ಲಿ ತರಬೇತಿ ಕೇಂದ್ರವಿದೆ 35 ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ ಅವರಿಗೆ ಅನುಕೂಲಕ್ಕಾಗಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನೂತನ ಬಸ್ ನಿಲ್ದಾಣ ಸಂಪೂರ್ಣಗೊಂಡಿದ್ದು ಇನ್ನು ಕೆಲವೇ ದಿನದಲ್ಲಿ ಅದನ್ನು ಪ್ರಾರಂಭಿಸಲಾಗುವುದು ಬಸ್ ಡಿಪೋ ಪ್ರಾರಂಭಿಸಲು ಜೋಗರಸ್ತೆಯ ಪಡಂಬೈಲ್‍ನಲ್ಲಿ ಜಾಗವನ್ನು ಗುರುತಿಸಲಾಗಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷೆ ಚಂದ್ರಕಲಾ ನಾಯ್ಕ, ಉಪಾಧ್ಯಕ್ಷ ರವಿಕುಮಾರ ನಾಯ್ಕ, ಹಾಗೂ ಪಪಂ ಸದಸ್ಯರು. ಡಾ.ರವಿ ಹೆಗಡೆ ಹೂವಿನಮನೆ,ತಹಸೀಲ್ದಾರ ಪ್ರಸಾದ ಎಸ್.ಎ.,ತಾಪಂ ಮುಖ್ಯಾಧಿಕಾರಿ ಪ್ರಶಾಂತರಾವ್ ಮುಂತಾಧವರು ಉಪಸ್ಥಿತರಿದ್ದರು.