“ಬ್ಯಾಂಕ್ ಲೋನ್” ಚಲನಚಿತ್ರಕ್ಕೆ ಮುಹೂರ್ತ

ಆದ್ಯೋತ್ ಸುದ್ದಿನಿಧಿ
ಪ್ರದೀಪ ಸಾಗರ ಮೂವ್ಹೀಸ್ ಬೆಂಗಳೂರ ಇವರ ಬ್ಯಾಂಕ್ ಲೋನ್ ಕನ್ನಡ ಚಲನಚಿತ್ರ ದ ಮುಹೂರ್ತ ಸಮಾರಂಭ ಬೆಂಗಳೂರಿನ ಸಂಯುಕ್ತ ಸ್ಟುಡಿಯೋಸ್ ದಲ್ಲಿ ಸರಳವಾಗಿ ನೆರವೇರಿತು.
ಈ ಸಂದರ್ಭದಲ್ಲಿ ಪ್ರದೀಪ್ ಸೋನ್ಸ್, ಸಂಗೀತ ನಿರ್ದೇಶಕ ವಿ.ಮನೋಹರ, ಮುತ್ತುರಾಜ್ .ಟಿ, ಟಿ.ಎಸ್.ಕುಮಾರ್, ಚಂದ್ರಶೇಖರ್ ಮೊದಲಾದವರು ಉಪಸ್ಥಿತರಿದ್ದರು. ಹೆಣ್ಣಮಕ್ಕಳು ಬೆಂಗಳೂರಿನಂತಹ ನಗರದಲ್ಲಿ ಸ್ವಾವಲಂಬಿಗಳಾಗಿ ಬದುಕಲು ಎದುರಾಗುವ ಅಡಚಣೆಗಳ ಬಗ್ಗೆ ಬೆಳಕು ಚೆಲ್ಲಲಿದೆ .ಇದೊಂದು ಬದುಕಿನ ಪಯಣದ ಚಿತ್ರವಾಗಿದ್ದು ಹಲವಾರು ತಿರುವುಗಳನ್ನು ಒಳಗೊಂಡರೂ ತಮ್ಮ ಗುರಿಯನ್ನು ಹೇಗೆ ಮುಟ್ಟುತ್ತಾರೆ ಎಂಬ ಕಥಾವಸ್ತುವನ್ನು ಚಿತ್ರ ಒಳಗೊಂಡಿದೆ. ಕ್ಷಣಕ್ಷಣಕ್ಕೂ ಕುತೂಹಲ ಮೂಡಿಸುವ ಚಿತ್ರ ಪ್ರೇಕ್ಷಕರ ಮನ ತಟ್ಟುತ್ತದೆ .ಚಿತ್ರದ ಕುರಿತು ಹೆಚ್ಚಿನ ಮಾಹಿತಿಯನ್ನು ನಿರ್ದೇಶಕಿದ್ವಯರು ಬಿಟ್ಟುಕೊಡದೆ ಚಿತ್ರವನ್ನು ಚಿತ್ರಮಂದಿರದಲ್ಲೆ ನೋಡಿ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಬೇಕು ಎಂದು ಹೇಳಿದರು.
ಚಿತ್ರದ ಚಿತ್ರೀಕರಣ ಇದೇ ತಿಂಗಳಲ್ಲಿ ಆರಂಭವಾಗುತ್ತಿದೆ. ಬೆಂಗಳೂರಿಂದ ಗೋಕರ್ಣದವರೆಗೆ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟು 25 ದಿನಗಳ ಕಾಲ ಚಿತ್ರೀಕರಣ ಸತತ ನಡೆಯಲಿದೆ ಎಂದು ನಿರ್ಮಾಪಕ ಪ್ರದೀಪ್ ಸೋನ್ಸ್ ತಿಳಿಸಿದ್ದಾರೆ. ಮುಖ್ಯ ತಾರಾಗಣದಲ್ಲಿ ಪ್ರದೀಪ ಸೋನ್ಸ್ ,ಮನೋಜ್ ಶೆಟ್ಟಿ, (ನಟನಾ ಅಭಿನಯ ಶಾಲೆ), ಲಿಖಿತಾ(ಮಾಡೆಲ್)
ಸೇರಾ, (ಟೆಂಟ್ ಸಿನಿಮಾ),ಅವಿನಾಶ್ ಗಂಜಿಹಾಳ,ಮುರುಳೀಧರ್ ಮುಂತಾದವರಿದ್ದಾರೆ.

ಈಗಾಗಲೇ ಮನೆ ಚಲನಚಿತ್ರ ಸುಮಾರು 75 ರಾಷ್ಟ್ರೀಯ ,ಅಂತಾರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳನ್ನು ಪಡೆದಿದ್ದು ಇನ್ನೂ ಹಲವಾರು ಪ್ರಶಸ್ತಿಗಳು ದೊರೆಯುವ ನಿರೀಕ್ಷೆ ನಮಗಿದೆ. ಈ ಚಿತ್ರ ನಮ್ಮಲ್ಲಿ ಇನ್ನಷ್ಟು ಯಶಸ್ವಿ ಚಿತ್ರಗಳನ್ನು ನಿರ್ದೇಶನ ಮಾಡಲು ಪ್ರೋತ್ಸಾಹ, ಹುಮ್ಮಸ್ಸು ನೀಡಿದೆ .ತಂಡದವರ ಶ್ರಮ ಸಾರ್ಥಕ ಆಗಿದೆ .ಈಗ ಕಥೆಯ ಆಯ್ಕೆ, ಪಾತ್ರಗಳತ್ತ ಹೆಚ್ಚು ಗಮನ ಹರಿಸುವ ಜವಾಬ್ದಾರಿ ಬಿದ್ದಿದೆ ಎಂದು ಯುವ ಪ್ರತಿಭಾನ್ವಿತ ನಿರ್ದೇಶಕಿದ್ವಯರಾದ ಪೂರ್ಣಶ್ರೀ ಆರ್,ರಶ್ಮೀ ಎಸ್ ತಿಳಿಸಿದರು.
ಛಾಯಾಗ್ರಹಣ ವಿನಾಯಕ ರೇವಡಿ, ಚಿತ್ರಕಥೆ, ಸಂಕಲನ ತಾಂತ್ರಿಕ ನಿರ್ದೇಶನ ಟಿ. ಮುತ್ತುರಾಜು, ಸಂಭಾಷಣೆಯನ್ನು ಟಿ.ಮುತ್ತುರಾಜು ಮತ್ತು ಸತೀಶ್ ಜೋಶಿ, ಸಾಹಿತ್ಯದ ಜೊತೆಗೆ ಸಂಗೀತವನ್ನು ವಿ.ಮನೋಹರ ನೀಡಲಿದ್ದು, ಪತ್ರಿಕಾ ಸಂಪರ್ಕ ಡಾ.ಪ್ರಭು ಗಂಜಿಹಾಳ, ಡಾ.ವಿರೇಶ ಹಂಡಗಿ , ನಿರ್ದೇಶನವನ್ನು ಈ ಹಿಂದೆ ಶ್ರೀ ಕಬ್ಬಾಳಮ್ಮ ಮಹಿಮೆ ಪೌರಾಣಿಕ ಸಿನೇಮಾ ಹಾಗೂ ಮನೆ ಕಲಾತ್ಮಕ ಚಲನಚಿತ್ರ ನಿರ್ದೇಶನ ಮಾಡಿದ್ದ ಜಂಟಿ ನಿರ್ದೇಶಕಿಯರಾದ ಪೂರ್ಣಶ್ರೀ ಆರ್, ಮತ್ತು ರಶ್ಮೀ ಎಸ್ ನಿರ್ದೇಶನ ಮಾಡುತ್ತಿದ್ದಾರೆ.

About the author

Adyot

Leave a Comment