ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ಪ್ರಯೋಗ ಸ್ವಯಂಸೇವಾ ಸಂಸ್ಥೆ ಹಾಗೂ ಸಂಸ್ಕೃತಿ ಸಂಪದ ಸಂಸ್ಥೆಗಳು
ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಗಜಾನನ ಶರ್ಮ ರಚಿಸಿರುವ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ದಳಾಗಿರುವ ಚೆನ್ನಭೈರಾದೇವಿಯ ಜೀವನ ಚಿತ್ರಣವಿರುವ ಐತಿಹಾಸಿಕ ಕಾದಂಬರಿಯ ಎರಡನೇ ಆವೃತ್ತಿಯನ್ನು ಬಿಡುಗಡೆಗೊಳಿಸಲಾಯಿತು.
ಪುಸ್ತಕಬಿಡುಗಡೆಗೊಳಿಸಿ ಮಾತನಾಡಿದ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ,ನಾವು ನಮ್ಮ ಇತಿಹಾಸವನ್ನು ವಿದೇಶಿ ಇತಿಹಾಸಕಾರರ ದೃಷ್ಠಿಯಿಂದ ನೋಡುತ್ತಿರುವುದರಿಂದ ನಮ್ಮ ಇತಿಹಾಸದ ನಿಜವಾದ ಅರಿವು ನಮಗಿಲ್ಲ.ಪರಕೀಯ ಆಡಳಿತ ಗುಲಾಮಿ ಮನಸ್ಥಿತಿಯಿಂದ ನಾವು ಇನ್ನೂ ಹೊರಗೆ ಬಂದಿಲ್ಲ ನಮ್ಮ ಇತಿಹಾಸಕ್ಕೆ ಭವ್ಯ ಪರಂಪರೆ ಇದೆ ಜಗತ್ತಿ ಹಲವು ದೇಶಗಳು ಬೇರೆ ಸಂಸ್ಕøತಿಯ ಆಘಾಥಕ್ಕೆ ನಾಸವಾಗಿವೆ ಆದರೆ ನಾವು ಸಾಕಷ್ಟು ಪರಕೀಯರ ದಾಳಿಯನ್ನೂ ಎದುರಿಸಿಯೂ ನಮ್ಮತನವನ್ನು ಉಳಿಸಿಕೊಂಡಿದ್ದೇವೆ ಈಗಿರುವ ಇತಿಹಾಸದಲ್ಲಿ ನಮ್ಮ ಸಾಧಕರನ್ನು ಗುರುತಿಸಿಲ್ಲ ಬ್ರಿಟೀಷರು ನಮ್ಮ ಸಂಸ್ಕøತಿಯನ್ನು ಸಾರುವ ನಮ್ಮ ಶಿಕ್ಷಣ ವ್ಯವಸ್ಥೆಯನ್ನು ಹಾಳುಮಾಡಿದ್ದಾರೆ. ನಮ್ಮ ದೃಷ್ಠಿಕೊನವನ್ನು ನಾವು ಬೆಳೆಸಿಕೊಳ್ಳಬೇಕು ನಿಜವಾದ ಇತಿಹಾಸವನ್ನು ಅಧ್ಯಯನ ಮಾಡುವುದರ ಜೊತೆಗೆ ಯುವಜನತೆಗೆ ಅದನ್ನು ತಿಳಿಸುವ ಪ್ರಯತ್ನ ಮಾಡಬೇಕು ಎಂದು ಹೇಳಿದರು.
ಅಭಿವೃದ್ಧಿಯ ದೃಷ್ಠಿಕೋನವನ್ನು ನಾವು ಬದಲಿಸಿಕೊಳ್ಳಬೇಕು ರಸ್ತೆ ಮಾಡುವುದು,ಬೆಳಕು ನೀಡುವುದು ಗುಡಿಸಲು ಕಟ್ಟುವುದು ಇದಷ್ಟೆ ಅಭಿವೃದ್ಧಿಯಲ್ಲ ಸಂಸ್ಕಾರ ಎನ್ನುವುದು ಕೇವಲ ಮನುಷ್ಯನಿಗೆ ಮಾತ್ರವಲ್ಲಿ ಸಮಾಜಕ್ಕೂ ಅವಶ್ಯಕ ಕಲೆ,ಸಾಹಿತ್ಯ,ಸಾಂಸ್ಕøತಿಕ ಚಟುವಟಿಕೆಗಳು ಸೇರಿದಂತೆ ಸಮಾಜದ ಎಲ್ಲಾ ಕ್ಷೇತ್ರದಲ್ಲೂ ಅಭಿವೃದ್ಧಿಯಾದರೆ ಅದು ನಿಜವಾದ ಅಭಿವೃದ್ಧಿ. ನಮ್ಮ ಜಿಲ್ಲೆಯ ಇತಿಹಾಸವನ್ನು ಸಾರುವ ಚೆನ್ನಭೈರಾದೇವಿ ಕಾದಂಬರಿ ನಮ್ಮ ಸಮಾಜಕ್ಕೆ ದೊರಕಿರುವ ಅತ್ಯುತ್ತಮ ಕೊಡುಗೆ ಇದನ್ನು ಯುವಜನತೆ ಓದಬೇಕು ಎಮದು ಹೇಳಿದರು.
ಸುಮಾರು 54 ವರ್ಷಗಳ ಕಾಲ ಉತ್ತರಕನ್ನಡ ಜಿಲ್ಲೆಯ ಭಾಗವಾದ ನಗರೆ, ಹಾಡುವಳ್ಳಿ ರಾಜ್ಯವನ್ನು ಆಳಿದ ಗೇರುಸೊಪ್ಪೆಯ ಕಾಳುಮೆಣಸಿನ ರಾಣಿ ಎಂದೇ ಪ್ರಸಿದ್ಧವಾದ ಚೆನ್ನಭೈರಾದೇವಿ ನಮ್ಮ ನೆಲದವಳು. ಓರ್ವ ಮಹಿಳೆಯಾಗಿ ತನ್ನ ಆಡಳಿತದ ಕಾಲದಲ್ಲಿ ರಾಜ್ಯವನ್ನು ಸಂಪದ್ಭರಿತವಾಗಿಸುವದರ ಜೊತೆಗೆ ನೆಮ್ಮದಿ, ಶಾಂತ ವಾತಾವರಣವನ್ನು ತರಲು ಶ್ರಮಿಸಿದವಳು. ತನ್ನ ಆಡಳಿತದ ಕ್ಷೇತ್ರಕ್ಕೆ ವಿರೋಧಿಗಳು ಕಾಲಿಡದಂತೆ ಧೈರ್ಯ ಸಾಹಸದಿಂದ ಹಿಮ್ಮೆಟ್ಟಿಸಿ ಕಾಪಿಟ್ಟುಕೊಂಡವಳು. ಕಾಡಿನಲ್ಲಿ ಬೆಳೆಯುತ್ತಿದ್ದ ಉತ್ಕøಷ್ಟ ಗುಣಮಟ್ಟದ ಕಾಳುಮೆಣಸನ್ನು ನಾಡಿನಲ್ಲೂ ಬೆಳೆಯಬಹುದೆಂದು ತೋರಿಸಿ ಸಾಹಸ ಮೆರೆದವಳು. ಕಾಳುಮೆಣಸನ್ನು ವಿದೇಶಕ್ಕೆ ರಪ್ತು ಮಾಡಿ, ಬೆಳೆಗಾರರ ದುಡಿಮೆಗೆ ಮೌಲ್ಯ ತಂದುಕೊಟ್ಟವಳು. ರಾಣಿ ಚೆನ್ನಭೈರಾದೇವಿಗೆ ಕೊಡಬೇಕಾಗಿದ್ದ ಗೌರವವನ್ನು ನಾವು ಕೊಟ್ಟಿಲ್ಲ. ಇದೀಗ “ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮಾ” ಗೀತೆಯ ಮೂಲಕ ಮೂರು ಕೋಟಿ ಜನರನ್ನು ತಲುಪಿದ ಸಾಹಿತಿ ಡಾ.ಗಜಾನನ ಶರ್ಮಾ ಚಿನ್ನಭೈರಾದೇವಿಯ ಹೆಸರನ್ನು ಹಸಿರಾಗಿರಿಸಲು ಅವಳ ಕುರಿತಾದ ಬೃಹತ್ ಕಾದಂಬರಿ ಬರೆದಿದ್ದು ಸ್ವಾಗತಾರ್ಹ ಎಂದು ಅವರು ಶ್ಲಾಘಿಸಿದರು.
ಚೆನ್ನಭೈರಾದೇವಿ ಕೃತಿಯನ್ನು ಪರಿಚಯಿಸಿದ ಚಿಂತಕ ದೇವೇಂದ್ರ ಬೆಳೆಯೂರು ಚೆನ್ನಭೈರಾದೇವಿಯಲ್ಲಿ ಚರಿತ್ರೆ-ಸಾಹಿತ್ಯ ಎರಡೂ ಸಮ್ಮಿಳಿತವಾಗಿದೆ. ಹೇಳಬೇಕಾದ ಅಂಶವನ್ನು ಇತಿಹಾಸಕ್ಕೆ ಅಪಚಾರವಾಗದಂತೆ ತಾತ್ವಿಕ ಅಂಶಗಳನ್ನೊಳಗೊಂಡು ಜೀವನದ ಸೂಕ್ಷ್ಮವನ್ನು ಚಿತ್ರಿಸಲಾಗಿದೆ. ನವೋದಯ, ನವ್ಯ, ನವ್ಯೋತ್ತರ ಘಟನಾವಳಿಗಳನ್ನು, ಜೀವನದ ವೈರುಧ್ಯಗಳನ್ನು ಕೃತಿ ಒಳಗೊಂಡಿದೆ ಎಂದರು.
ಮುಖ್ಯ ಅತಿಥಿಗಳಾಗಿ ಕೃತಿಕಾರ ಡಾ.ಗಜಾನ ಶರ್ಮಾ, ಲೇಖಕ ಡಾ.ಬೈರಮಂಗಲ ರಾಮೇಗೌಡ, ಅಂಕಿತ ಪುಸ್ತಕ ಪ್ರಕಾಶನದ ಪ್ರಕಾಶ ಕಂಬತ್ತಳ್ಳಿ, ಸಂಸ್ಕøತಿ ಸಂಪದದ ಪ್ರಮುಖ ದೊಡ್ಮನೆ ವಿಜಯ ಹೆಗಡೆ, ಸಾಹಿತ್ಯಾಭಿಮಾನಿಗಳಾದ ಕೆ.ಜಿ.ನಾಗರಾಜ ಹಾಗೂ ಸಿ.ಎಸ್.ಗೌಡರ್ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕೃತಿಕಾರ ಡಾ.ಗಜಾನನ ಶರ್ಮಾ ಅವರನ್ನು ಆರ್.ಎಂ.ಬಾಪಟ್ ಸಾಗರ, ಎಚ್.ಕೆ.ಪರಮಾತ್ಮ, ಸಿ.ಎಸ್.ಗೌಡರ್, ಪಿ.ಬಿ.ಹೊಸೂರ ಗೌರವಿಸಿದರು.
ಪ್ರಯೋಗ ಸ್ವಯಂಸೇವಾ ಸಂಸ್ಥೆಯ ಗಂಗಾಧರ ಕೊಳಗಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾಚಾರ್ಯ ಪ್ರೊ.ಎಂ.ಕೆ.ನಾಯ್ಕ ನಿರ್ವಹಿಸಿದರು.