26 ಟನ್ ಅನ್ನಭಾಗ್ಯ ಅಕ್ಕಿ ಸಾಗಿಸುತ್ತಿದ್ದ ಲಾರಿ ವಶಕ್ಕೆ ಇಬ್ಬರ ಬಂಧನ

ಆದ್ಯೋತ್ ಸುದ್ದಿನಿಧಿ:
ಹಾವೇರಿಯಿಂದ-ಮಂಗಳೂರಿಗೆ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿದ್ದ ಲಾರಿಯನ್ನು ಉತ್ತರಕನ್ನಡ ಜಿಲ್ಲೆಯ ಶಿರಸಿಯ ಚಿಪಗಿಕ್ರಾಸ್ ಬಳಿ ವಶಪಡಿಸಿಕೊಳ್ಳಲಾಗಿದ್ದು ಇಬ್ಬರನ್ನು ಬಂಧಿಸಲಾಗಿದೆ.
58.50ರೂ.ಮೌಲ್ಯದ 26ಟನ್ ನ 520 ಮೂಟೆಯನ್ನು ಹಾಗೂ 6ಲಕ್ಷರೂ.ಮೌಲ್ಯದ ಲಾರಿಯನ್ನು ವಶಪಡಿಸಿಕೊಳ್ಳಲಾಗಿದೆ.

ಹಾವೇರಿಯ ಸಚಿನ್ ಕಬ್ಬೂರು,ಹಾಗೂ ಸಂಗಪ್ಪ ಅಸೋಟಿ ಬಂಧಿತ ಆರೋಪಿತರಾಗಿದ್ದು ಮಂಗಳೂರಿನ ಶ್ರೀ ಗಣೇಶ ಕಂಪನಿಯ ಬ್ರಜೇಶ ಶೆಟ್ಟಿ ಎನ್ನುವವನು ಇನ್ನೋರ್ವ ಆರೋಪಿಯಾಗಿದ್ದಾನೆ.

About the author

Adyot

Leave a Comment