ಆದ್ಯೋತ್ ಸಿನೇಮಾಸುದ್ದಿ:
ಇಂಡಾಲ ನಗರ ಶಿಂಧೋಳ್ಳಿ ಗ್ರಾಮದ ಶ್ರೀ ಗಣಪತಿ ದೇವಸ್ಥಾನದಲ್ಲಿ ನಿರಂಜನ ಸ್ವಾಮಿಗಳು ನಿರ್ಮಾಣದ ‘ಉಡಾಳ್ ಕಂಪನಿ‘ ಚಲನಚಿತ್ರದ ಮುಹೂರ್ತ ಸಮಾರಂಭ ಜರುಗಿತು.
ಯುವ ನಿರ್ದೇಶಕ ಸಂಜಯ್ ಎಚ್ ನಿರ್ದೇಶನದ “ಉಡಾಳ್ ಕಂಪನಿ” ಚಿತ್ರಕ್ಕೆ ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್ ಕ್ಲಾಪ್ ಮಾಡುವ ಮೂಲಕ ಚಾಲನೆ ನೀಡಿ ಶುಭ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಹೆಬ್ಬಾಳ್ಕರ್,ಚಲನಚಿತ್ರಗಳ ನಿರ್ಮಾಣ, ನಿರ್ದೇಶನ,ತಾಂತ್ರಿಕತೆ,ಲೋಕೆಶನ್ ಗಳು ಬೆಂಗಳೂರಿಗಷ್ಟೇ ಸೀಮಿತವಾಗದೆ ಉತ್ತರ ಕರ್ನಾಟಕದವರೂ ಪಾಲ್ಗೊಳ್ಳುವದಲ್ಲದೆ,ಇಲ್ಲಿನ ಪ್ರಕೃತಿ ತಾಣಗಳು,ಐತಿಹಾಸಿಕ ಸ್ಥಳಗಳೂ ಚಲನಚಿತ್ರಗಳಲ್ಲಿ ತೋರಿಸುವಂತಾಗಬೇಕು. ಉತ್ತರ ಕರ್ನಾಟಕದಲ್ಲಿ ಸಾಕಷ್ಟು ಜನ ಪ್ರತಿಭಾವಂತ ಕಲಾವಿದರಿದ್ದು, ಸಕಾಲದಲ್ಲಿ ಅವಕಾಶಗಳು ಸಿಗದೇ ವಂಚಿತರಾಗುತ್ತಿದ್ದಾರೆ, ಇವತ್ತು ಅಂತಹ ಪ್ರತಿಭೆಗಳನ್ನು ಗುರುತಿಸಿ, ಉತ್ತರ ಕರ್ನಾಟಕವು ಕೂಡ ಸಿನೆಮಾ ಕ್ಷೇತ್ರದಲ್ಲಿಯೂ ಕಡಿಮೆ ಇಲ್ಲ ಎನ್ನುವುದನ್ನು ತೋರಿಸಿಕೊಡಬೇಕು ಎಂದು ಹೇಳಿದರು.
ಈ ತಿಂಗಳಲ್ಲೇ ಚಲನಚಿತ್ರದ ಚಿತ್ರೀಕರಣ ಪ್ರಾರಂಭವಾಗುತ್ತಿದ್ದು, ಸಂಪೂರ್ಣ ಉತ್ತರ ಕರ್ನಾಟಕದಲ್ಲೇ ನಡೆಯಲಿದೆ.ಈ ಚಿತ್ರದ ಮೂಲಕ ಹೊಸ ಯುವ ಪ್ರತಿಭೆ ಸಂಜಯ್ ಎಚ್ ನಿರ್ದೇಶನ ಕ್ಷೇತ್ರಕ್ಕೆ ಪ್ರವೇಶಿಸುತ್ತಿದ್ದಾರೆ.
ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಶಾಲಾ ಜೀವನದಲ್ಲಿ ಆಗು ಹೋಗುಗಳ ಸುತ್ತಮುತ್ತ ನಡೆಯುವ ಪ್ರೇಮಕತೆ. ಪ್ರತಿಯೊಬ್ಬರ ಜೀವನದಲ್ಲೂ ಒಂದು ಹೇಳಲಾಗದ ಕಥೆ ಇರುತ್ತದೆ. ಅದನ್ನು ತಲುಪುವ ಹಾದಿಯಲ್ಲಿ ಎದುರಿಸುವ ಸಮಸ್ಯೆಗಳ ಸುತ್ತ ಈ ಕತೆ ಸಾಗುತ್ತದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.
ಚಿತ್ರದಲ್ಲಿ ನಾಯಕ ನಟರಾಗಿ ಸಂದೀಪ್ ಎಸ್ ಎಮ್ , ನಾಯಕಿಯಾಗಿ ಪ್ರಿಯಾ ಸವದಿ. ಪ್ರಮುಖ ಪಾತ್ರದಲ್ಲಿ ಮಹಾಭಾರತ ಬಸವರಾಜ, ಅಭಿನಯಿಸುತ್ತಿದ್ದಾರೆ.
ಛಾಯಾಗ್ರಹಣ ತಂಡದಲ್ಲಿ ರಂಜಿತ್ ತಿಗಡಿ, ಮಂಜುಗೌಡ, ರವಿ ಸೂರ್ಯ ಅವರ ಸಂಗೀತ ನೀಡಲಿದ್ದು,
ಪತ್ರಿಕಾ ಸಂಪರ್ಕ ಡಾ. ಪ್ರಭು ಗಂಜಿಹಾಳ, ಡಾ. ವಿರೇಶ ಹಂಡಗಿ ಅವರದಿದೆ. ಕಾರ್ಯಕಾರಿ ನಿರ್ಮಾಪಕರಾಗಿ ಅನಿಲ ಹುದಲಿ, ಕೃಷ್ಣ ನಾಯಕರ ಜವಾಬ್ದಾರಿ ಹೊತ್ತಿದ್ದಾರೆ.
ಈ ಚಿತ್ರದ ನಿರ್ಮಾಪಕರು ನಿರಂಜನ ಸ್ವಾಮಿಗಳು. ಮುಹೂರ್ತ ಸಂದರ್ಭದಲ್ಲಿ ಗ್ರಾಮದ ಗುರು ಹಿರಿಯರು, ಸ್ಥಳೀಯ ಜನ ಪ್ರತಿನಿಧಿಗಳು, ಮಹಾಂತೇಶಣ್ಣ ಮತ್ತಿಕೊಪ್ಪ, ಕೃಷ್ಣ ನಾಯ್ಕರ್, ಮಂಜು, ಅನಿಲ ಹುದಲಿ, ರವಿ,ರಂಜಿತ ತಿಗಡಿ,ಮಹಾಂತೇಶ ರಣಗಟ್ಟಿಮಠ, ಮಹೇಶ ಶಾಸ್ತ್ರಿಗಳು, ಪ್ರವೀಣ ಕಣಗಲೆ, ಉಮೇಶ ಬಡಿಗೇರ, ಬಸವರಾಜ ಹಮ್ಮಿಣಿ, ಈರಣ್ಣ ಉಮ್ರಾಣಿ, ಬಸಪ್ಪ ಹುದಲಿ, ಸೇರಿದಂತೆ ಅನೇಕ ಕಲಾವಿದರು ಉಪಸ್ಥಿತರಿದ್ದರು.