ಸಂಸ್ಕೃತ ಬಳಕೆಯಿಂದ ಸಂಸ್ಕೃತಿ ಉಳಿಸಬಹುದು

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿ ಮಾಡರ್ನ್ ಎಜುಕೇಷನ್ ಸೊಸೈಟಿ ಹಾಗೂ ಎಮ್ ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ’IQAC ಸಂಸ್ಕೃತ ವಿಭಾಗ’ದಿಂದ ವೆಬಿನಾರ್ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಯೋಗ ಯುನಿವರ್ಸಿಟಿ ವಿಶ್ರಾಂತ ಕುಲಪತಿ,ಬೆಂಗಳೂರಿನ ವೇದವಿಜ್ಞಾನ ಶೋಧ ಸಂಸ್ಥಾನದ ನಿರ್ದೇಶಕರಾದ ಡಾ.ರಾಮಚಂದ್ರ ಭಟ್ಟ ಕೋಟೆಮನೆ “ರಾಷ್ಟ್ರೀಯ ಶಿಕ್ಷಣ ನೀತಿಃ ೨೦೨೦- ಸಂಸ್ಕೃತ ವ್ಯಾಪ್ತಿಃ – ಪರಾಮರ್ಶಃ ” ಎಂಬ ವಿಷಯದ ಬಗ್ಗೆ ಮಾತನಾಡಿ,ಸಂಸ್ಕೃತ ಬಳಕೆಯಿಂದ ಮಾತ್ರವೇ ಸಂಸ್ಕೃತಿಯನ್ನು ಉಳಿಸಿಕೊಳ್ಳಬಹುದು, ಮತ್ತು ಆಧುನಿಕ ಶಿಕ್ಷಣದಲ್ಲಿ ಸಂಸ್ಕೃತವನ್ನು ಅಳವಡಿಸುವ ಮೂಲಕ ಮಕ್ಕಳನ್ನು ಸಂಸ್ಕಾರವಂತರನ್ನಾಗಿಸಬಹುದು.ಸಂಸ್ಕೃತ ಕೇವಲ ಭಾಷೆ ಅಲ್ಲ ಅದರ ಒಳಗಿರುವ ವಿಷಯ ಅಗಾಧವಾದದ್ದು ಅದು ಜ್ಞಾನ ಸಮುದ್ರ ಈಗ NEP (National education policy) ಭಾಷೆಯನ್ನು ಬಿಟ್ಟು ಭಾಷೆಯ ಒಳಗಿರುವ ವಿಷಯದ ಬಗ್ಗೆ ಲಕ್ಷ ಹಾಕಿದೆ ಎಂದು ಹೇಳಿದರು.

ವೆಬಿನಾರ್ ನಲ್ಲಿ ಉಪಸ್ಥಿತರಿದ್ದ ಶೃಂಗೇರಿಯ ರಾಜೀವ್ ಗಾಂಧಿ ಪರಿಸರದ ಸಹಪ್ರಾದ್ಯಾಪಕ ಡಾ/ಗಣೇಶ ಪಂಡಿತ್ ಮಾತನಾಡಿ,
ಸಂಸ್ಕೃತಕ್ಕೆ ಭಾಷಾ ಮಟ್ಟದಲ್ಲಿ ಅವಕಾಶ ಕಡಿಮೆ ಇದ್ದರು ಜ್ಞಾನ ಮಟ್ಟದಲ್ಲಿ ಹೆಚ್ಚಿನ ಅವಕಾಶ ಕೊಡಲಾಗಿದೆ ಹಾಗೂ ಸಂಸ್ಕೃತ ಅಧ್ಯಾಪಕರಲ್ಲಿ ಕೇವಲ ಭಾಷಾ ಅಧ್ಯಾಪಕರು ಮಾತ್ರ ಅಲ್ಲ ಬೇರೆಬೇರೆ ಕೌಶಲ್ಯದ ಅಭಿವೃದ್ಧಿಗೂ ಸಂಸ್ಕೃತವು ಪೂರಕವಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದಲ್ಲಿ ಡಾ/ವಿನಯಚಂದ್ರ,(ಬೆಂಗಳೂರು) ಭಾಗವಹಿಸಿದ್ದರು.
ವೆಬ್ ಎಕ್ಸ್ ಆಪ್ ನ ಮೂಲಕ ಆಯೋಜಿಸಿದ್ದ ವೆಬಿನಾರ್ ಲ್ಲಿ
ಶಿರಸಿಯ ಎಮ್.ಎಮ್.ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯ ಡಾ/ ಕೋಮಲಾ ಭಟ್, ಪ್ರಾಸ್ತಾವಿಕವಾಗಿ ಮಾತನಾಡಿದರೆ ಸಂಸ್ಕೃತ ವಿಭಾಗದ ಮುಖ್ಯಸ್ಥರಾದ ಡಾ/ ವಿನಾಯಕ ಭಟ್ಟ ನಿರ್ವಹಿಸಿದರು.

About the author

Adyot

Leave a Comment