ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಯುವಕಾಂಗ್ರೆಸ್ ಕಾರ್ಯಕರ್ತರು,6ಲಕ್ಷಕೋಟಿರೂ. ಮೌಲ್ಯದ ದೇಶದ ಆಸ್ತಿಯನ್ನು ಖಾಸಗಿಯವರಿಗೆ ಮಾರಲು ಅನುಕೂಲವಾಗುವ ಎನ್‍ಎಮ್‍ಪಿ ಯೋಜನೆಯನ್ನು ಘೋಷಣೆ ಮಾಡಿದೆ ಎಂದು ಆರೋಪಿಸಿ ಕೇಂದ್ರಸರಕಾರದ ವಿರುದ್ಧ ಸೋಮವಾರ ತಾಲೂಕು ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ ಹೊಸೂರು ನೇತೃತ್ವದಲ್ಲಿ ಪಟ್ಟಣದ ರಾಮಕೃಷ್ಣ ಹೆಗಡೆ ವೃತ್ತದಿಂದ ರಾಜಮಾರ್ಗದ ಮೂಲಕ ತಹಸೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆಯನ್ನು ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ, ದೇಶದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರಮೋದಿ ನೇತೃತ್ವದ ಬಿಜೆಪಿ ಪಕ್ಷ ಹಗಲು ದರೋಡೆಗೆ ಇಳಿದಿದ್ದು ಸಾರ್ವಜನಿಕ ಆಸ್ತಿಯನ್ನು ಖಾಸಗಿಯವರಿಗೆ ಮಾರಲು ಮುಂದಾಗಿದೆ ಸುಳ್ಳು ಭರವಸೆ ನೀಡಿ ಅಧಿಕಾರ ಹಿಡಿದಿರುವ ಮೋದಿಯವರು ಕೆಲವೇ ಕೆಲವು ಖಾಸಗಿ ಕಂಪನಿಯವರಿಗೆ ಅನುಕೂಲವಾಗುವಂತೆ ಕಾಯಿದೆಯನ್ನು ತಿದ್ದು ಪಡಿ ಮಾಡುತ್ತಿದ್ದಾರೆ ರೈತರ ಪ್ರತಿಭಟನೆಗಾಗಲಿ, ವಿರೋದ ಪಕ್ಷದ ಪ್ರತಿಭಟನೆಯನ್ನಾಗಲಿ ಗಣನೆಗೆ ತೆಗೆದುಕೊಳ್ಳದೆ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾದ ಸರ್ವಾಧಿಕಾರಿ ಪ್ರವೃತ್ತಿಯನ್ನು ತೋರಿಸುತ್ತಿದ್ದಾರೆ ಇಂತಹ ಸರಕಾರವನ್ನು ಕಿತ್ತೊಗೆಯದಿದ್ದರೆ ಮುಂದಿನ ದಿನಗಳಲ್ಲಿ ಜನಸಾಮಾನ್ಯರ ಬದುಕು ಕಷ್ಟವಾಗಲಿದೆ ಎಂದು ಹೇಳಿದರು.
ಯುವಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ ನಾಯ್ಕ ಮಾತನಾಡಿ,ಹಣಕಾಸು ಸಚೀವೆ ನಿರ್ಮಲಾ ಸೀತಾರಾಮನ್ ಘೋಷಣೆ ಮಾಡಿರುವ ಎನ್‍ಎಮ್‍ಪಿ ಯೋಜನೆಯು ಸುಮಾರು 6ಲಕ್ಷಕೋಟಿರೂ.ಮೌಲ್ಯದ ಸಾರ್ವಜನಿಕರ ಆಸ್ತಿಯನ್ನು ಅಭಿವೃದ್ಧಿಯ ಹೆಸರಲ್ಲಿ ಖಾಸಗಿಯವರಿಗೆ ಮಾರಲು ಹೊರಟಿದೆ ದೇಶದ ಸಂಪತ್ತನ್ನು ಕೆಲವೇ ಕೆಲವು ಉದ್ಯಮಿಗಳಿಗೆ ಅನುಕೂಲವಾಗಲಿದೆ ಹೊರತು ಜನಸಾಮಾನ್ಯರಿಗಲ್ಲ. ಕಾಂಗ್ರೆಸ್ ಪಕ್ಷ ಕೂಡಿಟ್ಟಿದ್ದ ದೇಶದ ಸಂಪತ್ತು ಇದಾಗಿದ್ದು 25 ವಿಮಾನ ನಿಲ್ದಾಣ,40 ಪ್ರಮುಖ ರೇಲ್ವೆ ನಿಲ್ದಾಣಗಳು, ಸೇರಿದಂತೆ ರಸ್ತೆಗಳುದೂರಸಂಪರ್ಕ,ಬಂದರು ಸಾಗಾಣಿಕೆ ಇವೆಲ್ಲವನ್ನು ಖಾಸಗಿಯವರ ಕೈಗೆ ಒಪ್ಪಿಸುತ್ತಿದೆ ಇದರಿಂದ ಬಹಸಂಖ್ಯಾತ ಬಡವರು,ಮಧ್ಯಮವರ್ಗದವರು,ರೈತರು ತೊಂದರೆಗೆ ಒಳಗಾಗುತ್ತಾರೆ ಆದ್ದರಿಂದ ಸರಕಾರದ ಸಂಸ್ಥೆಗಳನ್ನು ಖಾಸಗೀಕರಣಗೊಳಿಸುವುದನ್ನು ಬಿಟ್ಟು ಹಿಂದಿನಂತೆ ಅವು ನಡೆಯುವಂತೆ ಮಾಡಬೇಕು ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಉಗ್ರಪ್ರತಿಭಟನೆ ಮಾಡಲಿದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಯುವಕಾಂಗ್ರೆಸ್ ಜಿಲ್ಲಾಉಪಾಧ್ಯಕ್ಷ ಕುಮಾರ ಜೋಷಿ,ಪ್ರದಾನಕಾರ್ಯದರ್ಶಿ ಸೂರಜ ನಾಯ್ಕ,ಕಾಂಗ್ರೆಸ್ ಪ್ರಮುಖರಾದ ವಿ.ಎನ್.ನಾಯ್ಕ,ಮುನಾವರ ಗುರ್ಕಾರ್,ಸಿ.ಆರ್.ನಾಯ್ಕ,ವಿಶ್ವ ಮಡಿವಾಳ,ಶಶಿಕುಮಾರ ನಾಯ್ಕ,ತಿರುಮಲ ನಾಯ್ಕ ಮುಂತಾದವರು ಉಪಸ್ಥಿತರಿದ್ದರು.
ಮೈಸೂರು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಮನವಿ
ಇತ್ತೀಚೆಗೆ ಮೈಸೂರುನಲ್ಲಿ ನಡೆದ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಸೋಮವಾರ ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸೀಮಾ ಹೆಗಡೆ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ತಹಸೀಲ್ದಾರ ಪ್ರಸಾದ್ ಎಸ್.ಎ. ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮೈಸೂರುನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯ ಮೇಲೆ ಕೆಲವು ದುರುಳರು ಅತ್ಯಾಚಾರ ಮಾಡಿರುವುದು ಹಾಗೂ ಗೃಹಸಚೀವರು ಬೇಜವಾಬ್ದಾರಿ ಹೇಳಿಕೆ ನೀಡಿರುವುದು ಖಂಡನೀಯವಾಗಿದೆ.
ಅತ್ಯಾಚಾರ ಮಾಡಿರುವ ದುರುಳರಿಗೆ ಗಲ್ಲು ಶಿಕ್ಷೆ ನೀಡಬೇಕು. ರಾಜ್ಯದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲವಾಗಿದೆ ಕೂಡಲೇ ಸರಕಾರ ಅಪರಾಧಿಗಳಿಗೆ ಕಠೀಣ ಶಿಕ್ಷೆ ನೀಡುವ ಮೂಲಕ ಮುಂದೆ ಇಂತಹ ಅಪರಾಧ ನಡೆಯದಂತೆ ಮಾಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.