ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಕಾರ್ಯಾಲಯದಲ್ಲಿ “30 ವರ್ಷ ಅರಣ್ಯ ಭೂಮಿ ಹಕ್ಕು ಹೋರಾಟ ಒಂದು ಅವಲೋಕನ” ಕಾರ್ಯಕ್ರಮವನ್ನು ಹಿರಿಯ ಸಾಮಾಜಿಕ ಚಿಂತಕ ಕಾಗೋಡು ತಿಮ್ಮಪ್ಪ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು.
ಅರಣ್ಯಭೂಮಿ ಹಕ್ಕು ಪಡೆಯಲು ಹೋರಾಟ ಮಾಡುವುದೇ ಒಳ್ಳೆಯ ಮಾರ್ಗ ಹೋರಾಟದಲ್ಲಿ ಛಲವಿದ್ದರೆ ಭೂಮಿಹಕ್ಕು ಪಡೆಯಲು ಸಾಧ್ಯ.ಅರಣ್ಯ ಹಕ್ಕು ಕಾಯ್ದೆ ಜನರ ಪರವಾಗಿದ್ದರೂ ಆಡಳಿತಾತ್ಮಕ ಇಚ್ಛಾಶಕ್ತಿಯ ಕೊರತೆಯಿಂದ ಹಿನ್ನಡೆಯಾಗುತ್ತಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.
ರಮೇಶ ಹೆಗಡೆ ಶಿವಮೊಗ್ಗ ಮಾತನಾಡಿ,ಚುನಾವಣೆಯ ಸಮಯದಲ್ಲಿ ಭೂಮಿ ಮಂಜೂರು ಮಾಡುತ್ತೆವೆ ಎಂದು ಹೇಳುವ ರಾಜಕಾರಣಿಗಳು ಕೋರ್ಟನಲ್ಲಿ ಒಕ್ಕಲೆಬ್ಬಿಸುವ ಆದೇಶ ಬಂದಾಗ ಮಾಯವಾಗುತ್ತಾರೆ.ವಿರೋಧ ಪಕ್ಷದಲ್ಲಿ ಇದ್ದಾಗ ಕಾನೂನು ತಿದ್ದುಪಡಿ ಆಗಬೇಕೆಂದು ಹೇಳುವ
ಸ್ಪೀಕರ್ ಕಾಗೇರಿಯವರು ಕೇಂದ್ರ ಮತ್ತು ರಾಜ್ಯದಲ್ಲಿ
ಅವರದೇ ಪಕ್ಷ ಅಧಿಕಾರ ಇದ್ದಾಗ ದ್ವಂದ್ವನೀತಿ ಅನುಸರಿಸುವುದು ವಿಷಾದಕರ ಎಂದು ಹೇಳಿದರು.
ಸಭೆಯಲ್ಲಿ ಭಾಗವಹಿಸಿದ್ದ ತಿ.ನ.ಶ್ರೀನಿವಾಸ ಸಾಗರ,ಪ್ರಜಾಶಕ್ತಿ ಬೋರಯ್ಯಚಿತ್ರದುರ್ಗ,ಕೆ ರಾಮು ಕೊಡಗು,ಚಿಕ್ಕಣ್ಣ ಚಾಮರಾಜನಗರ,ಇನಾಯತ್ ಸಾಬಂದ್ರಿ ತಂಜೀಮ್ ಭಟ್ಕಳ
ಮಾತನಾಡಿದರು.
ಸಾಂಘೀಕ ಮತ್ತು ಕಾನೂನಾತ್ಮಕ ಅಡಿಯಲ್ಲಿ ರಾಜ್ಯಾದ್ಯಂತ ಪ್ರಬಲ ಹೋರಾಟ ಮಾಡುವುದು, ಜನಜಾಗೃತಿ ಮತ್ತು ಜನಾಂದೋಲನ ಮಾಡುವುದು ಹಾಗೂ ಕೇಂದ್ರ ಮತ್ತು ರಾಜ್ಯ ಸರಕಾರದ ರೈತ ವಿರೋಧಿ ನೀತಿಗೆ ಖಂಡನೆ ನಿರ್ಣಯದೊಂದಿಗೆ ಅರಣ್ಯವಾಸಿಗಳ ರಕ್ಷಣೆಗೆ ಹೋರಾಟಗಾರರ ವೇದಿಕೆಯು ಬದ್ಧವಾಗಿರಲು ತಿರ್ಮಾನಿಸಲಾಯಿತು.
ಅರಣ್ಯವಾಸಿಗಳ ಸಾಮಾಜಿಕ ಜಾಗೃತೆ ಉಂಟುಮಾಡುವಲ್ಲಿ ಜನಜಾಗೃತಿ ಕಾರ್ಯವನ್ನು ಗ್ರಾಮೀಣ ಮಟ್ಟದಲ್ಲಿ ಸಂಘಟಿಸಲು, ಅರಣ್ಯ ವಾಸಿಗಳ ಸಾಗುವಳಿ ಹಾಗೂ ಹಕ್ಕಿಗೆ ಅರಣ್ಯ ಸಿಬ್ಬಂದಿಗಳಿಂದ ಉಂಟಾಗುತ್ತಿರುವ ದೌರ್ಜನ್ಯಕ್ಕೆ ತೀವ್ರ ಪ್ರತಿರೋಧ ವ್ಯಕ್ತಪಡಿಸುವುದು, ಇಗಾಗಲೇ ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯದಲ್ಲಿ ಅರಣ್ಯ ವಾಸಿಗಳ ಪರವಾಗಿ ದಾಖಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಪ್ರಬಲ ವಾದವನ್ನ ಮಂಡಿಸುವುದು, ರಾಜ್ಯವ್ಯಾಪ್ತಿ ಜರುಗುತ್ತಿರುವ ಹೋರಾಟಕ್ಕೆ ಕಾಗೋಡ ತಿಮ್ಮಪ್ಪರ ನೇತ್ರತ್ವದಲ್ಲಿ ಹೋರಾಟ ಮುಂದುವರಿಸುವುದು ಮುಂತಾದ ತಿರ್ಮಾನಗಳನ್ನ ಸಭೆಯಲ್ಲಿ ನಿರ್ಣಯಿಸಲಾಯಿತು.
ನಿರಂತರ ೩೦ ವರ್ಷ ಅರಣ್ಯವಾಸಿಗಳ ಪರವಾಗಿ ತೊಡಗಿಸಿಕೊಂಡು ಉಚ್ಛ ಮತ್ತು ಸರ್ವೋಚ್ಛ ನ್ಯಾಯಾಲಯಗಳಲ್ಲಿಯೂ ಪ್ರಕರಣ ದಾಖಲಿಸಿ ಜೀವನದ ಮಹತ್ವ ಘಟ್ಟವನ್ನು ಅರಣ್ಯವಾಸಿಗಳ ಪರವಾಗಿ ಧ್ವನಿ ಎತ್ತಿರುವ ರವೀಂದ್ರ ನಾಯ್ಕ ಅವರ ಸಂಘಟನೆ ಕುರಿತು ರಾಜ್ಯಾದ್ಯಂತ ಆಗಮಿಸಿರುವ ಧುರೀಣರು ಪ್ರಶಂಸಿಸಿದರು.
ಹೋರಾಟಗಾರರ ವೇದಿಕೆ ೩೦ ವರ್ಷದಲ್ಲಿ ಹಮ್ಮಿಕೊಂಡ ೬ ಪಾದಯಾತ್ರೆಗಳಲ್ಲಿ ಬರಿಗಾಲಿನಲ್ಲಿ ಪಾದಯಾತ್ರೆ ಮಾಡಿದ ದ್ಯಾವ ಗೌಡ ಹುಕ್ಕಳಿ ಅವರಿಗೆ ವೇದಿಕೆಯಲ್ಲಿ ಸನ್ಮಾನಿಸಲಾಯಿತು.
ಶಂಕರ ವಾಲ್ಮೀಕಿ ಗದಗ, ಚಿಕ್ಕಣ್ಣ ಚಾಮರಾಜನಗರ, ಕುಬೇರಪ್ಪ ಹಾವೇರಿ, ಕಂಸ ಬಾಬು ಸಿದ್ಧಿ ಧಾರವಾಡ, ಪಂಪಾವತಿ ಬಳ್ಳಾರಿ, ರಮಾನಂದ ನಾಯಕ ಅಚಿವೆ, ಮಂಜುನಾಥ ಮರಾಠಿ, ರಾಮ ಮರಾಠಿ, ದೇವರಾಜ ಗೊಂಡ, ಪಾಂಡು ನಾಯ್ಕ, ರಿಜವಾನ್ ಶೇಖ್, ಸೀತಾರಾಮ ಗೌಡ ನಿರಗಾನ್, ದ್ಯಾವಾ ಗೌಡ, ಭೀಮ್ಸಿ ವಾಲ್ಮೀಕಿ, ಶಿವಾನಂದ ಜೋಗಿ, ಕೃಷ್ಣ ಗಾವಡಾ, ಲಕ್ಷ್ಮಣ ಮಾಳ್ಳಕ್ಕನವರ, ಇಬ್ರಾಹಿಂ ನಬೀ ಸಾಬ, ರಾಜು ನರೇಬೈಲ್, ತಿಮ್ಮ ಮರಾಠಿ ಮುಂತಾದವರು ಉಪಸ್ಥಿತರಿದ್ದರು.