ಕೈಗಡಿಯಲ್ಲಿ “ಅನ್ನದಂಗಳದಲ್ಲಿ ರೈತರೊಂದಿಗೆ ಸಂವಾದ” ಕಾರ್ಯಕ್ರಮ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಡೊಂಗ್ರಿ ಗ್ರಾಪಂ ವ್ಯಾಪ್ತಿಯ ಕೈಗಡಿ ಗ್ರಾಮದಲ್ಲಿ “ಅನ್ನದಂಗಳದಲ್ಲಿ ರೈತರೊಂದಿಗೆ ಸಂವಾದ” ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ರಾಜ್ಯ ಖಾತೆ ಸಚಿವೆ ಕು.ಶೋಭಾ ಕರಂದ್ಲಾಜೆ ನಂತರ ನಡೆದ ಸಂವಾದದಲ್ಲಿ ಮಾತನಾಡಿ,ಭಾರತ ಒಂದು ಕೃಷಿಕರ ದೇಶ ಕೃಷಿಕರು ಭಾರತದ ಬೆನ್ನೆಲುಬು ಅಂತ ಹೇಳಿ ಕಳೆದ ಹತ್ತಾರು ವರ್ಷಗಳಿಂದ ಹೇಳುತ್ತಾ ಬಂದಿದ್ದೆವೆ ಆದರೆ ಬೆನ್ನೆಲುಬಾದ ಕೃಷಿಕನ ಸಮಸ್ಯೆ ಏನಾಗಿದೆ ಅಂತ ದೇಶದ ಎಲ್ಲ ರೈತರ ಭಾವನೆಗಳನ್ನ ತಿಳಿಸುವಂತಹ ಕೆಲಸ ಇಲ್ಲಿ ಆಗಿದೆ ಸರ್ಕಾರದ ಸೌಲಭ್ಯ ಬರಲಿ ಬರದೇ ಇರಲಿ ಇಲ್ಲದೆ ಇರಲಿ ಕೃಷಿಕರು ತಮ್ಮ ಕಾಯಕವನ್ನು ಮಾಡುವುದನ್ನು ಬಿಟ್ಟಿಲ್ಲ. ರೈತರ ಹಲವಾರು ಸಮಸ್ಯೆಗಳನ್ನು ಹೇಳಿದ್ದಾರೆ ಅದನ್ನ ಕೇಂದ್ರದ ಮತ್ತು ರಾಜ್ಯದ ಗಮನಕ್ಕೆ ತರುವಂತ ಪ್ರಯತ್ನವನ್ನು ನಾನು ಮಾಡುತ್ತೇನೆ ರೈತರ ಬದುಕು ಹಸನಾಗಬೇಕಾದರೆ ರೈತನು ಬೆಳೆದ ಬೆಳೆಗೆ ಉತ್ತಮವಾದ ಬೆಲೆ ಸಿಗಬೇಕು ಅವರಿಗೆ ಮಾರ್ಕೆಟಿಂಗ್ ವ್ಯವಸ್ಥೆಯಾಗಬೇಕು ಅದಕ್ಕಾಗಿಯೇ ಕೇಂದ್ರಸರ್ಕಾರ ರೈತರಿಗಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ ಯೋಜನೆಗಳನ್ನು ಕೊನೆಯ ರೈತರಿಗಾಗಿ ತಲುಪಿಸುವಂತಹ ಪ್ರಯತ್ನ ನಾನು ಸಚಿವೆಯಾಗಿ ಮಾಡುತ್ತೇನೆ ರಾಜ್ಯ ಸರ್ಕಾರದ ಜೊತೆಗೆ ಸೇರಿ ನಾನು ಮಾಡುತ್ತೇನೆ ಕೃಷಿಗೆ ಸಂಬಂಧಪಟ್ಟ ಹಲವು ಸಂಶೋಧನೆಗಳು ಅದು ರೈತರು ತಲುಪಿದಾಗ ಮಾತ್ರ ಹೆಚ್ಚಿನ ಬೆಳೆಗಳನ್ನು ಬೆಳೆಯಲು ಸಾಧ್ಯವಾಗುತ್ತದೆ. ರೈತರು ಹಲವು ಬೇಡಿಕೆಗಳನ್ನು ಇಟ್ಟಿದ್ದಾರೆ ಕೆಲವು ರಾಜ್ಯ ಸರ್ಕಾರಕ್ಕೆ ಸಂಬಂಧಪಟ್ಟದ್ದು ಕೆಲವು ಕೇಂದ್ರಕ್ಕೆ ಸಂಬಂಧಪಟ್ಟದ್ದು ಬೇಡಿಕೆಗಳಾಗಿರುತ್ತವೆ. ಒಟ್ಟು ಸೇರಿ ರೈತನ ಸಮಸ್ಯೆಗಳನ್ನು ಬಗೆಹರಿಸಲು ಶ್ರಮ ಪಡುತ್ತೇವೆ ಇದರಲ್ಲಿ ಯಾವುದೇ ಪಾರ್ಟಿ, ಧರ್ಮ ಎಂಬ ಭೇದ ಇರುವುದಿಲ್ಲ. 22 ನೇ ತಾರೀಖಿನಂದು ಎಗ್ರಿ ಎಕ್ಸ್ ಪೋಟರ್ ಜೊತೆಗೆ ಸಭೆ ಇದೆ ನಮ್ಮ ದೇಶದಲ್ಲಿ ಬೆಳೆದಂತಹ ದವಸಧಾನ್ಯಗಳನ್ನು ತರಕಾರಿಗಳನ್ನು ಬೇರೆ ದೇಶಕ್ಕೆ ಎಕ್ಸ್ಪೋರ್ಟ್ ಮಾಡುವ ಸಭೆಯ ಇಡಲಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ಲಾಭ ಸಿಗುತ್ತದೆ ಅಂತ ಹೇಳಿದರು.

ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ಮಾತನಾಡಿ,ನಮ್ಮ ಹಿರಿಯರು ಅಳವಡಿಸಿಕೊಂಡಿರುವ ಪದ್ದತಿಯನ್ನು ನಾವು ಮರೆತಿದ್ದೆವೆ.ರಾಸಾಯನಿಕ ಕೃಷಿಪದ್ದತಿಯನ್ನು ಅನುಸರಿಸುವುದರಿಂದ ಇಂದಿನ ಜನಾಂಗ ಹಲವಾರು ಖಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ.ಮುಂದಿನ ದಿನಗಳಲ್ಲಿ ಜಿಲ್ಲೆಯ ಬೆಳೆಗಳಿಗೆ ವಿಶೇಷ ಮಾರುಕಟ್ಟೆ ವ್ಯವಸ್ಥೆಯನ್ನು ಕೈಗೊಳ್ಳಲು ಯೋಜನೆ ರೂಪಿಸಲಾಗುವುದು, ಈ ಕಾರ್ಯಕ್ರಮದ ಮೂಲಕವಾಗಿ ಜಿಲ್ಲೆಯ ರೈತರು ಸಾವಯವ ಕೃಷಿ ಪದ್ದತಿಯನ್ನು ಅನುಸರಿಸಬೇಕು ಎಂದರು.

ಈ ಸಂದರ್ಭದಲ್ಲಿ ಸಾವಯುವ ಕೃಷಿ ಮಿಷನ್ ಅಧ್ಯಕ್ಷ ಆನಂದಆಶ್ರೀ, ವಾಯುವ್ಯ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ‌.ಎಸ್‌.ಪಾಟೀಲ್, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷ ಪ್ರಮೋದ ಹೆಗಡೆ, ಭಾರತೀಯ ಜನತಾ ಪಕ್ಷದ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಹಿರಿಯರಾದ ವಿನೋದ ಪ್ರಭು, ಶ್ರೀಕಾಂತ ಶೆಟ್ಟಿ, ಸಾವಯವ ಕೃಷಿ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಹೆಗಡೆ ಮುಂತಾದವರು ಉಪಸ್ಥಿತರಿದ್ದರು.

ಹಿಂದೂ ದೇವಸ್ಥಾನವನ್ನು ಕೆಡವಿದ್ದರು ಬಿಜೆಪಿ ಸರಕಾರ ಸುಮ್ಮನಿದೆ ಎಂದು ಕಾಂಗ್ರೆಸ್ ಆರೋಪಿಸುತ್ತಿದ್ದಾರಲ್ಲ ಎಂಬ ಮಾದ್ಯಮದವರ ಪ್ರಶ್ನೆಗೆ ಉತ್ತರಿಸಿದ ಶೋಭಾ ಕರಂದ್ಲಾಜೆ,
ಯಾವುದೇ ದೇವಸ್ಥಾನ ಒಡೆಯುವ ಮುಂಚೆ ಊರಿನ ಜನರ ವಿಶ್ವಾಸ ಗಳಿಸಬೇಕು ದೇವಸ್ಥಾನಕ್ಕೆ ಪರ್ಯಾಯ ವ್ಯವಸ್ಥೆ ಮಾಡಬೇಕು ಸುಪ್ರೀಂ ಕೋರ್ಟಿನ ಆದೇಶ ಇದೆ 2008ರ ಪೂರ್ವದ ದೇವಸ್ಥಾನವಿದ್ದರೆ ಅದು ಸಕ್ರಮ ಮಾಡಬೇಕೆನ್ನುವ ಆದೇಶವಿದೆ. ಇಂತಹ ದೇವಸ್ಥಾನವನ್ನು ಸಕ್ರಮ ಮಾಡಲು ನಾವು ಪ್ರಯತ್ನಿಸಬೇಕು ಎಂದು ಹೇಳಿದರು.

About the author

Adyot

Leave a Comment