ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಕಳೆದ ಜುಲೈ ತಿಂಗಳಲ್ಲಿ ಕೊವಿಡ್ ಇರುವಾಗ ಸರಕಾರ ಜಾರಿಗೊಳಿಸಿದ್ದ ವಾರಾಂತ್ಯದ ಕಪ್ರ್ಯೂ ಇರುವ ಸಂದರ್ಭದಲ್ಲಿ ಕೊವಿಡ್ ನಿಯಮವನ್ನು ಜಾರಿಗೊಳಿಸಬೇಕಿದ್ದ ತಹಸೀಲ್ದಾರ,ಕ್ಷೇತ್ರ ಶಿಕ್ಷಣಾದಿಕಾರಿಗಳು ಸೇರಿದಂತೆ ಒಂದಿಷ್ಟು ನೌಕರರು ಭೋಜನ ಕೂಟವನ್ನು ಏರ್ಪಡಿಸಿದ್ದು ಸರಕಾರದ ನಿಯಮ ಉಲ್ಲಂಘನೆ ಮಾಡಿರುವ ಅವರ ಮೇಲೆ ಕ್ರಮ ತೆಗೆದುಕೊಳ್ಳ ಬೇಕೆಂದು ಆಗ್ರಹಿಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ನೇತೃತ್ವದಲ್ಲಿ ಕಾಂಗ್ರೆಸ ಕಾರ್ಯಕರ್ತರು ರಾಜ್ಯಪಾಲರಿಗೆ,ಮುಖ್ಯಮಂತ್ರಿಗಳಿಗೆ ಹಾಗೂ ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದರು
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ವಸಂತ ನಾಯ್ಕ,
ಕೊವಿಡ್ ನಿಯಮ ಉಲ್ಲಂಘನೆ ಮಾಡಿರುವ ತಹಸೀಲ್ದಾರ,ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ನೌಕರರ ಮೇಲೆ ಕ್ರಮ ಜರುಗಿಸಬೇಕೆಂದು ಕಾಂಗ್ರೆಸ್ ಪಕ್ಷದವತಿಯಿಂದ ಉಪವಿಭಾಗಾಧಿಕಾರಿಗಳಿಗೆ,ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು ಆದರೆ ಉಪವಿಭಾಗಾಧಿಕಾರಿಗಳು ಅಧಿಕಾರಿಗಳ ಪರವಾಗಿ ಹಿಂಬರಹವನ್ನು ಕೊಟ್ಟಿದ್ದಾರೆ ಕಪ್ರ್ಯೂ ಬಗ್ಗೆ ಉಪವಿಭಾಗಾಧಿಕಾರಿಗಳಿಗೆ ಅರಿವು ಇದ್ದಂತಿಲ್ಲ ಈ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳೊಂದಿಗೆ ಜಿಲ್ಲಾಧಿಕಾರಿಗಳಿಗೆ ಪುನಃ ದೂರು ನೀಡಿದರೂ ಒಂದು ತಿಂಗಳು ಕಳೆದರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಅಧಿಕಾರಿಶಾಹಿಗಳು ಜನರ ಬೇಡಿಕೆಯನ್ನು ನಿರ್ಲಕ್ಷಿಸುತ್ತಿದ್ದಾರೆ ಇವರಿಗೆ ಸ್ಥಳೀಯ ಶಾಸಕರ,ಸಂಸದರ ಬೆಂಬಲವಿದೆ ರಾಜ್ಯಾಂಗ,ಶಾಸಕಾಂಗ ಸೇರಿ ತಾಲೂಕಿನಲ್ಲಿ ನ್ಯಾಯಾಂಗವನ್ನು ಸಾಯಿಸುತ್ತಿದ್ದಾರೆ. ನಿಯಮ ಉಲ್ಲಂಘನೆ ಮಾಡಿರುವ ಬಗ್ಗೆ ಸಾಕಷ್ಟು ಸಾಕ್ಷ್ಯ,ಗಳಿದ್ದರೂ ಈ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಲು ಹಿಂಜರಿಯುತ್ತಿರುವುದಕ್ಕೆ ಕಾರಣವೇನು? ಬೇರೆ ಏನಾದರೂ ಒಳಮರ್ಮವಿದೆಯೇ? ಜಿಲ್ಲೆಯಲ್ಲಿ ಜನಸಾಮನ್ಯರಿಗೆ ಒಂದು,ಅಧಿಕಾರಿಗಳಿಗೆ ಇನ್ನೊಂದು ಕಾನೂನು ಇದೆಯೇ? ಎನ್ನುವುದನ್ನು ಶಾಸಕರು, ಸಂಸದರು ಸ್ಪಷ್ಟಪಡಿಸಬೇಕು ಎಂದು ಹೇಳಿದರು.
ನಡೆದಿರುವ ಕೊವಿಡ್ ಕಾನೂನು ಉಲ್ಲಂಘನೆಯ ಬಗ್ಗೆ ಕ್ರಮ ತೆಗೆದುಕೊಳ್ಳಲು ಉಪವಿಭಾಗದ,ಜಿಲ್ಲಾಮಟ್ಟದ ಅಧಿಕಾರಿಗಳು ವಿಫಲರಾಗಿದ್ದಾರೆ ಕೂಡಲೇ ಇಂತಹ ದುರ್ನಡತೆಯ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಬೇಕು ಆ ಕಾರಣದಿಂದ ನಾವು ರಾಜ್ಯಪಾಲರಿಗೆ,ಮುಖ್ಯಮಂತ್ರಿಗಳಿಗೆ ಮತ್ತು ಸಭಾಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ ಅಲ್ಲಿಂದ ಯಾವುದೇ ಕ್ರಮ ಜರುಗದಿದ್ದರೆ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿ ಕಾನೂನು ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ವಿವಿಧ ಪದಾಧಿಕಾರಿಗಳಾದ ಸಾವೆರ ಡಿಸಿಲ್ವಾ,ಅಬ್ದುಲ್ ಗಫುರ್,ಗಾಂಧೀಜಿ ನಾಯ್ಕ,ರಾಮಕೃಷ್ಣ ನಾಯ್ಕ, ಮುಂತಾದವರು ಉಪಸ್ಥಿತರಿದ್ದರು.
#######
ಓಮಿನಿ ಹಿಂದಿಕ್ಕಲು ಹೋಗಿ ಬಸ್ ಗೆ ಡಿಕ್ಕಿ ಬೈಕ್ ಸವಾರರಿಗೆ ಗಾಯ
ಸಿದ್ದಾಪುರದಿಂದ ಬಿಳಗಿ ಕಡೆ ಹೋಗುತ್ತಿದ್ದ ಬೈಕ್ ಸವಾರನು ಸಿದ್ದಾಪುರ ಕುಮಟಾ ಮುಖ್ಯ ರಸ್ತೆಯ ಭುವನಗಿರಿ ಬಳಿ ಅತಿವೇಗ ಹಾಗೂ ನಿರ್ಲಕ್ಷ ದಿಂದ ಓಮಿನಿವೊಂದನ್ನು ಓವರ್
ಟೇಕ್ ಮಾಡಲು ಹೋಗಿ ಎದುರಿನಿಂದ ಬಂದ ಬಸ್ ಗೆ ಡಿಕ್ಕಿ ಹೊಡೆದ ಘಟನೆ ಸಿದ್ದಾಪುರ ತಾಲೂಕಿನ ಭುವನಗಿರಿಯಲ್ಲಿ ಸೋಮವಾರ ನಡೆದಿದೆ.
ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ಶಿರಳಗಿ ವಡಗೇರಿಯ ನಾಗರಾಜ್ ರಾಮ ಗೊಂಡ( 38 )ಮತ್ತು ದಿವ್ಯಾ ನಾಗರಾಜ್ ಗೊಂಡ( 30) ಇಬ್ಬರಿಗೂ ತಲೆ ಕೈಕಾಲುಗಳಿಗೆ ಗಾಯಗಳಾಗಿವೆ ಘಟನೆಗೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.