ಆದ್ಯೋತ್ ಸುದ್ದಿನಿಧಿ:
ಇಸ್ಕನಾನ್ ಸಂಸ್ಥೆಯ ಶ್ರೀ ಭಕ್ತಿವೇದಾಂತ ಸ್ವಾಮಿ ಪ್ರಭುಪಾದರ 125ನೇ ಜನ್ಮದಿನೋತ್ಸವದ ಸ್ಮರಣಾರ್ಥ ನಾಣ್ಯ ಬಿಡುಗಡೆಗೊಳಿಸಲಾಯಿತು.
125ರೂ.ಬೆಲೆಯ ನಾಣ್ಯವನ್ನು ಬಿಡುಗಡೆಗೊಳಿಸಿ ಮಾತನಾಡಿದ
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿಯವರು,ಸ್ವಾಮಿ ಪ್ರಭುಪಾದರು ಇಸ್ಕಾನ್ ಸಂಸ್ಥೆಯ ಮೂಲಕ ಪ್ರಪಂಚದಾದ್ಯಂತ ಸನಾತನ ಧರ್ಮ ಹಾಗೂ ಆಧ್ಯಾತ್ಮದ ಶಕ್ತಿಯನ್ನು ಪರಿಚಯಿಸಿದ್ದರು ಎಂದು ಸ್ವಾಮೀಜಿಯವರನ್ನು ಸ್ಮರಿಸಿದರು.
ನಂತರ ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನಾ ಇಲಾಖೆ ಹಾಗೂ ಭಾಷಾಂತರ ನಿರ್ದೇಶನಾಯದಿಂದ ಹೊರತಂದ “ಕಾನೂನು ಪದಕೋಶ ಹಾಗೂ 15 ಕೇಂದ್ರ ಅಧಿನಿಯಮಗಳ” ಪುಸ್ತಕದ ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಬಿ.ಎಸ್.ಯಡಿಯೂರಪ್ಪ, ಕಾನೂನು ಸಚಿವ ಮಾದುಸ್ವಾಮಿ, ಸಚಿವ ಈಶ್ವರಪ್ಪ, ಗ್ರಹಸಚಿವ ಆರಗ ಜ್ಞಾನೇಂದ್ರ, ಇಸ್ಕಾನ ಸಂಸ್ಥೆಯ ಭಾನುಸ್ವಾಮಿ ಮುಂತಾದ ಪ್ರಮುಖರು ಉಪಸ್ಥಿತರಿದ್ದರು.