ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ನೂತನ ಕಚೇರಿಯನ್ನು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭೀಮಣ್ಣ ನಾಯ್ಕ,
ಸಾಕಷ್ಟು ಮಹಾತ್ಮರ ಹೋರಾಟ,ಬಲಿದಾನದಿಂದ ನಮಗೆ ಸ್ವಾತಂತ್ರ್ಯ ದೊರಕಿದೆ ಆದರೆ ಮುಂದಿನ ದಿನಗಳಲ್ಲಿ ಬಿಜೆಪಿ ತನ್ನ ಸರ್ವಾಧಿಕಾರ ಪ್ರವೃತ್ತಿಯ ಆಡಳಿತದಿಂದ ಸ್ವಾತಂತ್ರ್ಯ ಪೂರ್ವದ ಸ್ಥಿತಿಗೆ ದೇಶವನ್ನು ಕೊಂಡೊಯ್ಯುತ್ತದೆ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗುತ್ತಿಲ್ಲ ಪೆಟ್ರೋಲ್,ಡಿಸೆಲ್ ಬೆಲೆ ಏರಿಕೆಯಿಂದ ದಿನನಿತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿದೆ. ರೈತರು ಬಳಸುವ ರಸಗೊಬ್ಬರ ಅಡುಗೆ ಅನಿಲ ದಿನ ದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಇಂತಹ ಕೆಟ್ಟ ಸರಕಾರವನ್ನು ಕಿತ್ತೊಗೆಯುವ ಸಂಕಲ್ಪ ಮಾಡಬೇಕು ಕಾರ್ಯಕ್ರಮ ಕೇವಲ ಕಚೇರಿ ಉದ್ಘಾಟನೆಗೆ ಸೀಮಿತವಾಗಬಾರದು ಪ್ರತಿಗ್ರಾಮಪಂಚಾಯತ ವ್ಯಾಪ್ತಿಯಲ್ಲೂ ಪಕ್ಷದ ಸಂಘಟನೆ ಮಾಡಬೇಕು ಜಿಲ್ಲೆಯ 231 ಗ್ರಾಪಂ ವ್ಯಾಪ್ತಿಯಲ್ಲೂ ಪಕ್ಷದ ಸಂಘಟನೆಗೆ ಒತ್ತು ಕೊಡಲಾಗುತ್ತಿದೆ ಸಂಪನ್ಮೂಲ ವ್ಯಕ್ತಿಗಳಿಂದ ಯುವಕರಿಗೆ ಪಕ್ಷದ ಕುರಿತು ತರಬೇತಿ ನೀಡಲಾಗುತ್ತಿದೆ ಎಂದು ಹೇಳಿದರು.
ವಿಧಾನಸಭಾ ಕ್ಷೇತ್ರದ ಉಸ್ತುವಾರಿ ಸುಷ್ಮಾ ಗೋಪಾಲ ರೆಡ್ಡಿ ಮಾತನಾಡಿ,ಯಾವುದೇ ಚುನಾವಣೆಯನ್ನು ಎದುರಿಸಲು ಸಂಘಟನೆ ಅವಶ್ಯಕತೆ ಇದೆ ಪಕ್ಷದಲ್ಲಿ ಒಬ್ಬೊಬ್ಬರು ಒಂದೊಂದು ದಿಕ್ಕಿಗೆ ಸಾಗಿದರೆ ಸಂಘಟನೆಯಾಗಲು ಸಾಧ್ಯವೇ? ಕೇವಲ ದುಡ್ಡಿನಿಂದ ಚುನಾವಣೆ ಮಾಡಲು ಸಾಧ್ಯವಿಲ್ಲ ಜನರ ಜೊತೆಗೆಬೆರೆತು ಸಹಾಯ ಹಸ್ತ ಚಾಚಿದರೆ ಜನ ನಮ್ಮ ಬಗ್ಗೆ ವಿಶ್ವಾಸಪಡುತ್ತಾರೆ ಮುಂಬರುವ ಚುನಾವಣೆಯಲ್ಲಿ ಒಗ್ಗಟ್ಟಿನಿಂದ ನಾವು ಸಾಗಿದರೆ ಮಾತ್ರ ಗೆಲುವು ನಮ್ಮದಾಗುತ್ತದೆ ಎಂದು ಹೇಳಿದರು.
ಸಭೆಯಲ್ಲಿ ಬಿಸಿಸಿ ಪ್ರದಾನಕಾರ್ಯದರ್ಶಿ ಎಸ್.ಕೆ.ಭಾಗವತ,ಡಿಸಿಸಿ ಕಾರ್ಯದರ್ಶಿ ಸಾವೇರ್ ಡಿಸಿಲ್ವಾ,ಕಾಂಗ್ರೆಸ್ ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ವಿ.ಎನ್.ನಾಯ್ಕ ಬೆಡ್ಕಣಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಮನಮನೆ ಮುಂತಾದವರು ಉಪಸ್ಥಿತರಿದ್ದರು.
######
######
ಡಾ.ಎಸ್.ಆರ್.ಹೆಗಡೆಯವರಿಗೆ ನಾಗರಿಕ ಸನ್ಮಾನ
ಸಿದ್ದಾಪುರ ಪಟ್ಟಣದ ಹಿರಿಯ ವ್ಯೆದ್ಯ ಹಾಗೂ ಐವತ್ತು ವರ್ಷಗಳಿಂದ ಜನರಿಗೆ ವ್ಯೆದ್ಯಕೀಯ ಸೇವೆ ಸಲ್ಲಿಸುತ್ತಿರುವ ಡಾ.ಎಸ್.ಆರ್. ಹೆಗಡೆ ಹಾರ್ಸಿಮನೆ ಅವರಿಗೆ ಅ.17 ರವಿವಾರ ಸಂಜೆ 4 ಗಂಟೆಗೆ ಸ್ಥಳೀಯ ಸುಷಿರ ಸಂಗೀತ ಪರಿವಾರ ಭುವನಗಿರಿ ಹಾಗೂ ಸಂಸ್ಕøತಿ ಸಂಪದ ಶಂಕರಮಠ ಇವರ ಸಹಕಾರದೊಂದಿಗೆ ನಾಗರಿಕ ಸನ್ಮಾನವನ್ನು ನಡೆಸಲಾಗುವುದು ಎಂದು ಸನ್ಮಾನ ಸಮಿತಿಯ ಪ್ರಮುಖ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ ದೊಡ್ಮನೆ ಹೇಳಿದ್ದಾರೆ.ಸಿದ್ದಾಪುರದಲ್ಲಿ ಯಾವುದೇ ವೈದ್ಯಕೀಯ ವ್ಯವಸ್ಥೆ ಸಮರ್ಪಕವಾಗಿ ಇಲ್ಲದಿದ್ದಾಗ ವೈದ್ಯಕೀಯ ಪದವಿ ಪಡೆದು ತಾವು ಹುಟ್ಟಿದ ತಾಲೂಕಿನಲ್ಲಿಯೇ ಕ್ಲಿನಿಕ್ ಪ್ರಾರಂಭಿಸಿ ಸಹಸ್ರಾರು ಜನರಿಗೆ ವ್ಯೆದ್ಯಕೀಯ ಸೇವೆಯನ್ನು ಹಗಲು ರಾತ್ರಿ ನೀಡಿದ್ದಲ್ಲದೇ ಗ್ರಾಮೀಣ ಪ್ರದೇಶಕ್ಕೆ ತೆರಳಿಯೂ ಸೇವೆ ಸಲ್ಲಿಸುತ್ತ ಓಂಕಾರ ನರ್ಸಿಂಗ್ ಹೋಮ್ ಸ್ಥಾಪಿಸಿ ಸುಲಭದಲ್ಲಿ ವ್ಯೆದ್ಯಕೀಯ ಸೇವೆ ಸಲ್ಲಿಸಿದ ಕೀರ್ತಿ ಅವರದ್ದಾಗಿದೆ.ಇತ್ತೀಚಿನ ದಿನದಲ್ಲಿ ತಮ್ಮ ವಯಕ್ತಿಕ ಅನಾರೋಗ್ಯ, ವಯೋಮಾನದ ನಡುವೆಯೂ ತಮ್ಮ ಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತಿರುವುದು ಶ್ಲಾಘನೀಯವಾಗಿದ್ದು ಇಂತಹ ಅಪರೂಪದ ವ್ಯೆದ್ಯರಿಗೆ ನಾಗರಿಕ ಸನ್ಮಾನ ಮಾಡಲು ಸಮಾನ ಮನಸ್ಕರೆಲ್ಲ ಸೇರಿ ತೀರ್ಮಾನಿಸಿದ್ದೇವೆ. ಸನ್ಮಾನ ಕಾರ್ಯಕ್ರಮಕ್ಕೆ ಸಹಕಾರ ನೀಡುವವರು ನಾರಾಯಣ ಹೆಗಡೆ ಕಲ್ಲಾರೆಮನೆ(8105871681)ಕ್ಕೆ ಸಂಪರ್ಕಿಸುವಂತೆ ಅವರು ಹೇಳಿದ್ದಾರೆ.
ಸನ್ಮಾನ ಸಮಾರಂಭದಲ್ಲಿ ಶಂಕರಮಠದ ಧರ್ಮಾಧಿಕಾರಿ ವಿಜಯ ಹೆಗಡೆ, ಶಿರಸಿಯ ಗಣೇಶ ನೇತ್ರಾಲಯದ ಡಾ.ಕೆ.ವಿ.ಶಿವರಾಂ, ಸಿದ್ದಾಪುರದ ಶ್ರೇಯಸ್ ಆಸ್ಪತ್ರೆಯ ಡಾ.ಕೆ.ಶ್ರೀಧರ ವೈದ್ಯ, ನ್ಯಾಯವಾದಿ ಡಾ.ರವಿ.ಹೆಗಡೆ ಹೂವನಮನೆ, ಉದ್ಯಮಿ ಆನಂದ ಈರಾ ನಾಯ್ಕ ಸಿದ್ದಾಪುರ ಉಪಸ್ಥಿತರಿರುತ್ತಾರೆ.
ಕಾರ್ಯಕ್ರಮದ ಪೂರ್ವದಲ್ಲಿ ವಸುಧಾ ಶರ್ಮ ಮತ್ತು ಸಂಗಡಿಗರಿಂದ ಲಘು ಸಂಗೀತ ಕಾರ್ಯಕ್ರಮ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಎ.ಪಿ.ಭಟ್ಟ ಮುತ್ತಿಗೆ, ಎಂ.ಎಂ.ಹೆಗಡೆ ಮಘೇಗಾರ, ನಾರಾಯಣ ಹೆಗಡೆ ಕಲ್ಲಾರೆಮನೆ, ಅನಂತ ಹೆಗಡೆ ಮಘೇಗಾರ, ಶ್ರೀಧರ ಹೆಗಡೆ ಮಘೇಗಾರ, ಶ್ರೀಕಾಂತ ಹೆಗಡೆ ಕಲ್ಲಾರೆಮನೆ ಉಪಸ್ಥಿತರಿದ್ದರು.