ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ದೊಡ್ಮನೆ ಗ್ರಾಪಂ ವ್ಯಾಪ್ತಿಯ ಕುಡೆಗೋಡ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ತಾಯಿ-ಮಗಳನ್ನು ನಾಡಬಂದೂಕಿನಿಂದ ಹತ್ಯೆ ಮಾಡಲಾಗಿದ್ದು ಮಗನಿಂದಲೇ ಈ ಕೃತ್ಯ ನಡೆದಿದೆ
ಆರೋಪಿ ಮಂಜುನಾಥ ನಾರಾಯಣ ಹಸ್ಲರ್(24) ಎನ್ನುವವನಾಗಿದ್ದು ತನ್ನ ತಾಯಿ ಪಾರ್ವತಿ ನಾರಾಯಣ ಹಸ್ಲರ್(42) ತಂಗಿ ರಮ್ಯಾ ನಾರಾಯಣ ಹಸಲರ್(19)ರನ್ನು ತಾನು ಬೇಟೆಗೆ ಉಪಯೋಗಿಸುತ್ತಿದ್ದ ಅಕ್ರಮ ನಾಡಬಂದೂಕಿನಿಂದ ಹತ್ಯೆ ಮಾಡಿದ್ದಾನೆ.
ಬುಧವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಈ ಕೃತ್ಯ ನಡೆದಿದ್ದು ರಾತ್ರಿ 10 ಗಂಟೆಯ ಸುಮಾರಿಗೆ ಪೊಲೀಸ್‍ರಿಗೆ ಮಾಹಿತಿ ಬಂದಿದೆ ತಕ್ಷಣದಲ್ಲೆ ಸ್ಥಳಕ್ಕೆ ಪೊಲೀಸ್‍ರು ಹೋಗಿ ಆರೋಪಿಯನ್ನು ಬಂಧಿಸಿದ್ದಾರೆ. ಕೌಟಂಬಿಕ ಕಲಹ ಮತ್ತು ಸಾಲಕ್ಕಾಗಿ ಈ ಕೃತ್ಯ ನಡೆದಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದ್ದು ಇನ್ನಷ್ಟು ತನಿಖೆಯ ನಂತರ ಹೆಚ್ಚಿನ ಮಾಹಿತಿ ತಿಳಿಯಲಿದೆ.ಪ್ರಕರಣ ದಾಖಲಿಸಲಾಗಿದ್ದು ಮೃತರ ಮರಣೋತ್ತರ ಪರೀಕ್ಷೆ ಕಾರವಾರದಲ್ಲಿ ನಡೆಯುತ್ತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ನಂತರ ಎಸ್.ಪಿ.ಶಿವಪ್ರಕಾಶ ದೇವರಾಜ ಸುದ್ದಿಗಾರರಿಗೆ ತಿಳಿಸಿದ್ದಾರೆ.
ನಾರಾಯಣ ಹಸ್ಲರ್‍ನದು ಕೂಲಿ ಕೆಲಸ ಮಾಡುವ ಕುಟುಂಬವಾಗಿದ್ದು ಆರೋಪಿ ಮಂಜುನಾಥ ಹಸ್ಲರ್ ಕೂಲಿ ಕೆಲಸವನ್ನು ಸರಿಯಾಗಿ ಮಾಡದೆ ಶೋಕಿ ಮಾಡಿಕೊಂಡು ಸಾರಾಯಿ ಕುಡಿದು ಕೊಂಡು ತಿರುಗಾಡಿಕೊಂಡಿದ್ದವನು ಇತ್ತೀಚೆಗೆ ಬೇಟೆಯ ಹುಚ್ಚು ಹತ್ತಿಸಿಕೊಂಡಿದ್ದ ಎನ್ನಲಾಗಿದೆ ಇದಕ್ಕಾಗಿ ಅಕ್ರಮವಾಗಿ ಒಂಟಿನಳಿಗೆಯನ್ನು ಉಪಯೋಗಿಸುತ್ತಿದ್ದು ಬುಧವಾರ ಕೆಲಸಕ್ಕೆ ಹೋಗದೆ ಬೆಳಿಗ್ಗೆ ಬೇಟೆಗೆಂದು ಹೋಗಿದ್ದಾನೆ ಆದರೆ ಯಾವುದೇ ಬೇಟೆ ಸಿಗದ ಕಾರಣ ಸಿಟ್ಟಿನಲ್ಲೆ ಮನೆಗೆ ಬಂದಿದ್ದಾನೆ ಎನ್ನಲಾಗಿದೆ ಒಂದು ವಾರದಿಂದ ಹಣಕ್ಕಾಗಿ ಮನೆಯಲ್ಲಿ ಪೀಡಿಸುತ್ತಿದ್ದವನು ಊಟಕ್ಕೆ ಮಾಡಿರುವ ಸಾಂಬಾರು ಸರಿಯಿಲ್ಲ ಎಂದು ಗಲಾಟೆ ಮಾಡಿ ಬಂದೂಕಿನಿಂದ ತಾಯಿ ಮತ್ತು ತಂಗಿಗೆ ಗುಂಡು ಹಾರಿಸಿದ್ದಾನೆ ಎಂದು ಹೇಳಲಾಗುತ್ತಿದೆ ಪೊಲೀಸ್‍ರ ತನಿಖೆಯಿಂದ ಸತ್ಯ ಹೊರಬರಬೇಕಾಗಿದೆ.