ಆದ್ಯೋತ್ ಸುದ್ದಿನಿಧಿ:
ವಿಧಾನಪರಿಷತ್ ಚುನಾವಣೆಗೆ ನಾಮಪತ್ರ ಸಲ್ಲಿಸುವುದು ಪ್ರಾರಂಭವಾಗಿದ್ದು ಡಿ.23 ಅಂತಿಮ ದಿನವಾಗಿದೆ.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ತಮ್ಮ ಅಭ್ಯರ್ಥಿಗಳ ಅಂತಿಮ ಆಯ್ಕೆ ಮಾಡಿದ್ದು ಬಿಜೆಪಿಯಿಂದ ಗಣಪತಿ ಉಳ್ವೇಕರ್ ಹಾಗೂ ಕಾಂಗ್ರೆಸ್‍ನಿಂದ ಭೀಮಣ್ಣ ನಾಯ್ಕ ಸ್ಪರ್ದಿಸಲಿದ್ದಾರೆ ಎಂದು ಆದ್ಯೋತ್ ನ್ಯೂಸ್‍ಗೆ ಖಚಿತ ಮಾಹಿತಿ ದೊರಕಿದೆ.
ವಿಧಾನಪರಿಷತ ಚುನಾವಣೆಗೆ ಸ್ಪರ್ದಿಸಲು ಎರಡೂ ಪಕ್ಷದಲ್ಲೂ ನಿರಾಸಕ್ತಿ ಕಂಡುಬರುತ್ತಿತ್ತು ಕಾರಣ ವಿಧಾನಸಭಾ ಚುನಾವಣೆಗಿಂತ ವಿಧಾನಪರಿಷತ್ ಚುನಾವಣೆಗೆ ಖರ್ಚು ಹೆಚ್ಚಾಗುತ್ತದೆ ಆದರೆ ಸರಕಾರದ ಅನುದಾನ ಬರುವುದು ಕಡಿಮೆ ಇದರಿಂದ ಖರ್ಚು ಮಾಡಿದ ಹಣ ಅವಧಿ ಮುಗಿಯುವುದರೊಳಗೆ ಬರುವುದು ಅನುಮಾನ.
ಆದರೂ ಐದು ಶಾಸಕರನ್ನು ಹೊಂದಿರುವ ಬಿಜೆಪಿಯಲ್ಲಿ ಬರೋಬ್ಬರಿ 21 ಆಕಾಂಕ್ಷಿಗಳಿದ್ದರು ಅದರಲ್ಲಿ ಪ್ರಮುಖವಾಗಿ ಕಳೆದ ಬಾರಿ ವಿಧಾನಪರಿಷತ್‍ಗೆ ಸ್ಪರ್ದಿಸಿ ಕಡಿಮೆ ಅಂತರದಿಂದ ಸೋತಿದ್ದ ಗಣಪತಿ ಉಳ್ವೇಕರ್,ನಿಕಟಪೂರ್ವ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್, ಹಾಲಿ ಬಿಜೆಪಿ ಜಿಲ್ಲಾ ಪ್ರದಾನಕಾರ್ಯದರ್ಶಿ ಗೋವಿಂದ ನಾಯ್ಕ ನಡುವೆ ಪೈಪೋಟಿ ಇತ್ತು ಎನ್ನಲಾಗಿದೆ.
ಸರಕಾರದ ಪ್ರಮುಖ ಸ್ಥಾನದಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ,ಶಿವರಾಮ ಹೆಬ್ಬಾರ,ಅನಂತಕುಮಾರ ಹೆಗಡೆ,ಅನಂತ ಹೆಗಡೆ ಆಶಿಸರ್ ಪ್ರಮೋದ ಹೆಗಡೆ ಇವರೆಲ್ಲರೂ ಘಟ್ಟದ ಮೆಲ್ಭಾಗದವರೇ ಆಗಿದ್ದು ಮೂವರು ಶಾಸಕರನ್ನು ಹೊಂದಿರುವ ಕರಾವಳಿ ಭಾಗಕ್ಕೆ ಯಾವುದೇ ಪ್ರಮುಖ ಸ್ಥಾನವೂ ದೊರಕದ ಬಗ್ಗೆ ಪಕ್ಷದಲ್ಲಿ ಅಸಮಧಾನವಿತ್ತು ಹೀಗಾಗಿ ಕರಾವಳಿ ಭಾಗದ ಗಣಪತಿ ಉಳ್ವೇಕರ್‍ಗೆ ಟಿಕೆಟ್ ನೀಡಲಾಗುತ್ತಿದೆ ಅಲ್ಲದೆ ಸಂಸದ ಅನಂತಕುಮಾರ್ ಹೆಗಡೆ ಸಚೀವ ಶಿವರಾಮ ಹೆಬ್ಬಾರ,ಶಾಸಕಿ ರೂಪಾಲಿ ನಾಯ್ಕ ಕೂಡಾ ಉಳ್ವೇಕರ ಬೆಂಬಲಕ್ಕೆ ನಿಂತಿದ್ದರು ಹೀಗಾಗಿ ಉಳ್ವೇಕರ್ ನಿರಾಯಾಸವಾಗಿ ಟಿಕೆಟ್ ಪಡೆದರು ಎಂದು ತಿಳಿದು ಬಂದಿದೆ.
ಹಾಲಿ ವಿಧಾನಪರಿಷತ್ ಸದಸ್ಯ ಎಸ್.ವಿ.ಘೋಟ್ನೇಕರ್ ಈ ಬಾರಿ ತಾನು ವಿಧಾನಪರಿಷತ್‍ಗೆ ನಿಲ್ಲುವುದಿಲ್ಲ ತನಗೆ ವಿಧಾನಸಭೆಗೆ ಟಿಕೆಟ್ ನೀಡಿ ಎಂಬ ಬೇಡಿಕೆಯನ್ನು ಇಟ್ಟ ಕಾರಣದಿಂದ ಕಳೆದ ಒಂದು ತಿಂಗಳಿನಿಂದ ಕಾಂಗ್ರೆಸ್‍ನಲ್ಲಿ ಅಭ್ಯರ್ಥಿಗಳ ಹುಡುಕಾಟ ಪ್ರಾರಂಭವಾಗಿತ್ತು. ಸಾಮಾಜಿಕ ಹೋರಾಟದಿಂದ ಗುರುತಿಸಿಕೊಂಡಿರುವ ರವೀಂದ್ರ ನಾಯ್ಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಶ್ರೀಪಾದ ಹೆಗಡೆ ಕಡವೆ ಹೆಸರು ಚಾಲ್ತಿಯಲ್ಲಿ ಬಂತು. ಆದರೆ ವಿಧಾನಪರಿಷತ್ ಚುನಾವಣೆಗೆ ಕೇವಲ ಜನಪ್ರಿಯತೆಯೊಂದೆ ಮಾನದಂಡವಲ್ಲ ಅಲ್ಲಿ ಆರ್ಥಿಕ ಮಾನದಂಡವೂ ಪ್ರಮುಖವಾಗಿರುತ್ತದೆ ಈ ಕಾರಣದಿಂದ ನಿವೇದಿತಾ ಆಳ್ವಾ ಹಾಗೂ ಭೀಮಣ್ಣ ನಾಯ್ಕ ಹೆಸರೂ ಮಂಚೂಣಿಗೆ ಬಂದಿತು. ನಿವೇದಿತಾ ಆಳ್ವಾ ಚುನಾವಣಾ ರಾಜಕೀಯಕ್ಕೆ ನಿರಾಸಕ್ತಿ ತೋರಿದ ಕಾರಣ ಅಂತಿಮವಾಗಿ ಭೀಮಣ್ಣ ನಾಯ್ಕರಿಗೆ ಟಿಕೆಟ್ ನೀಡುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಜೆಡಿಎಸ್ ಪಕ್ಷಕ್ಕೆ ಅಭ್ಯರ್ಥಿಗಳು ಸಿಗುವುದು ಕಷ್ವಾಗಿದೆ ಉಳಿದಂತೆ ಪಕ್ಷೇತರರು ಒಂದಿಷ್ಟು ಜನರು ನಿಂತರು ನಿಜವಾದ ಸ್ಪರ್ದೆ ಇರುವುದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ