ಶಿರಸಿಯಲ್ಲಿ ಆಮೆಗಳ ಮಾರಾಟಕ್ಕೆ ಯತ್ನ ಇಬ್ಬರು ಆರೋಪಿಗಳ ಬಂಧನ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆ ಶಿರಸಿಯ ಕೆರೆಕೊಪ್ಪ ಸಮೀಪ ನಕ್ಷತ್ರ ಆಮೆ ಎಂದು ಹೇಳಿ ಮಾರಾಟ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಅರಣ್ಯ ಇಲಾಖೆಯವರು ಬಂಧಿಸಿ ಆಮೆಯನ್ನು ವಶಪಡಿಸಿಕೊಂಡಿದ್ದಾರೆ.

ಶಿರಸಿ ತಾಲೂಕಿನ ಕಬ್ಬೆ ಗ್ರಾಮದ ಮಧುಕರ ನಾರಾಯಣ ನಾಯ್ಕ,ಹಾಗೂ ರಮೇಶ ಮಾದೇವ ನಾಯ್ಕ ಬಂಧಿತ ಆರೋಪಿಗಳಾಗಿದ್ದು ಖಚಿತ ಮಾಹಿತಿಯ ಮೇರೆಗೆ ಅರಣ್ಯ ಇಲಾಖೆಯ ಅಧಿಕಾರಿಗಳು 2 ಆಮೆಯ ಸಹಿತ ಆರೋಪಿಗಳನ್ನು ಬಂಧಿಸಿದ್ದಾರೆ.

About the author

Adyot

Leave a Comment