ಅದ್ಯೋತ ಸುದ್ದಿನಿಧಿ –
ನಾವೆಲ್ಲರೂ ಆರ್.ಎಸ್.ಎಸ್. ಸಂಘಟನೆಯಿಂದ ಬೆಳೆದು ಬಂದವರಾಗಿದ್ದು ನಮಗೆ ಅಧಿಕಾರ ಮುಖ್ಯವಲ್ಲ ಅದಕ್ಕಾಗಿ ಪಕ್ಷವನ್ನು ಬದಲಾಯಿಸುವವರೂ ಅಲ್ಲ ನಮಗೆ ನಮ್ಮ ಸಿದ್ದಾಂತದ ಬಗ್ಗೆ ಬದ್ಧತೆ ಇದೆ ಎಂದು ಗೃಹಸಚೀವ ಅರಗ ಜ್ಞಾನೇಂದ್ರ ಹೇಳಿದರು.
ಅವರು ಮಂಗಳವಾರ ತಾಲೂಕಿನ ಕಲಗದ್ದೆ ನಾಟ್ಯವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ರಾಜಮಾನ್ಯ ಪ್ರಸಸ್ತಿ ಪ್ರದಾನ,ದಶದಿಶ ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘ ಎನ್ನುವುದು ಕೇವಲ ಸಂಘಟನೆಯಲ್ಲ್ಲ ಅದು ದೇಶಭಕ್ತಿಯನ್ನು ಬೋಧಿಸುವ ಶಾಲೆ ಅಲ್ಲಿಯ ಕಾರ್ಯಕರ್ತರು ಸನ್ಯಾಸಿಗಳಂತೆ ಜೀವನ ನಡೆಸುತ್ತಾರೆ ಇಂತಹ ಹಿನ್ನಲೆಯಿಂದ ಬಂದ ನಮಗೆ ಚುನಾವಣೆಯಲ್ಲಾಗುವ ಸೋಲು, ಸೋಲು ಎನಿಸುವುದಿಲ್ಲ ಸೈದ್ಧಾಂತಿಕವಾಗಿ ನಾವು ಸೋಲುವುದಿಲ್ಲ ನಮ್ಮ ದೇಶದ ಸಂಸ್ಕøತಿ ಜಗತ್ತಿಗೆ ಮಾದರಿಯಾಗುವಂತಹದ್ದು ಆದ್ದರಿಂದಲೇ ಜಗತ್ತಿಗೆ ಗುರುಸ್ಥಾನದಲ್ಲಿರಬೇಕು ಎಂದು ಬಯಸುವಂತಹವರು ನಾವೆಲ್ಲ ಆರ್.ಎಸ್.ಎಸ್.ನವರು ಎನ್ನುವುದು ನಮಗೆ ಹೆಮ್ಮೆಯಾಗಿದೆ ಎಂದು ಹೇಳಿದರು.
1994ರಿಂದ ಕಾಗೇರಿಯವರು ನಾವು ವಿಧಾನಸಭೆಯಲ್ಲಿ ಒಂದೇ ಬೆಂಚಿನಲ್ಲಿ ಕುಳಿತುಕೊಳ್ಳುತ್ತಿದ್ದೆವು ಪ್ರತಿಪಕ್ಷ ಸ್ಥಾನದಲ್ಲಿದ್ದ ನಾವು ಆಡಳಿತ ಪಕ್ಷದವರಿಗೆ ತಲೆನೋವು ಆಗಿದ್ದೆವು ನಂತರದ ಚುನಾವಣೆಯಲ್ಲಿ ನನಗೆ ಸೋಲು ಉಂಟಾದರೂ ಕಾಗೇರಿಯವರು ನಿರಂತರವಾಗಿ ಗೆಲವು ಪಡೆಯುತ್ತಾ ಬಂದರು. ಅವರು ಶಿಕ್ಷಣ ಮಂತ್ರಿಯಾಗಿದ್ದಾಗ ಕಡಿಮೆ ವಿದ್ಯಾರ್ಥಿಗಳಿದ್ದ ಶಾಲೆಯನ್ನು ಬೇರೆ ಶಾಲೆಗೆ ಸೇರಿಸುವ ಪ್ರಯತ್ನ ಮಾಡಿದ್ದರು ಅದು ನನ್ನ ಸಲಹೆಯೂ ಆಗಿತ್ತು ಆದರೆ ಬುದ್ದಿಜೀವಿಗಳು ಎನಿಸಿಕೊಂಡವರು ಈ ಬಗ್ಗೆ ರಾದ್ದಾಂತ ಎಬ್ಬಿಸಿದರು ಒಳ್ಳೆಯ ಕಾರ್ಯವನ್ನು ಮಾಡಲು ಹೊರಟಾಗ ಅದನ್ನು ತಡೆಯಲು ಸಾಕಷ್ಟು ಜನರಿರುತ್ತಾರೆ. ಸಭಾಧ್ಯಕ್ಷ ಸ್ಥಾನ ಅತ್ಯುನ್ನತ ಸ್ಥಾನವಾಗಿದ್ದು ಅದನ್ನು ಕಾಗೇರಿಯವರು ಸಮರ್ಥವಾಗಿ ನಡೆಸುತ್ತಿದ್ದಾರೆ ಬಲವಾದ ಪ್ರತಿಪಕ್ಷದವರಿರುವಾಗ ಸದನ ನಡೆಸುವುದು ಸುಲಭವಲ್ಲ ಆದರೆ ಅತ್ಯಂತ ಜಾಣ್ಮೆಯಿಂದ ಕಾಗೇರಿ ಇದನ್ನು ನಡೆಸುತ್ತಿದ್ದಾರೆ. ಸರಳತೆ,ಎಲ್ಲರೊಂದಿಗೆ ಬೆರೆಯುವ ಗುಣ ಅವರನ್ನು ಬೆಳೆಸಿದೆ ರಾಜಮಾನ್ಯ ಪ್ರಶಸ್ತಿ ಅವರಿಗೆ ನೀಡಿರುವುದು ಸೂಕ್ತವಾಗಿದೆ ಎಂದು ಹೇಳಿದರು.
ರಾಜಮಾನ್ಯ ಪ್ರಶ್ತಿ ಸ್ವೀಕರಿಸಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,ದೇವಾಲಯಗಳು ನಮ್ಮ ಸಂಸ್ಕøತಿಯನ್ನು ಉಳಿಸುವ ಕೇಂದ್ರಗಳಾಗಿವೆ ನಾವು ಕಲ್ಲು,ಮಣ್ಣು ಸೇರಿದಂತೆ ಪ್ರತಿಯೊಂದು ಚರಾಚರ ವಸ್ತುಗಳಲ್ಲೂ ದೇವರನ್ನು ಕಾಣುತ್ತೆವೆ ನಾವು ಕೇವಲ ರಾಜಕೀಯ ಸುಧಾರಣೆಯಾಗಬೇಕು ಎನ್ನುತ್ತೆವೆ ಆದರೆ ಪ್ರತಿಯೊಂದು ಕ್ಷೇತ್ರದಲ್ಲೂ ದೋಷಗಳಿರುತ್ತವೆ ಅದೆಲ್ಲದರಲ್ಲೂ ಸುಧಾಋಣೆಯಾಗಬೇಕು ಎಂದು ಹೇಳಿದರು.
ದೇವಾಲಯದ ಮೊಕ್ತೇಸರ ವಿನಾಯಕ ಹೆಗಡೆ ಕಲಗದ್ದೆ ಪ್ರಾಸ್ತಾವಿಕ ಮಾತನಾಡಿದರು.ಗಣಪತಿ ಹೆಗಡೆ ಗುಂಜಗೋಡ ನಿರೂಪಣೆ ಮಾಡಿದರು.ಡಾ.ಜಿ.ಎಲ್.ಹೆಗಡೆ ಅಭಿನಂದನಾ ನುಡಿಯನ್ನಾಡಿದರು.ವೆಂಕಟೇಶ ಬೊಗ್ರಿಮಕ್ಕಿ ವಂದನಾರ್ಪಣೆ ಮಾಡಿದರು.
ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಗೃಹ ಸಚಿವರು ಕಾಂಗ್ರೆಸ್ ನಮ್ಮ ವಿರೋಧಿ. ಅವರಿಗಿಂತ ಜೆಡಿಎಸ್ ನವರು ಹತ್ತಿರದವರು. ಅವರ ಅಭ್ಯರ್ಥಿ ಇಲ್ಲದ ಕಡೆ ಬೆಂಬಲ ಪಡೆದರೆ ತಪ್ಪೇನಿಲ್ಲ. ‘ಬಿಜೆಪಿ-ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿವೆ’ ಎಂಬ ಕಾಂಗ್ರೆಸ್ ಆರೋಪಕ್ಕೆ ಈ ರೀತಿ ಸಮರ್ಥನೆ ನೀಡಿದರು.’ಕಾಂಗ್ರೆಸ್ ಗೆ ಒಳ ಒಪ್ಪಂದ ಮಾಡಿಕೊಂಡ ರೂಢಿ ಇದೆ. ನಾವು ಅವರ ರೀತಿಯಲ್ಲಿ ಸಾಗುವುದಿಲ್ಲ. ನಮಗೆ ಕಾಂಗ್ರೆಸ್ ಸೋಲಿಸುವದಷ್ಟೆ ಗುರಿ. ಜೆಡಿಎಸ್ ಅಭ್ಯರ್ಥಿ ಇಲ್ಲದ ಕಡೆ ಅವರ ಬೆಂಬಲ ಪಡೆದು ಹೆಚ್ಚು ಲೀಡ್ ಪಡೆಯುತ್ತೇವೆ’ ಎಂದರು.
‘ಮುರ್ಡೇಶ್ವರ ದೇವಸ್ಥಾನದ ವಿಗ್ರಹ ಧ್ವಂಸಗೊಳಿಸಿ ಐಸಿಸ್ ಧ್ವಜ ನೆಟ್ಟ ಚಿತ್ರ ಹರಿಬಿಟ್ಟವರ ಕುರಿತು ತನಿಖೆಗೆ ಸೂಚಿಸಲಾಗಿದೆ. ತಪ್ಪಿತಸ್ಥರನ್ನು ಕಠಿಣ ಶಿಕ್ಷೆಗೆ ಗುರಿ ಪಡಿಸಲಾಗುವದು. ದೇವಸ್ಥಾನಕ್ಕೆ ಸೋಮವಾರದಿಂದಲೆ ಭದ್ರತೆ ಹೆಚ್ಚಿಸಲಾಗಿದೆ’ ಎಂದರು.’ರಾಜ್ಯದ ಕರಾವಳಿ ಭಾಗದಲ್ಲಿ ಭದ್ರತೆ ಹೆಚ್ಚಿಸುವ ಕುರಿತು ಕೇಂದ್ರ ಸರ್ಕಾರದ ನೆರವು ಕೇಳಿದ್ದೇವೆ. ಕರಾವಳಿ ಕಾವಲು ಪಡೆಗೆ 30 ಸುಸಜ್ಜಿತ ಬೋಟ್ ಗಳ ಬೇಡಿಕೆಯನ್ನೂ ಇಡಲಾಗಿದೆ’ ಎಂದರು.’ದೇಶದ್ರೋಹ ಚಟುವಟಿಕೆಯಲ್ಲಿ ಭಟ್ಕಳವೂ ಸೇರಿದಂತೆ ಕರಾವಳಿ ಭಾಗದ ಹಲವು ಯುವಕರು ಪಾಲ್ಗೊಳ್ಳುತ್ತಿರುವ ಸಂಶಯವಿದ್ದು, ಈ ಬಗ್ಗೆ ನಿಗಾ ಇಡಲಾಗುತ್ತಿದೆ. ಮೋದಿ ಸರ್ಕಾರ ಬಂದ ಮೇಲೆ ಬಾಂಬ್ ಸ್ಫೋಟದಂತಹ ಚಟುವಟಿಕೆ ತಗ್ಗಿದೆ’ ಎಂದರು ‘ಎಸ್.ಡಿ.ಪಿ.ಐ., ಪಿ.ಎಫ್.ಐ. ಸಂಘಟನೆ ನಿಷೇಧಿಸುವ ನಿರ್ಧಾರ ಕೇಂದ್ರ ಸರ್ಕಾರಕ್ಕೆ ಬಿಟ್ಟಿದ್ದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.