ಮುಗಿದ ವಿಧಾನಪರಿಷತ್ ಚುನಾವಣೆ ಗೆಲುವಿನ ನಿರೀಕ್ಷೆಯಲ್ಲಿ ಇಬ್ಬರು ಅಭ್ಯರ್ಥಿಗಳು

ಆದ್ಯೋತ್ ಸುದ್ದಿನಿಧಿ:
ಕಳೆದ ಒಂದು ತಿಂಗಳಿನಿಂದ ನಡೆಯುತ್ತಿದ್ದ ವಿಧಾನಪರಿಷತ್ ಚುನಾವಣೆಯ ಸಂಭ್ರಮ ಶುಕ್ರವಾರ ಮತದಾನ ಮಾಡುವುದರ ಮೂಲಕ ಮುಕ್ತಾಯವಾಗಿದೆ.
ಎರಡು ಪ್ರಮುಖ ಪಕ್ಷಗಳಾದ ಬಿಜೆಪಿಯ ಗಣಪತಿ ಉಳ್ವೇಕರ್ ಹಾಗೂ ಕಾಂಗ್ರೆಸ್ ನ ಭೀಮಣ್ಣ ನಾಯ್ಕ ನಡುವೆ ಜಿದ್ದಾಜಿದ್ದಿ ಹೋರಾಟ ನಡೆದಿದೆ.ಎರಡೂ ಪಕ್ಷಗಳ ನಾಯಕರಾದ ಆರ.ವಿ.ದೇಶಪಾಂಡೆ ಹಾಗೂ ಉಸ್ತುವಾರಿ ಸಚೀವ ಶಿವರಾಮ ಹೆಬ್ಬಾರ ತಮ್ಮ ಅಭ್ಯರ್ಥಿಗಳ ಗೆಲುವಿಗೆ ತನು,ಮನ,ಧನವನ್ನು ಸಮರ್ಪಿಸಿದ್ದಾರೆ ಎಂಬ ಮಾತು ಜಿಲ್ಲೆಯಾದ್ಯಂತ ಹರಿದಾಡುತ್ತಿದೆ.

ಬಿಜೆಪಿಗೆ ಐದು ಶಾಸಕರು,ಒಬ್ಬರು ಸಂಸದರು ಇದ್ದು
ಬಹುತೇಕ ನಗರಸಭೆ,ಪುರಸಭೆ,ಪಟ್ಟಣಪಂಚಾಯತಗಳಲ್ಲಿ ಅಧಿಕಾರದಲ್ಲಿದೆ ಆದರೆ ಬಹುಜನರು ಟಿಕೆಟ್ ಆಕಾಂಕ್ಷಿಗಳಿದ್ದರೂ ಅಂತಿಮವಾಗಿ ಶಿವರಾಮ ಹೆಬ್ಬಾರ ಬೆಂಬಲಿಗರಾದ ಗಣಪತಿ ಉಳ್ವೇಕರ್ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು.ಆಕಾಂಕ್ಷಿಗಳಲ್ಲಿ ಒಂದಿಷ್ಟು ಜನರಾದರೂ ಉಳ್ವೇಕರ ಗೆ ಮತತಪ್ಪಿಸುವ ಸಾಧ್ಯತೆ ಇದೆ ಅಲ್ಲದೆ ಜಿಲ್ಲೆಯಲ್ಲಿ ಬಿಜೆಪಿಯ ಜೊತೆ ಗುರುತಿಸಿಕೊಂಡಿರುವ ಬಹುಸಂಖ್ಯಾತ ನಾಮ
ಧಾರಿ ಸಮಾಜದವರು ಬಿಜೆಪಿ ಸರಕಾರವಿದ್ದರೂ ನಮ್ಮ ಸಮಾಜಕ್ಕೆ ಯಾವುದೇ ಸ್ಥಾನಮಾನ ನೀಡಿಲ್ಲ ಎಂಬ ಅಸಮಧಾನದಲ್ಲಿದೆ.ಇದು ಚುನಾವಣೆಯಲ್ಲಿ ಪರಿಣಾಮ ಬೀರುವ ಸಾಧ್ಯತೆ ಇದೆ.

ಕಾಂಗ್ರೆಸ್ ಗೆ ಮಧು ಬಂಗಾರಪ್ಪ ಬಂದಿರುವುದು,ಜಿಲ್ಲೆಯಲ್ಲಿ ಸಾಕಷ್ಟು ಬಂಗಾರಪ್ಪ ಅಭಿಮಾನಿಗಳಿರುವುದು ಬಲವನ್ನು ತಂದುಕೊಟ್ಟಿದೆ. ಅಲ್ಲದೆ ದೇಶಪಾಂಡೆಯವರ ಚುನಾವಣಾ ತಂತ್ರ.ಸದ್ಯೋ ಭವಿಷ್ಯದ ದೃಷ್ಠಿಯಿಂದ ಭೀಮಣ್ಣ ಗೆಲ್ಲಬೇಕು ಎಂದುಕೊಂಡಿರುವ ಕೆಲವು ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರಿಂದ,ಸತತ ಸೋಲಿನಿಂದ ಕಂಗೆಟ್ಟಿರುವ ಭೀಮಣ್ಣ ನಾಯ್ಕ ಈ ಬಾರಿ ಗೆಲ್ಲುವ ಸಾಧ್ಯತೆ ಇದೆ.
ಆದರೆ ಚುನಾವಣೋತ್ತರ ಸಮೀಕ್ಷೆಯ ಪ್ರಕಾರ ಸಮಬಲದ ಹೋರಾಟ ನಡೆದರೂ ಅಂತಿಮವಾಗಿ ಆಡಳಿತ ಪಕ್ಷದ ಅಭ್ಯರ್ಥಿ ಬಹಳ ಕಡಿಮೆ ಅಂತರದಿಂದ ಗೆಲ್ಲುತ್ತಾರೆ ಎಂದು ತಿಳಿದು ಬರುತ್ತಿದೆ.
#####
ಉತ್ತರಕನ್ನಡ ಜಿಲ್ಲೆಯಲ್ಲಿ ಒಟ್ಟೂ ಹನ್ನೆರಡು ತಾಲೂಕಗಳಿದ್ದು ಭಟ್ಕಳ,ಹೊನ್ನಾವರ,ಸಿದ್ದಾಪುರ,ಹಳಿಯಾಳ,ದಾಂಡೇಲಿ,ಜೊಯಿಡಾದಲ್ಲಿ ಕಾಂಗ್ರೆಸ್ ಹೆಚ್ಚಿನ ಮತ ಪಡೆಯಲಿದ್ದು,ಶಿರಸಿ,ಯಲ್ಲಾಪುರ,ಮುಂಡಗೋಡ,ಕುಮಟಾ,ಅಂಕೋಲಾ,ಕಾರವಾರದಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ ಎಂದು ಸಮೀಕ್ಷೆಯಲ್ಲಿ ತಿಳಿದುಬಂದಿದೆ.

About the author

Adyot

Leave a Comment