ಆದ್ಯೋತ್ ಸುದ್ದಿನಿಧಿ:
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರದ ಆರ್.ಎಸ್.ಎಸ್.ಕಾರ್ಯವಾಹ ಆದಿತ್ಯ ಮಂಜುನಾಥ ಹೆಗಡೆ (30), ಉಪ್ಪಡಿಕೆ ಬುಧವಾರ ರಾತ್ರಿ ರಸ್ತೆ ಅಪಘಾತದಲ್ಲಿ ಮರಣ ಹೊಂದಿದ್ದಾರೆ.
ತಾಲೂಕಿನ ಕೋಲಸಿರ್ಸಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಎದುರು ಈ ದುರ್ಘಟನೆ ನಡೆದಿದೆ,ಹಾಲುಡೇರಿಯ ಕೆಲಸ ಮುಗಿಸಿ ಸಿದ್ದಾಪುರದ ಜಿಮ್ ವರ್ಕ ಮಾಡಿ ಮನೆಗೆ ಬರುವಾಗ ಈ ಘಟನೆ ನಡೆದಿದೆ.ಇಲ್ಲಿ ರಸ್ತೆ ಕಾಮಗಾರಿ ನಡೆಯುತ್ತಿದ್ದು ಬದಲಿ ರಸ್ತೆಯ ಬಗ್ಗೆ ಫಲಕ ಹಾಕಿಲ್ಲ ಇದರಿಂದ ಈ ಅಪಘಾತ ಸಂಭವಿಸಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.
ಉತ್ಸಾಹಿ ಯುವಕನಾಗಿದ್ದ ಆದಿತ್ಯ ಹೆಗಡೆ ಆರ್.ಎಸ್.ಎಸ್. ಸಂಘಟನೆಯಲ್ಲಿ ಸಕ್ರಿಯವಾಗಿದ್ದರು.ತಾಲೂಕು ಕಾರ್ಯವಾಹ ಆಗಿ ಕಾರ್ಯನಿರ್ವಹಿಸುತ್ತಿದ್ದು ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುತ್ತಿದ್ದರು. ಸಾಕಷ್ಟು ಬಾರಿ ರಕ್ತದಾನವನ್ನು ಮಾಡಿದ್ದಲ್ಲದೆ, ಇತ್ತೀಚೆಗಷ್ಟೆ ನೇತ್ರದಾನ ನೋಂದಣಿ ಮಾಡಿದ್ದರು ಎಂದು ತಿಳಿದು ಬಂದಿದೆ.
########
ಆರ್.ಎಸ್.ಎಸ್. ಸಕ್ರಿಯ ಕಾರ್ಯಕರ್ತರಾಗಿದ್ದ ಆದಿತ್ಯ ಉಪ್ಪಡಿಕೆ ಅವರ ಅಗಲುವಿಕೆ ನಮಗೆಲ್ಲ ಅತ್ಯಂತ ದುಃಖವನ್ನುಂಟುಮಾಡಿದೆ. ಮಿತಭಾಷಿಯಂತೆ ಕಂಡರೂ ಆಕರ್ಷಕ ವ್ಯಕ್ತಿತ್ವ, ಅಪಾರ ಸಾಮಾಜಿಕ ಕಾಳಜಿಯುಳ್ಳವರಾಗಿದ್ದರು. ನೇತ್ರದಾನಕ್ಕೆ ಒಪ್ಪಿಗೆ ಸೂಚಿಸಿ, ನೋಂದಣಿ ಮಾಡಿಸಿದ್ದರು ಅವರ ಆತ್ಮಕ್ಕೆ ಭಗವಂತ ಸದ್ಗತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಬಿಜೆಪಿ ಉತ್ತರ ಕನ್ನಡ, ಜಿಲ್ಲಾ ಕಾರ್ಯದರ್ಶಿ ಗುರುಪ್ರಸಾದ ಹೆಗಡೆ ಹರ್ತೆಬೈಲ್ ಕಂಬನಿ ಮಿಡಿದಿದ್ದಾರೆ.