ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ದಾಂಡೇಲಿಯ ಕಾಳಿನದಿಯಲ್ಲಿ ಮತ್ತೆ ಮೊಸಳೆ ಸದ್ದು ಮಾಡುತ್ತಿದ್ದು ಇಲ್ಲಿಯ ಪಟೇಲನಗರದ ನಿವಾಸಿ ಅಷ೯ದ ಖಾನ ರಾಯಚೂರ(23)ಎಂಬುವನ ಮೇಲೆ ಸೋಮವಾರ ಸಂಜೆ 7 ಗಂಟೆಯ ಸಮಯದಲ್ಲಿ ಮೊಸಳೆ ದಾಳಿ ನಡೆಸಿದೆ.
ನಿತ್ಯದ ಹಾಗೆ ಕೇಲಸ ಮುಗಿಸಿ ತನ್ನ ಮನೆಯ ಹಿಂಭಾಗದಲ್ಲಿರುವ ಕಾಳಿ ನದಿ ದಂಡೆಯ ಮೇಲೆ ನಿಂತು ನೀರಿನಲ್ಲಿ ಕೈ-ಕಾಲು ತೊಳೆಯುವಾಗ ಮೊಸಳೆಯೊಂದು ಆತನನ್ನು ಎಳೆದೊಯ್ದಿದಿದೆ.ಅಲ್ಲಿದ್ದ ಆತನ ಸ್ನೇಹಿತರು ಮೊಸಳೆ ಎಳೆದೊಯ್ಯುದನ್ನ ಪ್ರತ್ಯಕ್ಷವಾಗಿ ನೋಡಿದ್ದಾರೆ .
ಕಳೆದ ಮೂರು-ನಾಲ್ಕು ತಿಂಗಳಲ್ಲಿ ಇದು ಮೂರನೆ ಘಟನೆಯಾಗಿದೆ.
ಅಕ್ಟೋಬರ ತಿಂಗಳಿನಲ್ಲಿ ವಿನಾಯಕ ನಗರದ ಮೊಹಿನ್ ಎನ್ನುವ ಹದಿನೈದು ವರ್ಷದ ಬಾಲಕ ಮೀನು ಹಿಡಿಯಲು ಹೋದಾಗ ಮೊಸಳೆಗೆ ಬಲಿಯಾಗಿದ್ದ.
ಪೋಲಿಸರು,ಅರಣ್ಯ ಇಲಾಖೆಯವರು ಹಾಗೂ ರಾಫ್ಟ ತಂಡದವರು ಘಟನಾ ಸ್ಥಳಕ್ಕೆ ಬಂದಿದ್ದು ಕಾಯಾ೯ಚರಣೆ ನಡೆಸಿದ್ದಾರೆ.