ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಹೀನಗಾರ ಗ್ರಾಮದಲ್ಲಿ
ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯಿತು
ಬಿದ್ರಕಾನ ಗ್ರಾಪಂ ಅಧ್ಯಕ್ಷ ಮಂಜುನಾಥ ಗೌಡ ಉದ್ಘಾಟಿಸಿದರು.
ತಹಸೀಲ್ದಾರ ಸಂತೋಷ ಭಂಡಾರಿ ಮಾತನಾಡಿ, ಹಳ್ಳಿಯ ಜನತೆ ತಾಲೂಕು ಕೇಂದ್ರಕ್ಕೆ ಬರದೇ ಅವರ ಅಹವಾಲನನ್ನು ಗ್ರಾಮೀಣ ಪ್ರದೇಶದಲ್ಲಿಯೇ ಅಧಿಕಾರಿಗಳು ಪಡೆದು ಸರ್ಕಾರದ ಸೌಲಭ್ಯ ಸಿಗುವಂತೆ ಮಾಡುವ ಉದ್ದೇಶದಿಂದ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯುಕ್ರಮವನ್ನು ಸರ್ಕಾರ ನಡೆಸುತ್ತಿದೆ.ಈ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ಎಲ್ಲ ಇಲಾಖೆ ಅಧಿಕಾರಿಗಳು ಇರುತ್ತಾರೆ. ಸರ್ಕಾರದ ವಿಶೇಷ ಯೋಜನೆಯಾದ ಗ್ರಾಮ ಒನ್ ತಾಲೂಕಿನ 23 ಗ್ರಾಪಂ ವ್ಯಾಪ್ತಿಯಲ್ಲಿ ಪ್ರಾರಂಭಿಸಲಾಗವುದು. ಮೊದಲ ಆಧ್ಯೆತಯಾಗಿ 10ರಿಂದ 15 ಗ್ರಾಪಂನಲ್ಲಿ ಈ ಯೋಜನೆ ಪ್ರಾರಂಭಿಸಲಾಗವುದು. ಇದರಿಂದ ರೈತರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಹೇಳಿ ಕಂದಾಯ ಇಲಾಖೆಯ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ನಂತರ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿನ ಸೌಲಭ್ಯದ ಕುರಿತು ಮಾಹಿತಿ ನೀಡಿದರು.
ಇದೇ ಸಂದರ್ಭದಲ್ಲಿ ಅರಣ್ಯ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಶಾಲಾ ಆವರಣದಲ್ಲಿ ಸಸಿಗಳನ್ನು ನೆಡಲಾಯಿತು.ಆರೋಗ್ಯ ಇಲಾಖೆಯಿಂದ ಕೆಎಫ್ಡಿ ಕಾಯಿಲೆ ಸಾರ್ವಜನಿಕರಿಗೆ ತಿಳುವಳಿಕೆ ನೀಡುವ ಜಾಗೃತಿ ಹಾಗೂ ಗ್ರಾಮಸ್ಥರ ಆರೋಗ್ಯ ತಪಾಸಣೆ ನಡೆಯಿತು. ಮತದಾರರ ಪಟ್ಟಿಯಲ್ಲಿ ಹೆಸರು ಕಡಿಮೆ ಮಾಡುವ ಮತ್ತು ಸೇರ್ಪಡೆ, ಆಧಾರ ನೋಂದಣಿ ಕುರಿತು ಮಾಹಿತಿ ನೀಡಲಾಯಿತು. ತಹಸೀಲ್ದಾರ ಸಾರ್ವಜನಿಕರ ಅಹವಾಲನ್ನು ಸ್ವೀಕರಿಸಿದರು.
ಗ್ರಾಪಂ ಉಪಾಧ್ಯಕ್ಷೆ ಸರೋಜಾ ನಾಯ್ಕ, ಬಿಇಒ ಸದಾನಂದ ಸ್ವಾಮಿ, ಸರ್ವೆ ಇಲಾಖೆಯ ಸುಂದರ್, ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ. ವಿವೇಕಾನಂದ ಹೆಗಡೆ, ತಾಪಂ ಅಧಿಕಾರಿ ದಿನೇಶ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಸದಸ್ಯರಿದ್ದರು.
ಪಿಡಿಒ ಸಹನಾ ಸ್ವಾಗತಿಸಿದರು.ಕಂದಾಯ ಅಧಿಕಾರಿ ರವಿ ಗೌಡರ್, ಬಸವರಾಜ್ ಬಿಸ್ನಾಳ, ಕಾರ್ಯಕ್ರಮ ನಿರ್ವಹಿಸಿದರು.
#######
ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮ ನಡೆಯುತ್ತಿದೆ. ಆದರೆ ಜಿಲ್ಲಾಧಿಕಾರಿಗಳು ಎಲ್ಲೋ ಒಂದು ಕಡೆ ಹೋಗುತ್ತಾರೆ ಉಳಿದ ಕಡೆಗೆ ಸ್ಥಳೀಯ ಅಧಿಕಾರಿಗಳೇ ಇರುತ್ತಾರೆ. ಇಂತಹ ಕಾರ್ಯಕ್ರಮದಲ್ಲಿ
ತಾಲೂಕು ಮಟ್ಟದ ಅಧಿಕಾರಿಗಳು ಬಗೆಹರಿಸಬಹುದಾದ
ಕೇವಲ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆ ಸೇರಿದಂತೆ ಸಣ್ಣ ಪುಟ್ಟ ಸಮಸ್ಯೆಗಳು ಬಗೆಹರಿಯುತ್ತದೆ.ಇದಕ್ಕಿಂತ ದೊಡ್ಡಮಟ್ಟದ ಸಮಸ್ಯೆಯ ಬಗ್ಗೆ ಜನರು ಜಿಲ್ಲಾಕೇಂದ್ರಕ್ಕೆ ಓಡಾಡುವುದು ತಪ್ಪುವುದಿಲ್ಲ.
ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಗಳು ಭಾಗವಹಿಸಬೇಕು ಆಗ ಸ್ವಲ್ಪಮಟ್ಟಿನ ಪ್ರಯೋಜನ ಜನರಿಗಾಗಬಹುದು.ಇಲ್ಲವಾದಲ್ಲಿ ಈ ಕಾರ್ಯಕ್ರಮ ಕೇವಲ ಪ್ರಚಾರಕ್ಕೆ ಸೀಮಿತವಾಗಿರುತ್ತದೆ ಎಂದು ಸಾರ್ವಜನಿಕರು ಅಭಿಪ್ರಾಯ ಪಟ್ಟಿದ್ದಾರೆ.
#######