ಆದ್ಯೋತ್ ಸುದ್ದಿನಿಧಿ:
ಸಭಾಧ್ಯಕ್ಷ,ಮುಖ್ಯಮಂತ್ರಿಗಳೂ ಸೇರಿದಂತೆ ಶಾಸಕರ-ಸಚೀವರ ವೇತನ ಶೇ.50ರಷ್ಟು ಹೆಚ್ಚಳ ಮಾಡಲಾಗಿದೆ.
ಫೆ.14ರಿಂದ24ರವರೆಗೆ 10 ದಿನಗಳ ಕಾಲ ನಡೆಯಬೇಕಿದ್ದ ಅಧಿವೇಶನ ಪ್ರತಿಪಕ್ಷಗಳ ಹಠ ಆಡಳಿತಪಕ್ಷದ ಜಿಗುಟುತನದಿಂದಾಗಿ 8 ದಿನಕ್ಕೆ ಮುಕ್ತಾಯವಾಯಿತು. ದಿನ ಒಂದಕ್ಕೆ ಒಂದುಕೋಟಿರೂ. ಖರ್ಚು ಬರುವ ಅಧಿವೇಶನದಲ್ಲಿ ಯಾವುದೇ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಯದೇ ಗೌಜು,ಗದ್ದಲದಿಂದ ಮುಕ್ತಾಯವಾಗಿ ಸುಮಾರು 8ಕೋಟಿರೂ. ಸಾರ್ವಜನಿಕರ ಹಣ ಪೋಲಾಗುವಂತಾಯಿತು.
ಆದರೆ ಅಧಿವೇಶನದಲ್ಲಿ ಶಾಸಕರ,ಸಚೀವರ ಸಂಬಳವನ್ನು ಶೇ.50ರಷ್ಟು ಹೆಚ್ಚಳ ಮಾಡುವ ವಿಧೇಯಕಕ್ಕೆ ಯಾವುದೇ ತಕರಾರು,ಗೌಜು,ಗದ್ದಲವಿಲ್ಲದೆ ಅಂಗೀಕಾರವಾಯಿತು.
ರಾಜ್ಯದ ಆರ್ಥಿಕ ಪರಿಸ್ಥಿತಿ ಸರಿಯಾಗಿಲ್ಲ ಯೋಜನೆಗಳಿಗೆ ಹಣಕಾಸು ಪೂರೈಸುವುದು ಕಷ್ಟವಾಗುತ್ತಿದೆ. ಕಾಮಗಾರಿಗಳ ಬಿಲ್ ಗುತ್ತಿಗೆದಾರರಿಗೆ ಸಿಗುತ್ತಿಲ್ಲ,ರೈತರ ಬೆಳೆಹಾನಿ ಪರಿಹಾರದ ಹಣ ಕೈಸೇರುತ್ತಿಲ್ಲ,ಕೊವಿಡ್,ಅತಿವೃಷ್ಟಿ ರಾಜ್ಯದ ಆರ್ಥಿಕ ಪರಿಸ್ಥಿತಿಯನ್ನು ಹದಗೆಡಿಸಿದೆ ಅಬಕಾರಿ ಹೊರತುಪಡಿಸಿ ಉಳಿದ ಆದಾಯ ಬರುತ್ತಿಲ್ಲ ಇಂತಹ ಪರಿಸ್ಥಿತಿಯಲ್ಲಿ ಶಾಸಕರ ವೇತನ ಪರಿಷ್ಕರಣ ಮಾಡುವ ಅವಶ್ಯಕತೆ ಇತ್ತೆ? ಎನ್ನುವ ಪ್ರಶ್ನೆ ಸಾರ್ವಜನಿಕವಲಯದಲ್ಲಿ ಚರ್ಚೆಯಾಗುತ್ತಿದೆ.
ಕರ್ನಾಟಕ ವಿಧಾನಸಭೆಯ 224 ಶಾಸಕರಲ್ಲಿ ಯಾರೂ ಬಿಪಿಎಲ್ ಕಾರ್ಡ,ಅಂತ್ಯೋದಯ ಕಾರ್ಡ ಪಡೆದವರಲ್ಲ ಇವರೆಲ್ಲ ಕೋಟಿ,ಕೋಟಿರೂ.ಖರ್ಚು ಮಾಡಿ ವಿಧಾನಸಭೆಗೆ ಆಯ್ಕೆಯಾದವರು. ಜನಸೇವೆಗೆಂದು ಬರುವವರು ಕೆಲವು ಭತ್ಯೆಗಳನ್ನು ಪಡೆಯಲಿ ಆದರೆ ಸಂಬಳ ಪಡೆಯುವುದು ಯಾಕೆ? ಎನ್ನುವ ಪ್ರಶ್ನೆ ಜನರಲ್ಲಿ ಮೂಡುತ್ತಿದೆ.ಕಾನೂನು ಸಚೀವರು ನೀಡಿರುವ ಮಾಹಿತಿಯ ಪ್ರಕಾರ 92.42ಕೋಟಿರೂ. ಹೆಚ್ಚುವರಿ ವೆಚ್ಚವಾಗುತ್ತಿದೆ. ಇಷ್ಟು ಸಂಬಳ ಪಡೆದು ಅವಧಿ ಮುಗಿದ ನಂತರವೂ ಪಿಂಚಣಿ ಸೇರಿದಂತೆ ಸೌಲಭ್ಯ ಪಡೆಯುವ ಇವರು ಅಧಿವೇಶನವನ್ನು ಸರಿಯಾಗಿ ನಡೆಸದೆ ಜನರ ದುಡ್ಡನ್ನು ಹಾಳು ಮಾಡುತ್ತಿರುವ ಬಗ್ಗೆ ಆಕ್ರೋಶವೂ ಅಲ್ಲಲ್ಲಿ ವ್ಯಕ್ತವಾಗುತ್ತಿದೆ.
#####
ಮುಖ್ಯಮಂತ್ರಿ,ಸಭಾಧ್ಯಕ್ಷ,ಸಚೀವ,ಶಾಸಕರ ಪರಿಷ್ಕರಣ ವೇತನ,ಭತ್ಯೆ ಈ ರೀತಿ ಇದೆ.
# ಶಾಸಕರ ವೇತನ(ಭತ್ಯೆ ಪ್ರತ್ಯೇಕ) ಹಿಂದೆ-25000ರೂ. ಈಗ 40000ರೂ. ಶಾಸಕರ ನಿವೃತ್ತಿವೇತನ ಹಿಂದೆ-40000ರೂ ಈಗ 50000ರೂ.
# ಮುಖ್ಯ ಸಚೇತಕರ ವೇತನಹಿಂದೆ-35000ರೂ. ಈಗ-50000ರೂ.
#ಮುಖ್ಯಮಂತ್ರಿವೇತನ-50000ರೂ.ಈಗ-75000ರೂ.
# ಸಂಪುಟದರ್ಜೆ ಸಚೀವರ ವೇತನ-ಹಿಂದೆ 40000ರೂ. ಈಗ-60000ರೂ.
# ಮುಖ್ಯಮಂತ್ರಿ/ಸಚೀವರ ಆತಿಥ್ಯ ಭತ್ಯೆ ಹಿಂದೆ-3ಲಕ್ಷರೂ.ಈಗ 4.5ಲಕ್ಷರೂ.
# ಸಂಪುಟದರ್ಜೆ ಸಚೀವರ ಮನೆಬಾಡಿಗೆ ಭತ್ಯೆ ಹಿಂದೆ-80000ರೂ. ಈಗ-1.20ಲಕ್ಷರೂ.
# ಮನೆನಿರ್ವಹಣೆ ವೆಚ್ಚ(ಪ್ರತಿತಿಂಗಳು) ಹಿಂದೆ20000ರೂ. ಈಗ 30000ರೂ. ವಾಹನ ಭತ್ಯೆ 1000ಲೀ.ಪೆಟ್ರೋಲ್
###
# ರಾಜ್ಯಮಂತ್ರಿಗಳ ವೇತನ ಹಿಂದೆ- 35000ರೂ.ಈಗ50000ರೂ. ಆತಿಥ್ಯ ಭತ್ಯೆ-2ಲಕ್ಷರೂ. ಈಗ 3ಲಕ್ಷರೂ. ಮನೆಬಾಡಿಗೆ 80000ರೂ. ಈಗ 1.20ಲಕ್ಷರೂ.ನಿರ್ವಹಣಾ ವೆಚ್ಚ 20000ರೂ. ಈಗ 35000ರೂ. ವಾಹನಭತ್ಯೆ 1000ಲೀ.ಪೆಟ್ರೋಲ್ ಈಗ 1500ಲೀ.ಪೆಟ್ರೋಲ್
###
ಸಭಾಧ್ಯಕ್ಷರ ವೇತನ 50000ರೂ. ಈಗ 75000ರೂ.ಆತಿಥ್ಯ ಭತ್ಯೆ 3ಲಕ್ಷರೂ. ಈಗ 4.5ಲಕ್ಷರೂ.ಪ್ರಯಾಣ ಭತ್ಯೆ ಕಿ.ಮಿಗೆ-30ರೂ. ಈಗ ಕಿ.ಮಿ.ಗೆ 40ರೂ.ದಿನದ ಭತ್ಯೆ 2000ರೂ. ಈಗ 3000ರೂ.ಬಾಡಿಗೆ ಭತ್ಯೆ 80000ರೂ. ಈಗ 1.60ಲಕ್ಷರೂ..
###
ಉಪಾಧ್ಯಕ್ಷರ ವೇತನ 40000ರೂ. ಈಗ 60000ರೂ. ವಾಹನ ಭತ್ಯೆ 1000ಲೀ.ಪೆಟ್ರೋಲ್ ಈಗ 2000ಲೀ.ಪೆಟ್ರೋಲ್
###
ಪ್ರತಿಪಕ್ಷದ ನಾಯಕರ ವೇತನ 40000ರೂ. ಈಗ 60000ರೂ.ಆತಿಥ್ಯ ಭತ್ಯೆ 2ಲಕ್ಷರೂ. ಈಗ 2.5ಲಕ್ಷರೂ.ವಾಃನ ಭತ್ಯೆ 2000ಲೀ.ಪೆಟ್ರೋಲ್,ಈಗ 1000ಲೀ.ಪೆಟ್ರೋಲ್
###
ಇಷ್ಟು ಸಂಬಳ,ಭತ್ಯೆ ಪಡೆಯುವ ಉದ್ಯೋಗವನ್ನು ಎಲ್ಲರೂ ನಿರೀಕ್ಷಿಸುವುದು ತಪ್ಪಲ್ಲ
###
ಪ್ರತಿಪಕ್ಷ ನಾಯಕರ ಪ್ರಯಾಣ ಭತ್ಯೆಯಲ್ಲಿ ಕಡಿತವಾಗಿರುವುದು ಸಿದ್ದರಾಮಯ್ಯನವರ ಓಡಾಟವನ್ನು ನಿಯಂತ್ರಿಸುವುದಕ್ಕೆ ಎಂಬುದು ಗಾಳಿ ಸುದ್ದಿ