ಸಿದ್ದಾಪುರದಲ್ಲಿ ಕೆ.ಎಸ್.ಹೆಗಡೆ ಆಸ್ಪತ್ರೆ ಮಾಹಿತಿ ಕೇಂದ್ರ ಉದ್ಘಾಟನೆ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡಜಿಲ್ಲೆಯ ಸಿದ್ದಾಪುರದಲ್ಲಿ ಸ್ಥಳೀಯ ನಿವೃತ್ತ ನೌಕರರ ಸಂಘ,ಗ್ರೀನ್ ವ್ಯಾಲಿ,ಲಯನ್ಸ್ ಕ್ಲಬ್ ಸಹಯೋಗದಲ್ಲಿ
ಮಂಗಳೂರು ದೇರಳಕಟ್ಟೆಯ ಕೆ.ಎಸ್.ಹೆಗಡೆ ಆಸ್ಪತ್ರೆಯ ಮಾಹಿತಿ ಕೇಂದ್ರವನ್ನು ಉದ್ಘಾಟಿಸಲಾಯಿತು.

ಮಾಹಿತಿ ಕೇಂದ್ರವನ್ನು ಕೆ.ಎಸ್.ಹೆಗಡೆ ಆಸ್ಪತ್ರೆಯ ಡಾ.ವಿಕ್ರಮ ಶೆಟ್ಟಿ ಉದ್ಘಾಟಿಸಿದರು.ಸಭಾ ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಆಧುನಿಕ ಜೀವನಶೈಲಿಯಿಂದಾಗಿ ಅನಾರೋಗ್ಯ ಪೀಡಿತರ ಸಂಖ್ಯೆ ಹೆಚ್ಚಾಗುತ್ತಿದೆ ನ್ಮ ಜೀವನಶೈಲಿಯನ್ನು ನಾವೇ ರೂಪಿಸುವ ಮೂಲಕ ನಮ್ಮ ಆರೋಗ್ಯವನ್ನು ನಾವೇ ಕಾಪಾಡಿಕೊಳ್ಳಬೇಕು.
ಇಂದು ನಾವೆಲ್ಲ ಧಾವಂತದ ಜೀವನ ನಡೆಸುತ್ತಿದ್ದೆವೆ ನಮ್ಮ ಜೀವನ ಶೈಲಿ ಒತ್ತಡದಿಂದ ಕೂಡಿದೆ ಹಣಗಳಿಕೆಯ ಹಪಾಹಪಿಗೆ ನಾವು ಒಳಗಾಗುತ್ತಿದ್ದೆವೆ ನಮ್ಮ ಜೀವನ ನಿರ್ವಹಣೆಗೆ ಹಣ ಅವಶ್ಯಕ ಆದರೆ ಹಣವೊಂದೆ ನಮ್ಮ ಜೀವನದ ಭಾಗವಲ್ಲ ಎನ್ನುವ ಅರಿವು ನಮಗಿರಬೇಕು ಸರಳ ಜೀವನ ಶೈಲಿಯನ್ನು ರೂಡಿಸಿಕೊಂಡು ಆರೋಗ್ಯವಂತ ಬದುಕನ್ನು ಬಾಳಬೇಕು. ಇಲ್ಲಿಯ ನಿವೃತ್ತ ನೌಕರರ ಸಂಘ ಅತ್ಯುತ್ತಮ ಕೆಲಸವನ್ನು ಮಾಡುತ್ತಿದೆ ಸರಕಾರದ ಕೆಲಸದಿಂದ ಮಾತ್ರವೇ ನಿವೃತ್ತರಾಗಿದ್ದೆವೆ ಬದುಕಿನಲ್ಲಿ ಇನ್ನೂ ಸಕ್ರೀಯವಾಗಿದ್ದೆವೆ ಎನ್ನುವುದನ್ನು ತೊರಿಸಿಕೊಡುತ್ತಿದ್ದಾರೆ ಹೀಗಾಗಿ ರಚನಾತ್ಮಕವಾದ ಸಮಾಜಮುಖಿ ಕೆಲಸವನ್ನು ಮಾಡುತ್ತಿದ್ದಾರೆ. ಕೆ.ಎಸ್.ಹೆಗಡೆ ಆಸ್ಪತ್ರೆ ಉತ್ತಮ ಧ್ಯೆಯೋದ್ಧೆಶವನ್ನು ಇಟ್ಟುಕೋಂಡಿರುವ ಆಸ್ಪತ್ರೆಯಾಗಿದೆ ಕಷ್ಟದಲ್ಲಿರುವವರಿಗೆ ಪರಿಹಾರವನ್ನು ನೀಡುವಂತಹದ್ದಾಗಿದೆ ಎಂದು ಹೇಳಿದರು.

ನಮ್ಮ ಸರಕಾರಿ ಆಸ್ಪತ್ರೆ ಯಾವುದೇ ಖಾಸಗಿ ಆಸ್ಪತ್ರೆಗಿಂತ ಕಡಿಮೆಯಾಗಿಲ್ಲ ಎಲ್ಲಾ ಸೌಲಭ್ಯವನ್ನು ನೀಡಲಾಗಿದೆ ದೇಶದಲ್ಲಿ ತಾಲೂಕುಮಟ್ಟದ ಆಸ್ಪತ್ರೆಗೆ ಎಲ್ಲಾ ರೀತಿಯ ಸೌಲಭ್ಯ ನೀಡಲಾಗುತ್ತಿದೆ ಹೀಗಾಗಿ ಕೊವಿಡ್‍ನಂತಹ ಸಾಂಕ್ರಾಮಿಕ ರೋಗವನ್ನು ಹತೋಟಿಗೆ ತರಲಾಗಿದೆ ಜನರ ಆರೋಗ್ಯದ ಹಿತದ ದೃಷ್ಟಿಯಿಂದ ಯಶಸ್ವಿನಿ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ ಯೋಜನೆಗಳ ದುರ್ಲಾಭಪಡೆಯುವವರು ಇರುವುದರಿಂದ ಕೆಲವು ನಿಯಮಗಳನ್ನು ಮಾಡಲಾಗುತ್ತದೆ ಆದರೂ ವ್ಯವಸ್ಥೆಯನ್ನು ಸರಳೀಕರಿಸುವ ಬಗ್ಗೆ ಪರ್ಯಾಲೋಚನೆ ಮಾಡಲಾಗುತ್ತಿದೆ ಎಂದು ಕಾಗೇರಿ ಹೇಳಿದರು.

ಮಾಹಿತಿ ಕೇಂದ್ರವನ್ನು ಉದ್ಘಾಟಿಸಿದ ಕೆ.ಎಸ್.ಹೆಗಡೆ ಆಸ್ಪತ್ರೆಯ ಡಾ.ವಿಕ್ರಮ ಶೆಟ್ಟಿ ಮಾತನಾಡಿ, ಕೇವಲ ಹಣಗಳಿಕೆಯೊಂದೆ ನಮ್ಮ ಆಸ್ಪತ್ರೆಯ ಉದ್ದೇಶವಲ್ಲ ಆದಷ್ಟು ಕಡಿಮೆ ಖರ್ಚಿನಲ್ಲಿ ಜನರಿಗೆ ಆರೋಗ್ಯ ಸೇವೆ ನೀಡಬೇಕು ಎನ್ನುವ ಗುರಿ ಇಟ್ಟುಕೊಂಡಿದ್ದೆವೆ ಒಂದುಸಾವಿರ ಹಾಸಿಗೆಯ ಆಸ್ಪತ್ರೆಯಾಗಿದ್ದು ಬಹುತೇಕ ಎಲ್ಲಾ ರೋಗಗಳಿಗೂ ಇಲ್ಲಿ ಉತ್ತಮ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಸರಕಾರದ ಯೋಜನೆಗಳು ಸರಳಿಕರಣಗೊಂಡರೆ ಇನ್ನಷ್ಟು ಜನರಿಗೆ ಉಪಯೋಗವಾಗುತ್ತದೆ ಎಂದು ಹೇಳಿದರು.
ವೇದಿಕೆಯಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ಹೆಗಡೆ,ಗ್ರೀನ್ ವ್ಯಾಲಿ ಸಂಸ್ಥೆಯ ರಾಘವೇಮದ್ರ ಶಾಸ್ತ್ರಿ,ಡಾ.ಶ್ರೀದರ ವೈದ್ಯಕೆ.ಎಸ್.ಹೆಗಡೆ ಆಸ್ಪತ್ರೆಯ ಪ್ರಬಂದಕ ಹೇಮಂತ ಶೆಟ್ಟಿ,ಟಿ.ಎಂ.ಎಸ್. ಅಧ್ಯಕ್ಷ ಆರ್.ಎಂಹೆಗಡೆ ಬಾಳೆಸರ ಉಪಸ್ಥಿತರಿದ್ದರು.

ನಿವೃತ್ತ ನೌಕರರ ಸಂಘದ ಅದ್ಯಕ್ಷ ಸಿ.ಎಸ್.ಗೌಡರ್ ಪ್ರಾಸ್ತಾವಿಕ ಮಾತನಾಡಿದರು. ಲಯನ್ಸ್ ಜಿ.ಜಿ.ಹೆಗಡೆ ಬಾಳಗೋಡ ನಿರೂಪಣೆ ಮಾಡಿದರು.
######
ಗ್ರಾಮ ಒನ್ ಮತ್ತು ಕಂದಾಯ ಇಲಾಖೆ ಮನೆ ಬಾಗಿಲಿಗೆ ಯೋಜನೆಗೆ ಚಾಲನೆ:
ರಾಜ್ಯಸರಕಾರದ ಮಹತ್ವದ ಯೋಜನೆಯಾದ ಗ್ರಾಮ ಒನ್ ಮತ್ತು ಕಂದಾಯ ಇಲಾಖೆ ಮನೆಬಾಗಿಲಿಗೆ ಕಾರ್ಯಕ್ರಮಕ್ಕೆ ಸಿದ್ದಾಪುರ ಬೇಡ್ಕಣಿ ಗ್ರಾಪಂನಲ್ಲಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಚಾಲನೆ ನೀಡಿದರು.

ಕಾರ್ಯಕ್ರಮಕ್ಕೆ ಚಾಲನೆ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ,
ಸರಕಾರವೇ ರೈತರ ಮನೆ ಬಾಗಿಲಿಗೆ ಬಂದು ದಾಖಲಾತಿ ಒದಗಿಸುವ ವಿನೂತನ ಕಾರ್ಯಕ್ರಮ ಇದಾಗಿದೆ. ರೈತರು ಕಛೇರಿಗಳಿಗೆ ಅಲೆದಾಡುವ ಪರಿಸ್ಥಿತಿಯನ್ನು ತಪ್ಪಿಸುವ ಸಲುವಾಗಿ ಅನೇಕ ಸೌಲಭ್ಯಗಳನ್ನು ರೈತರ ಮನೆ ಬಾಗಿಲಿಗೆ ತಲುಪಿಸುವಂತಹ ಪ್ರಯತ್ನವನ್ನು ಸರ್ಕಾರ ಮಾಡುತ್ತಿದೆ
ಮಾರ್ಚ್ 12ರಿಂದ 26ರವರೆಗೆ ಈ ಕಾರ್ಯಕ್ರಮ ಚಾಲ್ತಿಯಲ್ಲಿರುತ್ತದೆ. ಆರ್.ಟಿ.ಸಿ ಜೊತೆಗೆ ಭೂ ನಕ್ಷೆ ದಾಖಲೆಯೂ ಸಿಗುವಂತಹ ವ್ಯವಸ್ಥೆ ಜಾರಿಗೆ ಬರುತ್ತಿದೆ. ಸಿದ್ದಾಪುರ ತಾಲೂಕಿನ ಆರ್.ಟಿ.ಸಿ ಹೊಂದಿರುವ 48,297 ಭೂಮಾಲೀಕರಿಗೂ ಕಂದಾಯ ದಾಖಲೆಯನ್ನು ಪೂರೈಸಲಾಗುತ್ತದೆ. ಸರ್ಕಾರದ ಯಾವುದೇ ಯೋಜನೆಯ ಲಾಭ ಪಡೆಯಬೇಕಾದರೆ ದಾಖಲೆಗಳು ಬಹಳ ಮುಖ್ಯವಾಗಿರುತ್ತವೆ. ರೈತರು ಈ ನಿಟ್ಟಿನಲ್ಲಿ ಗಮನವಹಿಸಬೇಕು ಎಂದರು.

ಇದೇ ಸಂದರ್ಭದಲ್ಲಿ ಸಾಂಕೇತಿಕವಾಗಿ ಕೆಲವು ಭೂಮಾಲೀಕರಿಗೆ ಕಂದಾಯ ದಾಖಲೆಯನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಂತೋಷ್ ಭಂಡಾರಿ, ಶಿರಸ್ತೇದಾರರಾದ ಎನ್.ಐ.ಗೌಡ, ಪಂಚಾಯತ್ ಅಧ್ಯಕ್ಷರಾದ ವಾಸಂತಿ ಹಸ್ಲರ್ ,ಉಪಾಧ್ಯಕ್ಷರಾದ ರೇಣುಕಾ ಪ್ರಕಾಶ್ ನಾಯ್ಕ, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು

About the author

Adyot

Leave a Comment