ಯಲ್ಲಾಪುರದಲ್ಲಿ ಪ್ರಮೋದ ಮುತಾಲಿಕ್ ರಿಂದ ಧರ್ಮಜಾಗೃತಿ ಉಪನ್ಯಾಸ

ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ತಾಲೂಕು ಯುಗಾದಿ ಸಮಿತಿಯವರು ಯುಗಾದಿ ಹಬ್ಬದ ಪ್ರಯುಕ್ತ ಧರ್ಮಜಾಗೃತಿ ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಿದ್ದರು.
ಉಪನ್ಯಾಸ ನೀಡಿದ ಶ್ರೀರಾಮಸೇನೆಯ ಸಂಸ್ಥಾಪಕ ಪ್ರಮೋದ ಮುತಾಲಿಕ,ಹಿಂದೂ ಸಮಾಜದ ಬಾಂದವರು  ತಮ್ಮ ವಯಕ್ತಿಕ ಎಲ್ಲಾ ಕೆಲಸ ಕಾರ್ಯಗಳನ್ನು ಬಿಟ್ಟು ವರ್ಷಕ್ಕೆ ಒಮ್ಮೆಯಾದರೂ ಯುಗಾದಿ ಉತ್ಸವದಲ್ಲಿ ಭಾಗವಹಿಸಬೇಕು. ಬಾಗವಹಿಸದೇ ಇದ್ದವರೂ ಕೂಡ ಇನ್ನು ಮುಂದೆಯಾದರು ಭಾಗವಿಸಿ ಎಂದು ಆಗೃಹಿಸುತ್ತೇನೆ ನೀವು ಭಾಗವಹಿಸದೇ ಇದ್ದರೆ ಬೇರೆ ಯಾರೋ ನಿಮ್ಮ ಮನೆಯೊಳಗಡೆ ನುಗ್ಗುತ್ತಾರೆ ಎಂದು ಎಚ್ಚರಿಸಿದರು.

ಯುಗಾದಿ ಹಬ್ಬವು ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ ಹೊಸವರ್ಷ ಆರಂಭವಾಗುವುದೇ ಯುಗಾದಿಯಿಂದ.
ನಮ್ಮ ದೇಶವನ್ನು 800 ವರ್ಷ ಮುಸ್ಲೀಮರು ಆಳಿದರು 200 ವರ್ಷ ಬ್ರೀಟಿಷರು ಆಳಿದರು. ಆದರೆ 200 ವರ್ಷ ಆಳಿದವರು  ಬ್ರಿಟೀಷರಲ್ಲ ಅವರು ಕ್ರಿಶ್ಚಿಯನ್ನರು.ಆವರು ಹೋಗುವಾಗ ಕೆಲವನ್ನು ಇಲ್ಲಿಯೇ ಬಿಟ್ಟುಹೋಗಿದ್ದಾರೆ. ಅದರಲ್ಲಿ ಡಿಸೆಂಬರ್ 31 ಹೊಸವರ್ಷ ಎಂದು ಕುಡಿದು ತಿಂದು ಹುಡುಗ ಹುಡುಗಿಯರೆನ್ನದೇ ಅಸಭ್ಯವಾಗಿ ಅಶ್ಲೀಲವಾಗಿ ಹೊಸ ವರ್ಷವನ್ನು ಸ್ವಾಗತ ಮಾಡುವ ಕೆಟ್ಟ ಸಂಸ್ಕೃತಿ ಯನ್ನು ಬಿಟ್ಹುಹೋಗಿದ್ದಾರೆ.ನಮ್ಮ ಹಿಂದೂ ದರ್ಮದಲ್ಲಿ ಹೊಸ ವರ್ಷ ಆರಂಭವಾಗುವುದು ಯುಗಾದಿಯಲ್ಲಿ. ಆದ್ದರಿಂದ ಈ ಕ್ರಿಶ್ಚಿಯನ್ನರು ಬಿಟ್ಟು ಹೋದ ಅಸಭ್ಯ, ಅಶ್ಲೀಲ, ವಿಕೃತಿಯ ಹೊಸವರ್ಷಾಚರಣೆಯನ್ನು ಹಿಂದೂಗಳಾದ ನಾವು ಯಾರೂ ಆಚರಣೆ ಮಾಡಬಾರದು ಎಂದು ಹೇಳಿದರು.

ಈ ದಿನ ನಾವು ಬ್ರೀಟೀಷರು ಬಿಟ್ಟು ಹೋದ ಮಮ್ಮಿ, ಡ್ಯಾಡಿ,  ಹಾಯ್, ಬಾಯ್, ಆಂಟಿ ಈವೇ ನಮ್ಮ ಮಕ್ಕಳ ಬಾಯಿಯಲ್ಲಿ ಕೇಳುತ್ತೇವೆ. ಮಮ್ಮಿ ಎಂಬ ಶಬ್ದದ ಅರ್ಥವನ್ನಜ  ಡಿಕ್ಷನರಿ ತೆಗೆದು ನೋಡಿದರೆ ಸತ್ತ ಹೆಣ ಸಂವರಕ್ಷಿಸುವುದು ಅಂತ. ಒಂದು ಆಕಳು ಕರು ಹಾಕಿದಾಗ ಆ ಕರು ಅಂಬಾ ಎನ್ನುತ್ತದೆ ಹೊರತೂ ಮಮ್ಮೀ ಎಂದು ಹೇಳುವುದಿಲ್ಲ. ಹುಟ್ಟು ಹಬ್ಬದ ದಿನ ಎಲ್ಲರೂ ಕೇಕ್ ಮೇಲೆ ಕ್ಯಾಂಡಲ್ ಹಚ್ಚಿ ಅದನ್ನು ಊದಿ ಆಚರಿಸುತ್ತಾರೆ. ಆದರೆ ಅದು ನಮ್ಮ ಸಂಸ್ಕತಿ ಅಲ್ಲ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಹುಟ್ಟಿದ ದಿನದಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ ಪ್ರಸಾದ ಸೇವಿಸುವುದು. ಇವತ್ತು ನಮ್ಮನ್ನು ಆಳಿದ ಕ್ರಿಶ್ಚಿಯನ್ (ಬ್ರಿಟೀಷರು) ನ್ನರು ಬಿಟ್ಟು ಹೋದ ಕೆಟ್ಟ ಸಂಸ್ಕೃತಿಗಳನ್ನೆಲ್ಲಾ ಹಿಂದೂಗಳಾದ ನಾವು ಮೈಗೂಡಿಸಿಕೊಂಡಿದ್ದೇವೆ ಎಂದು ಮುತಾಲಿಕ್ ಹೇಳಿದರು

ಹಿಂದುಗಳಾದ ನಾವು ಎಚ್ಚರಗೊಳ್ಳಬೇಕು. ಬಾಹ್ಯ ಹಾಗೂ ಆಂತರಿಕ ಶತ್ರುಗಳನ್ನು ಧೈರ್ಯದಿಂದ ಎದುರಿಸಬೇಕು ಇಲ್ಲವಾದಲ್ಲಿ ನಮಗೆ ಉಳಿಗಾಲವಿಲ್ಲ ಎಂದು ಎಚ್ಚರಿಸಿದರು

About the author

Adyot

Leave a Comment