ಆದ್ಯೋತ್ ಸುದ್ದಿನಿಧಿ:
ಉತ್ತರಕನ್ನಡ ಜಿಲ್ಲೆಯ ಅಂಕೋಲಾ ಅಚವೆ ಕುಂಟಗಣಿಯಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮವಾಸ್ತವ್ಯ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಂದಾಯ ಸಚೀವ ಆರ್.ಅಶೋಕ ಮಾತನಾಡಿ,ಅರ್ಹ ಫಲಾನುಭವಿಗಳಿಗೆ ನೀಡಲಾಗುವ ವಿವಿಧ ಪಿಂಚಣಿಗೆ ಇನ್ನು ಮುಂದೆ ಶಾಸಕರ,ಸಂಸದರ ಶಿಪಾರಸ್ಸು ಪತ್ರದ ಅವಶ್ಯಕತೆ ಇಲ್ಲ ಕೇವಲ ಒಂದು ಫೋನ್ ಕರೆ ಮಾಡುವುದರ ಮೂಲಕ ಪಿಂಚಣಿ ಹಣ ದೊರಕುವ ವ್ಯವಸ್ಥೆ ಮಾಡಲಾಗುವುದು.ಜಿಲ್ಲೆಯ ಪ್ರಮುಖ ಸಮಸ್ಯೆಯಾದ ಇ-ಸ್ವತ್ತು ಹಾಗೂ ಅರಣ್ಯ ಅತಿಕ್ರಮಣ ಸಮಸ್ಯೆಯನ್ನು ಇನ್ನು ಕೆಲವೇ ದಿನಗಳಲ್ಲಿ ಬಗೆಹರಿಸಲಾಗುವುದು ಎಂದು ಘೋಷಿಸಿದರು.
ಇಲ್ಲಿಯವರೆಗೆ ಜನರು ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಡಿ.ಸಿ. ಎ.ಸಿ. ಎಂದು ಕಚೇರಿಯಿಂದ ಕಚೇರಿಯವರೆಗೆ ಅಲೆಯ ಬೇಕಿತ್ತು ಈ ಅಲೆತ ತಪ್ಪಿಸಲು ಗ್ರಾಮ ವಾಸ್ತವ್ಯ ಕಾರ್ಯಕ್ರಮ ಮಾಡಲಾಗುತ್ತಿದೆ. ಪ್ರಜೆಗಳೇ ದೇವರು ಎಂದು ಚುನಾವಣೆಯ ಸಮಯದಲ್ಲಿ ಹೇಳುತ್ತೆವೆ ನಂತರ ಪ್ರಜೆಗಳು ಅಲೆಯುವಂತೆ ಮಾಡುತ್ತೆವೆ ಇವೆಲ್ಲವನ್ನು ತಪ್ಪಿಸಲು ಇಂತಹ ಮಹತ್ವದ ಕಾರ್ಯಕ್ರಮ ಮಾಡಲಾಗುತ್ತಿದೆ ಎಂದು ಅಶೋಕ ಹೇಳಿದರು.
ಉಸ್ತುವಾರಿ ಸಚೀವ ಕೋಟಾ ಶ್ರೀನಿವಾಸ ಪೂಜಾರಿ,ಗ್ರಾಮ ವಾಸ್ತವ್ಯ ಉತ್ತಮ ಕಾರ್ಯಕ್ರಮವಾಗಿದ್ದು ಸಾರ್ವಜನಿಕರಿಗೆ ಅನುಕೂಲಕರವಾಗಿದೆ.ಉ.ಕ.ಜಿಲ್ಲೆಯಲ್ಲಿವಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದ್ದು ಈ ಬಗ್ಗೆ ಕಾರ್ಯೋನ್ಮುಖರಾಗಬೇಕು ಎಂದುವಹೇಳಿದರು.
ಕಾರ್ಮಿಕ ಸಚೀವ ಶಿವರಾಮ ಹೆಬ್ಬಾರ ಮಾತನಾಡಿ,ಕೊವಿಡ್ ನಂತಹಬಸಮಯದಲ್ಲಿ ಕೇಂದ್ರವಮತ್ತು ರಾಜ್ಯ ಸರಕಾರಗಳು ಜನರ ನೆರವಿಗೆ ಬಂದಿದ್ದು 130 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ.ಜಿಲ್ಲೆಯ ಅರಣ್ಯ ಅತಿಕ್ರಮಣ ಸಮಸ್ಯೆ ಹಾಗೂ ಇ- ಸ್ವತ್ತಿನ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕುವಂತೆ ಮಾಡಬೇಕುವೆಂದು ಮನವಿ ಮಾಡಿದರು.
ಶಾಸಕರಾದ ರೂಪಾಲಿ ನಾಯ್ಕ,ದಿನಕರ ಶೆಟ್ಟಿ,ವಿಧಾನಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಭಾಗವಹಿಸಿದ್ದರು.